Site icon Vistara News

Weekend With Ramesh: ಸಾಧಕರ ಸೀಟ್‌ನಲ್ಲಿ ಕವಿತೆ, ಚಲನಚಿತ್ರ ಹಾಡುಗಳನ್ನು ಬರೆದ ಸಾಹಿತಿ ಡಾ. ನಾಗೇಂದ್ರ ಪ್ರಸಾದ್‌!

Weekend With Ramesh nagendra prasad Guest

ಬೆಂಗಳೂರು: ಈ ವಾರ ʻವೀಕೆಂಡ್‌ ವಿತ್‌ ರಮೇಶ್‌ʼ ( Weekend With Ramesh) ಶೋದಲ್ಲಿ ಸಾವಿರಾರು ಕವಿತೆಗಳನ್ನು, ಚಲನಚಿತ್ರ ಹಾಡುಗಳನ್ನು ಬರೆದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ ಡಾ. ನಾಗೇಂದ್ರ ಪ್ರಸಾದ್‌ರವರು ಅತಿಥಿಯಾಗಿ ಬರಲಿದ್ದಾರೆ. ಮಂಡ್ಯ ಜಿಲ್ಲೆಯವರಾದ ನಾಗೇಂದ್ರ ಪ್ರಸಾದ್ ಚಿತ್ರರಂಗಕ್ಕೆ ಬಂದು ಎರಡು ದಶಕಗಳಾಗಿವೆ. 2000ರಲ್ಲಿ ಮೊದಲ ಬಾರಿಗೆ ಸಿನಿಮಾ ಒಂದಕ್ಕೆ ಗೀತ ರಚನೆ ಮಾಡಿದ್ದರು. ಆ ನಂತರ ಸಾಲು ಸಾಲು ಕನ್ನಡದ ಅನೇಕ ಹಿಟ್‌ ಸಿನಿಮಾಗಳಿಗೆ ಹಾಡುಗಳನ್ನು ನೀಡಿದ್ದಾರೆ.

ವಿ.ನಾಗೇಂದ್ರ ಪ್ರಸಾದ್ ಅವರು 2000 ರಲ್ಲಿ ಕೆ.ವಿ.ಜಯರಾಮ್ ನಿರ್ದೇಶನದ ʻಗಾಜಿನಾ ಮನೆʼ ಚಿತ್ರಕ್ಕೆ ಕನ್ನಡ ಗೀತರಚನೆಕಾರರಾಗಿ ಪದಾರ್ಪಣೆ ಮಾಡಿದರು.

ನಾಗೇಂದ್ರ ಪ್ರಸಾದ್ ಎಪಿಸೋಡ್‌ನಲ್ಲಿ ಕನ್ನಡದ ಅತ್ಯುತ್ತಮ ಸಂಗೀತಗಾರ, ಗೀತ ಸಾಹಿತಿ ಹಂಸಲೇಖ ಕರೆ ಮಾಡಿದ್ದು, ʻʻನಾನು ಕುಳಿತುಕೊಳ್ಳಬೇಕಾದ ಸ್ಥಾನದಲ್ಲಿ ನಾಗೇಂದ್ರ ಪ್ರಸಾದ್ ಕುಳಿತುಕೊಳ್ಳಬೇಕು ಎಂಬುದೇ ನನ್ನ ಹಾರೈಕೆʼʼ ಎಂದಿದ್ದಾರೆ. ಗುರುಗಳ ಈ ಮಾತು ನಾಗೇಂದ್ರ ಪ್ರಸಾದ್ ಅವರನ್ನು ಭಾವುಕಗೊಳಿಸಿದೆ. ಗೀತ ಸಾಹಿತ್ಯ ಮಾತ್ರವೇ ಅಲ್ಲದೆ ಸಂಗೀತ ನಿರ್ದೇಶನ, ಸಂಭಾಷಣೆ ಸೇರಿದಂತೆ ಸಿನಿಮಾದ ಇನ್ನೂ ಕೆಲವು ವಿಭಾಗಗಳಲ್ಲಿ ನಾಗೇಂದ್ರ ಪ್ರಸಾದ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ವಿ.ನಾಗೇಂದ್ರ ಪ್ರಸಾದ್ ಅವರ ಎಪಿಸೋಡ್‌ಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿದಂತೆ ಇನ್ನು ಹಲವು ಮಂದಿ ಆಗಮಿಸಿದ್ದಾರೆ.

ಇದನ್ನೂ ಓದಿ: Weekend With Ramesh: ಸೋಮೇಶ್ವರವರ ಪ್ರೇಮ ವಿವಾಹದ ವಿಸ್ಮಯವೇನು? ಆಗಿನ‌ ಮಲ್ಲೇಶ್ವರ ಹೇಗಿತ್ತು?

62 ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ, 65 ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ವಿ.ನಾಗೇಂದ್ರ ಪ್ರಸಾದ್ ಅವರ ಎಪಿಸೋಡ್‌ಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿದಂತೆ ಇನ್ನು ಹಲವು ಮಂದಿ ಆಗಮಿಸಿದ್ದಾರೆ.

ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ವೈದ್ಯ ಮಂಜುನಾಥ್, ಡಾಲಿ ಧನಂಜಯ್, ದತ್ತಣ್ಣ, ಮಂಡ್ಯ ರಮೇಶ್, ಸಿಹಿ-ಕಹಿ ಚಂದ್ರು, ಗುರುರಾಜ ಕರಜಗಿ, ಅವಿನಾಶ್, ನೆನಪಿರಲಿ ಪ್ರೇಮ್‌, ನಾ. ಸೋಮೇಶ್ವರ್‌, ಚಿನ್ನಿ ಮಾಸ್ಟರ್ ಅವರುಗಳು ಆಗಮಿಸಿ ಸಾಧಕರ ಕುರ್ಚಿಯ ಮೇಲೆ ಕುಳಿತಿದ್ದಾರೆ.

Exit mobile version