ಬೆಂಗಳೂರು: `ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಹಿರಿಯ ನಟ ದತ್ತಣ್ಣ ಏಪ್ರಿಲ್ 9ರಂದು ಅತಿಥಿಯಾಗಿ ಭಾಗವಹಿಸಿದ್ದರು. ಬಾಲ್ಯದ ನೆನಪುಗಳು, ಶಿಕ್ಷಣ , ಸಿನಿ ಜರ್ನಿ ಬಗ್ಗೆ ಹೇಳಿಕೊಂಡರು. ಅರಲ್ಲಿಯೂ ತಮ್ಮ ಸಿನಿ ಜರ್ನಿಯಲ್ಲಿ ಒಂದು ಸಿನಿಮಾ ತನ್ನ ಕಪ್ಪು ಚುಕ್ಕೆ ಆಗಿತ್ತು ಎಂದು ಹೇಳಿಕೊಂಡರು.
ಸುಮಾರು ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ದತ್ತಣ್ಣ ಬಹುತೇಕ ಸಿನಿಮಾಗಳಲ್ಲಿ ಗಂಭೀರ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದರೂ ಅದು ಸಹ ಶುದ್ಧ ಹಾಸ್ಯದ ಪಾತ್ರಗಳಷ್ಟೆ. ನೀರ್ದೋಸೆಯಲ್ಲಿ (Neer Dose) ದತ್ತಾತ್ರೆಯ ಹೆಸರಿನ ಪೋಲಿ ತಾತನ ಪಾತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾ ನಿರ್ದೇಶನ ಮಾಡಿದ ವಿಜಯ ಪ್ರಸಾದ್, ಆ ಕತೆಯನ್ನು ಹೇಳಿದಾಗ ಕತೆ ಚೆನ್ನಾಗಿದೆ. ಆದರೆ ಸಂಭಾಷಣೆ ಚೆನ್ನಾಗಿಲ್ಲ, ಜಾಸ್ತಿ ಪೋಲಿ ಸಂಭಾಷಣೆಗಳಾದವು ಬೇಡ ಎಂದಿದ್ದರಂತೆ. ಆದರೂ ನಿರ್ದೇಶಕರ ಪ್ರೀತಿಗೆ ಆ ಸಿನಿಮಾ ಒಪ್ಪಿಕೊಂಡ ದತ್ತಣ್ಣ ಟ್ರೈಲರ್ ನೋಡಿದಾಗ ವಿಜಯ್ ಪ್ರಸಾದ್ ಅವರಿಗೆ ಬೈಯುತ್ತಾರೆ. ನನ್ನ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ ಎಂದರು ದತ್ತಣ್ಣ. ಸಿನಿಮಾ ಬಿಡುಗಡೆಯಾದ ಬಳಿಕವೇ ದತ್ತಣ್ಣ ಅವರ ಕೋಪ ತಣ್ಣಗಾಗಿದ್ದು ಎಂದರು.
ಇದನ್ನೂ ಓದಿ: Weekend With Ramesh: ಡಾ. ಸಿ ಎನ್ ಮಂಜುನಾಥ್‌ಗೆ ಸಹೃದಯರ ನಮನ, ಹೆತ್ತವರನ್ನು ನೆನೆದು ಭಾವುಕರಾದ ದತ್ತಣ್ಣ!
ಶೋಗೆ ದತ್ತಣ್ಣ ಜತೆ ಕೆಲಸ ಮಾಡಿದ್ದ ನಿರ್ದೇಶಕ ಲಿಂಗದೇವ್ರ, ಪಿ ಶೇಷಾದ್ರಿ ಅವರು ಸಹ ಆಗಮಿಸಿದ್ದರು. ಪಿ ಶೇಷಾದ್ರಿ ಅವರು ಮಾತನಾಡಿ ʻʻನಮ್ಮ ನಿಮ್ಮ ಸ್ನೇಹಕ್ಕೆ 33 ವರ್ಷಗಳು ತುಂಬಿವೆ. ಮೊದಲ ಚಿತ್ರದ ಚಿತ್ರಕಥೆನ್ನು ಕೇಳಲು ನೀವು ಬಂದಿದ್ದೀರಿ. ದತ್ತಣ್ಣ ಒಂದೇ ಸಾಲಿನಲ್ಲಿ ನಾನು ಕತೆ ಹೇಳಬೇಕಿತ್ತು. ಕತೆಯನ್ನು ಎಷ್ಟು ಸರಳವಾಗಿ ಹೇಳಲು ಸಾಧ್ಯವೋ ಅಷ್ಟು ಸರಳವಾಗಿ ಅದನ್ನು ತೆರೆಗೆ ತರಲು ಸಾಧ್ಯ ಎಂಬುದು ಅವರ ನಂಬಿಕೆʼʼಎಂದರು.