Site icon Vistara News

Weekend With Ramesh: ತಂದೆಯ ಸಾಥ್‌, ಮೈಕಲ್‌ ಜಾಕ್ಸನ್‌ ಪ್ರಭಾವ, ಮಗನ ನೆನಪು, ಎಲ್ಲದರ ಕಥೆ ಬಿಚ್ಚಿಟ್ಟ ಪ್ರಭುದೇವ!

Weekend With Ramesh Father's companion, Michael Jackson's influence, son's memory, Prabhudeva revealed the story of everything!

ಬೆಂಗಳೂರು: ಏಪ್ರಿಲ್‌ 3 ಪ್ರಭುದೇವ ಅವರ ಜನುಮದಿನ. ಏಪ್ರಿಲ್‌ 2 ʻವೀಕೆಂಡ್‌ ವಿತ್‌ ರಮೇಶ್‌ʼ (Weekend With Ramesh) ಶೋನಲ್ಲಿ ಪ್ರಭುದೇವ ಅವರ ಜನುಮದಿನವನ್ನು ಕೇಕ್‌ ಕತ್ತರಿಸುವ ಮೂಲಕ ಆಚರಿಸಿದೆ. ಭಾನುವಾರ ಸಂಚಿಕೆಯಲ್ಲಿ ಪ್ರಭುದೇವ ಅವರ ಕುರಿತಾಗಿ ಹಲವಾರು ಸಿನಿಗಣ್ಯರು ಮೆಚ್ಚುಗೆ ಮಾತುಗಳನ್ನು ಹೇಳಿದರು. ಅಷ್ಟೇ ಅಲ್ಲದೇ ಮಗನನ್ನು ನೆನಪಿಸಿಕೊಂಡು ಭಾವುಕರಾದರು ಪ್ರಭುದೇವ.

ಸಾಥ್‌ ನೀಡಿದ್ದ ತಂದೆ

ಡ್ಯಾನ್ಸ್‌ನಲ್ಲಿ ಚಿಕ್ಕನಿಂದಲೂ ಆಸಕ್ತಿ ಹೊಂದಿದ್ದ ಪ್ರಭುದೇವ ಅವರಿಗೆ ಓದಿನಲ್ಲಿ ಸದಾ ಹಿಂದೆ. ಕೆಮಿಸ್ಟ್ರಿ ಅವರ ಕಷ್ಟಕರವಾದ ವಿಷಯ ಆಗಿತ್ತಂತೆ. ಹೀಗಿರುವಾಗ ಪಿಯುಸಿಯಲ್ಲಿ ಪ್ರಭುದೇವ ಫೇಲ್ ಆಗಿಬಿಡುತ್ತಾರೆ. ಅಂದು ಬಹಳ ಭಯದಲ್ಲಿದ್ದ ಪ್ರಭುದೇವ ಮನೆಗೆ ಬಂದರೆ ಅಪ್ಪ ಮನೆಯಲ್ಲಿಯೇ ಇದ್ದಾರೆ. ಫೇಲ್ ಆಗಿ ಭಯದಲ್ಲಿ ರೂಂನಲ್ಲಿ ಕೂತಿದ್ದರಂತೆ ಪ್ರಭು, ಮಗ ಫೇಲ್ ಆಗಿದ್ದಾನೆಂದು ತಿಳಿದ ಮೂಗೂರು ಸುಂದರ್ ಅವರು ನಿಧಾನಕ್ಕೆ ಪ್ರಭು ಇದ್ದ ರೂಮಿಗೆ ಬಂದಿದ್ದಾರೆ. ಏನಾಯ್ತು? ಎಂದು ಕೇಳಿದಾಗ ʻಫೇಲ್ ಆಗಿದ್ದೇನೆʼ ಎಂದರಂತೆ. ಆಗ ಮೂಗುರು ಸುಂದರ್ ಅವರು ಪ್ರಭುದೇವ ಬೆನ್ನನ್ನು ಎರಡು ಬಾರಿ ಮೆತ್ತಗೆ ತಟ್ಟಿ, ʻಪರವಾಗಿಲ್ಲ ನಿನಗೆ ಏನು ಇಷ್ಟವಾಗುತ್ತದೆಯೋ ಅದನ್ನು ಮಾಡುʼ ಎಂದರಂತೆ. ಅಲ್ಲಿಂದ ತನ್ನ ಬದುಕು ಬದಲಾಯಿತು ಎಂದರು ಪ್ರಭುದೇವ.

ಪ್ರಭುದೇವ ಜತೆಗಿನ ಒಟನಾಟ ನೆನೆದ ಪ್ರಕಾಶ್‌ ರೈ

ವೀಕೆಂಡ್‌ ಟೆಂಟ್‌ನಲ್ಲಿ ಪ್ರಕಾಶ್‌ ರೈ ಅವರು ಪ್ರಭುದೇವ ಜತೆಗಿನ ಒಟನಾಟದ ಕುರಿತು ಪ್ರಕಾಶ್‌ ರೈ ಮೆಚ್ಚುಗೆ ಮಾತನ್ನು ಹೇಳಿದರು. ಇದರ ಜತೆ ಪ್ರಭುದೇವ ಜೀವನದಲ್ಲಿ ಆದ ಕಹಿ ಘಟನೆಯನ್ನು ಹೇಳಿದರು. ಪ್ರಭುದೇವ ಅವರ ಮೂರು ಮಕ್ಕಳ ಪೈಕಿ ಹಿರಿ ಮಗ 12 ವರ್ಷದ ವಿಶಾಲ್‌ ಬ್ರೇನ್‌ ಟ್ಯೂಮರ್‌ನಿಂದ 2008ರಲ್ಲಿ ನಿಧನರಾಗುತ್ತಾರೆ. ಆ ಘಟನೆ ನಡೆದ ವೇಳೆ ಪ್ರಕಾಶ್‌ ರಾಜ್‌ ಸಹ ಇವರ ಜತೆಗಿದ್ದರು. ಶೋನಲ್ಲಿ ʻʻಈ ಬಗ್ಗೆ ಏನಾದರೂ ಹೇಳುವುದು ಇದೆಯೇʼʼ ಎಂದು ರಮೇಶ್‌ ಅರವಿಂದ್‌ ಅವರು ಪ್ರಭುದೇವ್‌ ಅವರನ್ನು ಕೇಳುತ್ತಿದ್ದಂತೆ, ಸುಮ್ಮನಾಗಿದ್ದಾರೆ ಪ್ರಭುದೇವ. ಹಾಗೇ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Weekend With Ramesh: ಬಾಲ್ಯದ ಗೆಳೆಯರ ಜತೆ ಆಟಗಳನ್ನು ಆಡಿ ಖುಷಿಪಟ್ಟ ಪ್ರಭುದೇವ; ಇಲ್ಲಿವೆ ಡ್ಯಾನ್ಸ್ ಕಿಂಗ್ ನೆನಪುಗಳು!

ಮೈಕಲ್‌ ಜಾಕ್ಸನ್‌ ನನಗೆ ಆದರ್ಶ

ಪ್ರಭುದೇವ ಅವರು ನೃತ್ಯ ಮಾಡಲು ಮೊದಲ ಕಾರಣವೆಂದರೆ ಥ್ರಿಲ್ಲರ್ ಹೆಸರಿನ ಕ್ಯಾಸೆಟ್. ಡ್ಯಾನ್ಸರ್ ಮೈಕಲ್ ಜಾಕ್ಸನ್ ಅವರ 1982ರ ಸೂಪರ್ ಹಿಟ್ ಆಲ್ಬಂ ಥ್ರಿಲ್ಲರ್. ಬೀಟ್ ಇಟ್ ಸೇರಿದಂತೆ ಹಲವು ಹಾಡುಗಳು ಆ ಆಲ್ಬಂನಲ್ಲಿದ್ದವು. ಅ ಡ್ಯಾನ್ಸ್‌ ನೋಡಿ ಪ್ರಭುದೇವ ಅವರಿಗೆ ಡ್ಯಾನ್ಸ್‌ ಹುಚ್ಚು ಬೆಳೆಯಿತು ಎಂದು ಹೇಳಿಕೊಂಡಿದ್ದಾರೆ. ʻʻಕುಳಿತುಕೊಂಡರೂ, ಎದ್ದರೂ, ಮಲಗಿದರೂ ಡ್ಯಾನ್ಸ್‌ ಮಾಡುತ್ತಿದ್ದೆ. ಕೆಲವೊಮ್ಮೆ ರಾತ್ರಿ 2 ಗಂಟೆಗೆಲ್ಲ ಡ್ಯಾನ್ಸ್‌ ಮಾಡುತ್ತಿದ್ದೆ. ಆಗ ಚಿಕ್ಕವಿನಿದ್ದ ಕಾರಣ ಡ್ಯಾನ್ಸ್‌ನಲ್ಲಿಯ ರೂಲ್ಸ್‌ ಬ್ರೇಕ್‌ ಮಾಡಿ ಹೊಸತು ತರುವ ಮೊನೋಭಾವ ಇತ್ತು. ಈ ವಯಸ್ಸಿಗೆ ನನ್ನ ಹತ್ತಿರ ಖ್ಯಾತಿ ಗಳಿಸಲು ಆಗುತ್ತಿರಲಿಲ್ಲʼʼಎಂದರು. ನೃತ್ಯ ಕಲಿಯುವಾಗಲು ಮಧ್ಯದಲ್ಲಿ ಒಂದೊಂದು ಬ್ರೇಕ್ ಡ್ಯಾನ್ಸ್ ಸ್ಟೆಪ್ಸ್ ಸೇರಿಸಿಬಿಡುತ್ತಿದ್ದದ್ದೆ, ನನ್ನ ಗುರುಗಳು ನನ್ನನ್ನು ಬೈಯ್ಯುತ್ತಿದ್ದರೂ ಆದರೂ ಆ ಅಭ್ಯಾಸ ನನ್ನಿಂದ ಹೋಗುತ್ತಿರಲಿಲ್ಲ’ ಎಂದರು ಪ್ರಭುದೇವ.

Exit mobile version