Site icon Vistara News

Vaishnavi Gowda | ವೈಯಕ್ತಿಕ ಜಂಜಾಟ ಮರೆತು ಟ್ಯಾಟೂ ಹಾಕಿಸಿಕೊಂಡ ವೈಷ್ಣವಿ ಗೌಡ: ಏನಿದರ ಅರ್ಥ?

Vaishnavi Gowda (tatto meaning)

ಬೆಂಗಳೂರು : ನಟಿ ವೈಷ್ಣವಿ ಗೌಡ (Vaishnavi Gowda) ಅವರು ವೈಯಕ್ತಿಕ ಜಂಜಾಟ ಮರೆತು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಂಡಿರುವ ಖುಷಿಯಲ್ಲಿ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ ವೈಷ್ಣವಿ.

ಆಡಿಯೊ ಬಂದಾಗಿನಿಂದ ವೈಷ್ಣವಿ ಗೌಡ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಮಗಳು ತುಂಬಾ ನೊಂದುಕೊಂಡಿದ್ದಾಳೆ. ಅವಳು ಅದರಿಂದ ಆಚೆ ಬರಲು ಸಾಕಷ್ಟು ಸಮಯ ಬೇಕು. ನಡೆದಿರುವ ಘಟನೆಯನ್ನು ಇಷ್ಟು ಬೇಗ ಅವಳು ಮರೆಯಲು ಸಾಧ್ಯವಿಲ್ಲ ಎಂದು ವೈಷ್ಣವಿ ತಾಯಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ವೈಷ್ಣವಿ ಗೌಡ ಅವರು ತಮ್ಮ ಎಡಗೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ʻʻಇದು ನನ್ನ ಮೊದಲ ಟ್ಯಾಟೂ ಅನುಭವ” ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ ವೈಷ್ಣವಿ.

‘ಟ್ಯಾಟೂ ಹೆಸರು -ದಿ ರೈಸಿಂಗ್‌ ವುಮೆನ್‌ ಸಿಂಬಾಲ್‌ʼ ಇದರ ಅರ್ಥ ಡಿವೈನ್ ಫೀಮೆಲ್ ಎನರ್ಜಿ (ಚಂದ್ರ) ಮತ್ತು ಡಿವೈನ್‌ ಪುರುಷ ಶಕ್ತಿ (ಸೂರ್ಯ) ಸೇರಿಕೊಂಡು ಸೃಷ್ಟಿ ಮಾಡುವ ಡಿವೈನ್ ಯೂನಿಯನ್ ವಿತ್ ಸ್ಪಿರಿಟ್. ಎತ್ತರಕ್ಕೆ ಬೆಳೆದು ಜೀವನದಲ್ಲಿ ಮುಂದೆ ನಡೆಯಲು ಇದೊಂದು ದಾರಿ’ ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Vaishnavi Gowda | ನಿಶ್ಚಿತಾರ್ಥ ಮುರಿದುಕೊಂಡ ನಟಿ ವೈಷ್ಣವಿ ಗೌಡ : ನಟಿ ಹೇಳಿದ್ದೇನು?

ಕೆಲವು ದಿನಗಳ ಹಿಂದೆ ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ಹಾರ ಬದಲಾಯಿಸಿಕೊಂಡು ಸ್ವೀಟ್ ತಿನ್ನಿಸುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗಿತ್ತು. ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಎಲ್ಲೆಡೆ ಹರಿದಾಡಲು ಆರಂಭಿಸಿದ್ದಾಗ ‘ಇದು ನಿಶ್ಚಿತಾರ್ಥವಲ್ಲ ತಪ್ಪು ಮಾಹಿತಿ ಹರಡುವುದು ಬೇಡ. ನಮ್ಮ ಪರ್ಸನಲ್ ಲೈಫ್‌ಗೆ ಸ್ಪೇಸ್‌ ಕೊಡಿ’ ಎಂದು ವೈಷ್ಣವಿ ಪೋಸ್ಟ್‌ ಹಾಕಿದ್ದರು. 

ಇದನ್ನೂ ಓದಿ | ವೈಷ್ಣವಿ ಗೌಡ ಜತೆ ಎಂಗೇಜ್‌ಮೆಂಟ್ ಆಗಿಲ್ಲ: ನಟಿಯ ವೈರಲ್‌ ಆಡಿಯೋ ಬಳಿಕ ಸ್ಪಷ್ಟನೆ ನೀಡಿದ ನಟ ವಿದ್ಯಾಭರಣ್‌

Exit mobile version