ಬೆಂಗಳೂರು: ʻವೀಕೆಂಡ್ ವಿತ್ ರಮೇಶ್ʼ ಶೋದಲ್ಲಿ (Weekend With Ramesh) ಈ ವಾರ, ಲಕ್ಷಾಂತರ ಜನಕ್ಕೆ ಸ್ಫೂರ್ತಿ ತುಂಬಿದ ಡಾ. ಗುರುರಾಜ ಕರಜಗಿ (Gururaj Karajagi) ಹಾಗೂ ಸಿಹಿಕಹಿಯಂತೆ ಮನರಂಜನೆ ಕೊಟ್ಟ ಚಂದ್ರು (Sihi Kahi Chandru) ಅವರು ಸಾಧಕರ ಕೆಂಪು ಕುರ್ಚಿಯನ್ನು ಅಲಂಕರಿಸಲಿದ್ದಾರೆ. ಈಗಾಗಲೇ ಜೀ ವಾಹಿನಿ ಪ್ರೊಮೊ ಹಂಚಿಕೊಂಡಿದೆ. ವೇದಿಕೆಯಲ್ಲಿ ಹಿರಿಯ ಕಲಾವಿದ ಎಂ ಎಸ್ ಉಮೇಶ್ ಕೂಡ ಭಾಗಿಯಾಗಿದ್ದರು.
ಶಿಕ್ಷಣ ತಜ್ಞರು ಡಾ. ಗುರುರಾಜ ಕರಜಗಿ
ಶಿಕ್ಷಣ ತಜ್ಞರು ಆಗಿರುವ ಡಾ. ಗುರುರಾಜ ಕರಜಗಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಈಗ ಸೃಜನಶೀಲ ಅಧ್ಯಾಪನ ಕೇಂದ್ರದ (ACT) ಅಧ್ಯಕ್ಷರಾಗಿದ್ದಾರೆ. 22ಕ್ಕೂಹೆಚ್ಚು ಸಂಶೋಧನಾ ಲೇಖನಗಳನ್ನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ತಮ್ಮ ಧನಾತ್ಮಕ ಚಿಂತನೆಗಳು, ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಬರಹಕ್ಕೆ ಮತ್ತು ಉಪನ್ಯಾಸಗಳಿಗೆ ಭಾರತ ಮತ್ತು ವಿದೇಶಗಳಲ್ಲೂ ಹೆಚ್ಛು ಪರಿಚಿತರು. ಎಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದವರು, ಅಂಕಣಕಾರರು ಕೂಡ ಹೌದು.
ಸಿಹಿಕಹಿಯಂತೆ ಮನರಂಜನೆ ಕೊಟ್ಟ ಚಂದ್ರು
ಸಿಹಿ ಕಹಿ ಚಂದ್ರು ಅವರ ನಿಜವಾದ ಹೆಸರು ಚಂದ್ರಶೇಖರ್. ಅವರ ಅಡುಗೆ ಟಿವಿ ಶೋ ʻಬೊಂಬಾಟ್ ಭೋಜನʼ ದೊಡ್ಡ ಯಶಸ್ಸನ್ನು ಹೊಂದಿದೆ. ಹಾಸ್ಯನಟ ಮತ್ತು ಪೋಷಕ ನಟರಾಗಿ ಅನೇಕ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಬ್ಯಾಂಕ್ ಜನಾರ್ದನ್ ಮತ್ತು ಉಮಾಶ್ರೀ ಅವರ ಹಾಸ್ಯ ದೃಶ್ಯಗಳಿಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ: Weekend With Ramesh: ಅವಿನಾಶ್‌ರನ್ನು ಅಟ್ಟಿಸಿಕೊಂಡು ಬಂದಿದ್ಯಾಕೆ ವಿಷ್ಣು ಫ್ಯಾನ್ಸ್? ಬದುಕಿನ ಕ್ಷಣಗಳನ್ನು ಹಂಚಿಕೊಂಡ ನಟ!
ಜೀ ವಾಹಿನಿ ಪ್ರೊಮೊ
1990ರ ಚಲನಚಿತ್ರ ʻಗಣೇಶನ ಮದುವೆಯಲ್ಲಿʼ ನಿರ್ವಹಿಸಿದ ಮಾತ್ರ ಇಂದಿಗೂ ನೆನಪುಳಿಯುವಂತದ್ದು. ನಿರ್ದೇಶಕರಾಗಿ, ಚಂದ್ರು ಕಿರುತೆರೆಯ ʻಸಿಲ್ಲಿ ಲಲ್ಲಿʼ ಮತ್ತು ʻಪಾಪ ಪಾಂಡುʼ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. 2017ರಲ್ಲಿ ಬಿಗ್‌ಬಾಸ್ ಸೀಸನ್ 5ರ ಸ್ಪರ್ಧಿಯಾಗಿದ್ದರು. ʻಓ ಮನಸೇʼ , ʻಪುಟ್ಟಕ್ಕನ ಹೈವೇʼ, ʻಶ್ರೀ ಹರಿಕಥೆʼ, ʻಮಿಲನʼ, ʻತೆನಾಲಿ ರಾಮʼ, ʻಗೌರಿ ಗಣೇಶʼ, ʻಮತದಾನ ಹೀಗೆʼ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಈಗಾಗಲೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ರಮ್ಯಾ, ಪ್ರಭುದೇವ, ದತ್ತಣ್ಣ, ಮಂಡ್ಯ ರಮೇಶ್- ಹಿರಿಯ ನಟ ಅವಿನಾಶ್, ಡಾ. ಸಿ ಎನ್ ಮಂಜುನಾಥ್ ಅವರು ಬಂದು ತಮ್ಮ ಸಾಧನೆಯ ಪ್ರಯಾಣವನ್ನು ಬಿಚ್ಚಿಟ್ಟಿದ್ದಾರೆ. ಇದೀಗ 6ನೇ ವಾರಕ್ಕೆ ಅತಿಥಿಗಳಾಗಿ ಡಾ. ಗುರುರಾಜ ಕರಜಗಿ ಹಾಗೂ ಸಿಹಿಕಹಿ ಚಂದ್ರು ಬರಲಿದ್ದಾರೆ.