Site icon Vistara News

Vaishnavi Gowda |ʻʻಮಗಳ ಮೇಲೆ ಆಪಾದನೆ ಮಾಡಿದರೆ ಕಮಿಷನರ್‌ವರೆಗೂ ಹೋಗುತ್ತೇವೆʼʼ: ವೈಷ್ಣವಿ ಪೋಷಕರು

Vaishnavi Gowda

ಬೆಂಗಳೂರು: ನಟಿ ವೈಷ್ಣವಿ ಗೌಡ (Vaishnavi Gowda) ಅವರ ನಿಶ್ಚಿತಾರ್ಥ ವಿಷಯ ನಾನಾ ರೂಪಗಳನ್ನು ಪಡೆದುಕೊಳ್ಳುತ್ತಿದೆ. ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ಇಬ್ಬರೂ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದು, ಅದು ನಿಶ್ಚಿತಾರ್ಥ ಅಲ್ಲ, ಕೇವಲ ಹಣ್ಣು ಕಾಯಿ ಇಡುವ ಶಾಸ್ತ್ರ ಎಂದು ಸ್ಪಷ್ಟ ಪಡಿಸಿದ್ದಾರೆ. ಇದರ ಬೆನ್ನಲೇ ವೈಷ್ಣವಿ ಅವರ ತಂದೆ ತಾಯಿ ಮಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿದ್ಯಾಭರಣ್ ತಾಯಿ ʻʻನನ್ನ ಮಗ ಕೆಟ್ಟವನು ಅಲ್ಲ. ಆಡಿಯೊ ಹಿಂದೆ ಯಾರು ಇದ್ದಾರೆ ಎಂಬದು ತಿಳಿದುಕೊಳ್ಳಬೇಕು. ಸಮಯ ಕೊಡಿʼʼಎಂದು ಹೇಳಿದ್ದಾರೆ. ಇತ್ತ ವೈಷ್ಣವಿ ಗೌಡ ಅವರ ಪೋಷಕರು ʻʻಆಡಿಯೊದಲ್ಲಿ ಇರುವ ಹುಡುಗಿ ನಮ್ಮನ್ನು ಸಂಪರ್ಕಿಸಿಲ್ಲ. ನಮ್ಮ ಮಗಳ ಬಗ್ಗೆ ಕೆಟ್ಟದಾಗಿ ನಿಂದಿಸಿದರೆ ಆಗ ಕಂಪ್ಲೇಂಟ್ ಕೊಡುತ್ತೇವೆ. ಈಗ ಕೊಡುವ ಅವಶ್ಯಕತೆ ಇಲ್ಲ. ನೆಗೆಟಿವ್ ಆಗಿ ನನ್ನ ಮಗಳ ಮೇಲೆ ಯಾರಾದರೂ ಆಪಾದನೆ ಮಾಡಿದರೆ ಕಮಿಷನರ್ ಲೆವೆಲ್‌ವರೆಗೂ ಹೋಗುತ್ತೇವೆ. ವೈಷ್ಣವಿ ಫ್ಯಾನ್ಸ್ ಬೇಜಾರು ಮಾಡಿಕೊಳ್ಳಬೇಡಿ. ನನ್ನ ಮಗಳು ಸರಿಯಾದ ನಿರ್ಧಾರ ತಗೆದುಕೊಳ್ಳುತ್ತಾಳೆ ಎಂಬ ನಂಬಿಕೆ ನಮಗಿದೆ . ಇದೇ ನವೆಂಬರ್‌ ೧೧ ರಂದು ಫ್ಯಾಮಿಲಿ ಮಾತುಕತೆ ಆಯಿತು. ಅವತ್ತು ಹೆಣ್ಣು ನೋಡುವ ಕಾರ್ಯಕ್ರಮ ಇತ್ತು. ಮುಂದಿನ ಭಾನುವಾರ ನಾವು ಹೋಗಬೇಕಿತ್ತು. ಕಾರಣಾಂತರದಿಂದ ಹೋಗಲಿಲ್ಲ. ಮೊದಲು ಮದುವೆ ಪ್ರಸ್ತಾಪ ಮಾಡಿದ್ದು ವಿದ್ಯಾಭರಣ್‌ ಫ್ಯಾಮಿಲಿ. ತನ್ನ ಬಾಳಲ್ಲಿ ಹೀಗೆ ನಡೆಯುತ್ತೆ ಎಂದು ವೈಷ್ಣವಿ ಅಂದುಕೊಂಡಿರಲಿಲ್ಲʼʼಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Vaishnavi Gowda | ʻಸಾಕ್ಷಿ ಇಲ್ಲದೆ ಹೇಗೆ ಆಡಿಯೊ ನಂಬೋದು? ವಿದ್ಯಾಭರಣ್‌ ಡೀಸೆಂಟ್‌ ಹುಡುಗʼ: ವೈಷ್ಣವಿ ತಾಯಿ

ಆಗಿದ್ದೇನು?
ನವೆಂಬರ್‌ 25ರಂದು ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್‌ ಹಾರ ಹಾಕಿಕೊಂಡು ಕುಟುಂಬಸ್ಥರ ಜತೆಗೆ ನಿಂತಿರುವ ಫೋಟೋ ವೈರಲ್ ಆಗಿತ್ತು. ಇದಾದ ಕೂಡಲೇ ವಿದ್ಯಾಭರಣ್ ತಮಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ನಟಿಯೊಬ್ಬರು ಆಡಿಯೊ ಹರಿಬಿಟ್ಟಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ವಿದ್ಯಾಭರಣ್‌ ಅವರು ವೈಷ್ಣವಿಗೂ ತಮಗೂ ಎಂಗೇಜ್‌ಮೆಂಟ್‌ ಆಗಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ವೈಷ್ಣವಿ ಗೌಡ ಅವರು ಕೂಡ ʻತಾವು ಈ ವಿಚಾರವನ್ನು ಇಲ್ಲಿಗೇ ಮುರಿದುಕೊಂಡಿದ್ದೇವೆʼ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Vaishnavi Gowda | ನಿಶ್ಚಿತಾರ್ಥ ಮುರಿದುಕೊಂಡ ನಟಿ ವೈಷ್ಣವಿ ಗೌಡ : ನಟಿ ಹೇಳಿದ್ದೇನು?

Exit mobile version