ಬೆಂಗಳೂರು: ವಿಕೇಂಡ್ ವಿತ್ ರಮೇಶ್ ಶೋದಲ್ಲಿ (Weekend With Ramesh) ಈ ವಾರ ಹಿರಿಯ ನಟ ಅವಿನಾಶ್ ಹಾಗೂ ಮಂಡ್ಯ ರಮೇಶ್ ಭಾಗಿಯಾಗಲಿದ್ದಾರೆ. ಜೀ ವಾಹಿನಿ ಹಲವಾರು ಪ್ರೋಮೊಗಳನ್ನು ಹಂಚಿಕೊಂಡಿದ್ದು, ಅವಿನಾಶ್ ಅವರು ಇಂಗ್ಲಿಷ್ ಭಾಷೆಯನ್ನೇ ಗೆದ್ದ ರೋಚಕ ಕಥೆಯನ್ನು ವಿವರಿಸಿದ್ದಾರೆ.
ಇಂಗ್ಲಿಷ್‌ನಲ್ಲಿ ಪೋಸ್ಟ್ ಗ್ರಾಜುಯೇಟ್ ಮಾಡಿದ್ದು ಯಾಕೆಂದು ವಿವರಿಸಿದ ಅವಿನಾಶ್, ‘ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಯಾರದ್ದೋ ಮದುವೆಗೆ ಹೋಗಿದ್ದೆ, ಅಲ್ಲಿ ಹೆಸರೇನು ಎಂದು ಕೇಳಿದರು. ಅದು ಗೊತ್ತಿರೋದು ಅಲ್ಲವೇ ಉತ್ತರ ಕೊಟ್ಟೆ. ನಂತರ ವೇರ್ ಆರ್ ಯು ಪುಟ್ ಅಪ್ ಎಂದು ಕೇಳಿದರು. ನನಗೆ ಅರ್ಥವೇ ಆಗಲಿಲ್ಲ. ನನಗೆ ಅದು ತುಂಬಾ ಅವಮಾನವಾಯ್ತು. ಅಕ್ಕ ಕೂಡ ನನ್ನ ಜತೆಯಲ್ಲಿಯೇ ಇದ್ದಳು. ಇಂಗ್ಲಿಷ್ ಕಲಿಬೇಕೆಂದು ನಾನು ಡಿಗ್ರಿಯಲ್ಲಿ ಇಂಗ್ಲಿಷ್ ತೆಗೆದುಕೊಂಡು, ಬಳಿಕ ಎಂಎ ಇಂಗ್ಲಿಷ್ ಮಾಡಿದೆʼʼ ಎಂದರು. ಆಗ ರಮೇಶ್ ಅರವಿಂದ್ ಮಾತನಾಡಿ, ‘ಇಂಗ್ಲಿಷ್ ಲೆಕ್ಚರ್ ಕೂಡ ಆದ್ರಿ, ಇಂಗ್ಲಿಷ್ ನಾಟಕ ಮಾಡಿ ಎಲ್ಲಾ ರಿವೇಂಜ್ ತೆಗೆದುಕೊಂಡಿದ್ದೀರಾ’ ಎಂದು ಹೇಳಿದರು.
ಇದನ್ನೂ ಓದಿ: Weekend With Ramesh: ಮನೆ ಮಗ ದೇವರು ಇವರಿಗೆ; ವಿಶೇಷ ಚೇತನ ಮಗನ ಕುರಿತು ಮಾಳವಿಕಾ ಭಾವುಕ!
ಯು ಆರ್ ಅನಂತ ಮೂರ್ತಿ ಅವರನ್ನು ನೆನೆದೆ ಅವಿನಾಶ್
ಮಾನಸ ಗಂಗೋತ್ರಿಯಲ್ಲಿ ಎಂಎ ಓದುವಾಗ ಅವಿನಾಶ್ ಅವರಿಗೆ ಪ್ರೊಫೆಸರ್ ಆಗಿದ್ದವರು ಯುಆರ್ ಅನಂತಮೂರ್ತಿ. ಅವರ ಬಗ್ಗೆ ಅವಿನಾಶ್ ಅವರು ಮಾತನಾಡಿ ʻʻಅವರು ಅದ್ಭುತವಾದ ಟೀಚರ್. ಇಂಗ್ಲೀಷ್ ಎಂಎ ಕ್ಲಾಸ್‌ನಲ್ಲಿ ಕನ್ನಡದಲ್ಲಿ ಪಾಠ ಮಾಡುತ್ತಿದದ್ದು ಇವರೊಬ್ಬರೇ. ಇಂಗ್ಲಿಷ್ ಕ್ಲಾಸ್‌ನಲ್ಲಿ ತುಂಬ ಕನ್ನಡ ಮಾತನಾಡುತ್ತಿದ್ದರು. ಅವರು ಹೇಳ್ತಾ ಇದ್ದ ಕಾರಣ ಇದು ಇಂಗ್ಲಿಷ್ ಭಾಷೆಯಲ್ಲ, ಇಂಗ್ಲಿಷ್ ಸಾಹಿತ್ಯ ಎಂದು. ಭಾಷೆ ಬೇರೆ ಸಾಹಿತ್ಯ ಬೇರೆ. ಯಾವುದೋ ಒಂದು ಕವಿತೆಯನ್ನೋ ನಾವು ಓದಿ ಗೆಸ್ ಮಾಡಬೇಕಿತ್ತು. ಯಾರು ಬರೆದಿದ್ದು ಏನು ಎಂದು ಹೇಳಬೇಕಿತ್ತು. ಅದ್ಭುತವಾದ ವಿಮರ್ಶೆ ಮಾಡುತ್ತಿದ್ದರು. ಅಕ್ಕಮಹಾದೇವಿ ಅವರ ಸಾಹಿತ್ಯವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಯಾರ ಸಾಹಿತ್ಯ ಎಂದು ಕೇಳುತ್ತಿದ್ದರು’ ಎಂದು ಹೇಳಿದರು.