ಬೆಂಗಳೂರು: ಈ ವಾರ ವೀಕೆಂಡ್ ವಿತ್ ರಮೇಶ್ (Weekend With Ramesh) ಸಾಧಕರ ಸೀಟ್‌ನಲ್ಲಿ ಪ್ರಭುದೇವ ಎರಡನೇ ಅತಿಥಿಯಾಗಿ ಬಂದಿದ್ದರು. ತಮ್ಮ ಬಾಲ್ಯದ ನೆನಪುಗಳನ್ನು, ಹಾಗೇ ವೇದಿಕೆಯಲ್ಲಿ ಹಳೆಯದನೆಲ್ಲ ಮೆಲುಕು ಹಾಕಿದ್ದಾರೆ. ಅಷ್ಟೇ ಅಲ್ಲದೇ ಇಂಡಿಯನ್ ಮೈಕಲ್ ಜಾಕ್ಸನ್ʼ ಅವರಿಗೆ ಹಪ್ಪಳ ಅಂದರೆ ಬಲು ಪ್ರೀತಿ ಎಂದು ಬಾಲ್ಯದ ನೆನಪುಗಳನ್ನು ಸವಿದಿದ್ದಾರೆ.
ದೇಶಕಂಡ ಖ್ಯಾತ ಕೊರಿಯೋಗ್ರಾಫರ್, ನಟ, ನಿರ್ದೇಶಕ ಪ್ರಭುದೇವ ಮಾರ್ಚ್ 1ರ ಎಪಿಸೋಡ್‌ನಲ್ಲಿ ತಾವು ತಿಂಡಿಪೋತರಾಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲಿಯೂ ಪ್ರಭುದೇವ ಅವರಿಗೆ ಉದ್ದಿನ ಹಪ್ಪಳ, ಸಂಡಿಗೆ ಎಂದರೆ ಬಲು ಇಷ್ಟವಂತೆ. ಚಿಕ್ಕವರಿದ್ದಾಗ ಮನೆಯಲ್ಲಿ ಉದ್ದಿನ ಹಪ್ಪಳವನ್ನು ಪೂರ್ತಿ ತಿನ್ನದೇ ಅದರಲ್ಲಿಯೂ ಅರ್ಧ ಉಳಿಸಿ ಸಂಜೆ ಮತ್ತೊಂದು ಹಪ್ಪಳ ಜತೆ ಕೊಡಬೇಕು ಎಂದು ಬುಕ್ ಮಾಡಿ ಇಡುತ್ತಿದ್ದರಂತೆ ಪ್ರಭುದೇವ.
ಪ್ರಭುದೇವ ತಿಂಡಿಪೋತರು
ಪ್ರಭುದೇವ ಅವರು ಚಿಕ್ಕವರಿದ್ದಾಗ ಚೆನ್ನಾಗಿ ತಿನ್ನುತ್ತಿದ್ದರು. ʻʻನಾವು 3 ಜನ, ಒಬ್ಬೊಬ್ಬರಿಗೂ 20 ಇಡ್ಲಿ, 15 ದೋಸೆ, 30 ಪೂರಿ ಬೇಕಿತ್ತು. ಎಲ್ಲರೂ ಹಾಗೇ ತಿನ್ನುತ್ತಿದ್ದೆವು. ನಾನು, ಪ್ರಸಾದ್, ರಾಜು, ನಾಗರಾಜು ಎಲ್ಲರಿಗೂ ಅಷ್ಟಷ್ಟು ಬೇಕೇ ಬೇಕಿತ್ತು. ಇಡ್ಲಿ ಮಾಡುತ್ತಿದ್ದರೆ ಆ ಇಡೀ ಸೆಟ್ ನಂದೇ ಎಂದು ಬುಕ್ ಮಾಡುತ್ತಿದ್ದೆವು. ನಾನು 15 ದೋಸೆ ತಿಂದರೆ, ನಂದಾದ ಮೇಲೆ ಉಳಿದ ರಾಜು 16, ಪ್ರಸಾದ್ 17 ಹೀಗೆ ಎಲ್ಲರೂ ತಿನ್ನುತ್ತಿದ್ದೆವುʼʼಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Weekend With Ramesh: ʻನಾನು ಆಡೋದೇ ಇಲ್ಲ.. ನನ್ನ ಬಾಡಿನೇ ಆಡೋದುʼ ಎಂದ ಪ್ರಭುದೇವ: ಹೇಗಿದೆ ಪ್ರೋಮೊ?
ಪಟಾಕಿ ಎಂದರೆ ಬಲು ಇಷ್ಟ
ತಮ್ಮ ನಟ ನಾಗೇಂದ್ರ ಪ್ರಸಾದ್ ಕೂಡ ವೇದಿಕೆಗೆ ಪಟಾಕಿ ಬಾಕ್ಸ್ ಹಿಡಿದು ತಂದರು. ಪ್ರಭುದೇವ ಅವರಿಗೆ ಬಾಲ್ಯದಿಂದಲೂ ಪಟಾಕಿ ಅಂದರೆ ಇಷ್ಟವಂತೆ. ದೀಪಾವಳಿ ಬಂತೆಂದರೆ ಸಾಕಷ್ಟು ಪಟಾಕಿಗಳನ್ನು ಸಿಡಿಸುತ್ತಿದ್ದ್ದು, ಹಾಗೇ ಪೂರ್ತಿ ರಾತ್ರಿ ಪಟಾಕಿ ಯಾರಾದರೂ ಕದಿಯುತ್ತಾರೋ ಎಂಬ ಭಯದಿಂದ ಅದನ್ನೇ ನೋಡಿಕೊಂಡು ಕಾಯುತ್ತಿದ್ದ ನೆನಪುಗಳ ಬಗ್ಗೆ ಹೇಳಿಕೊಂಡರು.
ಪದ್ಮಶ್ರೀ ಜತೆಗೆ 2 ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. 36 ವರ್ಷಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರುವ ಪ್ರಭುದೇವ ಅವರು 61 ಚಿತ್ರಗಳಲ್ಲಿ ನಟಿಸಿದ್ದಾರೆ, 15 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, 3 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ.