Site icon Vistara News

Weekend With Ramesh: ‘ವೀಕೆಂಡ್ ವಿತ್‌ ರಮೇಶ್ʼ ಮೊದಲ ಎಪಿಸೋಡ್‌ಗೆ ರಿಷಬ್‌ ಬದಲು ಬೇರೆ ಅತಿಥಿ ಯಾರು?

Weekend With Ramesh first guest

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಮನ ಮೆಚ್ಚಿದ ಶೋ ಎಂದರೆ ‘ವೀಕೆಂಡ್ ವಿತ್‌ ರಮೇಶ್ʼ (Weekend With Ramesh) ಮಾರ್ಚ್‌ 25ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಬಾರಿಯ ಮೊದಲ ಅತಿಥಿ ಆಗಲಿದ್ದಾರೆ ಎನ್ನಲಾಗಿತ್ತು. ಇದೀಗ ಕೆಲವು ಸುದ್ದಿಗಳ ಪ್ರಕಾರ ಮೊದಲ ಎಪಿಸೋಡ್​ಗೆ ರಿಷಬ್ ಶೆಟ್ಟಿಯ ಬದಲಾಗಿ ಕರ್ನಾಟಕದವರೇ ಆದರೂ ಭಾರತದಾದ್ಯಂತ ಹೆಸರು ಮಾಡಿರುವ ಪ್ರಭುದೇವ ಅತಿಥಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಕಾರ್ಯಕ್ರಮದ ಮೊದಲ ಎಪಿಸೋಡ್‌ ಚಿತ್ರೀಕರಣ ಮಾರ್ಚ್‌ 8ರಂದು ಬೆಂಗಳೂರಿನ ಅಬ್ಬಯ‌ ನಾಯ್ಡು ಸ್ಟುಡಿಯೊದಲ್ಲಿ ಪೂರ್ಣಗೊಂಡಿದ್ದು, ಮೈಸೂರು ಮೂಲದ ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರು ಚಿತ್ರೀಕರಣಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

ಕೆಲದಿನಗಳ ಹಿಂದೆ ಜೀ ವಾಹಿನಿ `ವೀಕೆಂಡ್ ವಿತ್‌ ರಮೇಶ್ʼ ಮತ್ತೆ ಬರುತ್ತಿದೆ ಪ್ರೊಮೊ ಪ್ರಸಾರ ಮಾಡಿತ್ತು. ನಟ ರಮೇಶ್‌ ಕೂಡ ಪ್ರೊಮೊ ಹಂಚಿಕೊಂಡಿದ್ದರು. ರಾಧಿಕಾ ಚೇತನ್ ಕೂಡ ಕಾಣಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ವಾಹಿನಿಯು ಪ್ರೊಮೊ ರಿಲೀಸ್ ಮಾಡಿ, “ಸ್ಫೂರ್ತಿದಾಯಕ ಕಥೆಗಳೊಂದಿಗೆ ವೀಕೆಂಡ್‌ಗೆ ಸಾರ್ಥಕತೆ ತುಂಬೋಕೆ ಬರ್ತಿದ್ದಾರೆ ನಿಮ್ಮ ರಮೇಶ್ ಅರವಿಂದ್” ಎಂದು ಹೇಳಿಕೆ ನೀಡಿತ್ತು.

ಇದನ್ನೂ ಓದಿ: Weekend With Ramesh: ‘ವೀಕೆಂಡ್ ವಿದ್‌ ರಮೇಶ್ 5’ ಸೀಸನ್‌ ಮೊದಲ ಅತಿಥಿ ಯಾರು?

2019ರ ಜುಲೈ ತಿಂಗಳಿನಲ್ಲಿ ‘ವೀಕೆಂಡ್ ವಿಥ್‌ ರಮೇಶ್ʼ 4’ ಕಾರ್ಯಕ್ರಮ ಮುಗಿದಿತ್ತು. ಇದಾದ ಬಳಿಕ ಹೊಸ ಸೀಸನ್ ಶುರುವಾಗಿಲ್ಲ. ‘’ವೀಕೆಂಡ್ ವಿತ್‌ ರಮೇಶ್ʼ ’ ಮತ್ತೆ ಯಾವಾಗ ಶುರುವಾಗುತ್ತದೆ ಎಂದು ವೀಕ್ಷಕರು ಕೇಳುತ್ತಲೇ ಇದ್ದಾರೆ. ‘’ವೀಕೆಂಡ್ ವಿತ್‌ ರಮೇಶ್ʼ ’ ಕಾರ್ಯಕ್ರಮದ ಮೊದಲ ಸೀಸನ್‌ 2014ರಲ್ಲಿ ಪ್ರಸಾರ ಕಂಡಿತ್ತು. ಎರಡನೇ ಸೀಸನ್ 2015-16ರಲ್ಲಿ, ಮೂರನೇ ಸೀಸನ್ 2017ರಲ್ಲಿ, 4ನೇ ಸೀಸನ್ 2019ರಲ್ಲಿ ಪ್ರಸಾರವಾಗಿತ್ತು.

Exit mobile version