Site icon Vistara News

Weekend With Ramesh: ಬಾಲ್ಯದ ಗೆಳೆಯರ ಜತೆ ಆಟಗಳನ್ನು ಆಡಿ ಖುಷಿಪಟ್ಟ ಪ್ರಭುದೇವ; ಇಲ್ಲಿವೆ ಡ್ಯಾನ್ಸ್ ಕಿಂಗ್ ನೆನಪುಗಳು!

Weekend With Ramesh Prabhudeva with Friends

ಬೆಂಗಳೂರು: ʻವೀಕೆಂಡ್ ವಿತ್ ರಮೇಶ್ʼ (Weekend With Ramesh) ಸೀಸನ್ 05 ಕಾರ್ಯಕ್ರಮದ ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ನಟ, ನೃತ್ಯ ನಿರ್ದೇಶಕ, ನಿರ್ಮಾಪಕ ಪ್ರಭು ದೇವ ಅವರು ಬಂದಿದ್ದಾರೆ. ಕನ್ನಡದ ಪ್ರತಿಭೆಯಾಗಿರುವ ಪ್ರಭುದೇವ ಅವರು ಏಪ್ರಿಲ್‌ 1ರ ಎಪಿಸೋಡ್‌ನಲ್ಲಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಕೆಲವರು ಕಾಮೆಂಟ್‌ನಲ್ಲಿ ಪ್ರಭುದೇವ ಅವರು ತಮಿಳು ಮಿಶ್ರಿತ ಕನ್ನಡ ಮಾತನಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಪ್ರಭುದೇವ ಮಾತನಾಡಿದ್ದು, ಚಾಮರಾಜನಗರ ಭಾಷೆಯ ಕನ್ನಡ. ಇದನ್ನು ಕಾಡು ಭಾಷೆ ಅಂತಲೂ ಹೇಳುತ್ತಾರೆ. ವೇದಿಕೆಯಲ್ಲಿ ಶಾಲೆಯ ಗೆಳೆಯರು ಸೇರಿದಂತೆ ಬಾಲ್ಯದ ಗೆಳೆಯರೆಲ್ಲರೂ ಸಹ ವೇದಿಕೆಯ ಮೇಲೆ ಬಂದು ಪ್ರಭುದೇವ ಅವರಿಗೆ ಸರ್‌ಪ್ರೈಸ್‌ ನೀಡಿದ್ದಾರೆ.

ಬಾಲ್ಯದ ಗೆಳೆಯರ ಜತೆ ಮಜಾ ಕೊಡುವ ಆಟಗಳನ್ನು ಆಡಿ ಖುಷಿಪಟ್ಟ ಪ್ರಭುದೇವ!

ವೇದಿಕೆಯಲ್ಲಿ ಪ್ರಭುದೇವ ಅವರ ಗೆಳೆಯರು ಬರುತ್ತಿದ್ದಂತೆ ಲುಂಗಿಯ ಕಥೆಯನ್ನು ಬಿಚ್ಚಿಟ್ಟರು ಪ್ರಭುದೇವ. ʻʻನಾವೆಲ್ಲ ಒಂದೇ ತಟ್ಟೆಯಲ್ಲಿ ಆರು ಜನ ಊಟ ಮಾಡುತ್ತಿದ್ದೇವು. ಒಂದೇ ಬೆಡ್‌ಶೀಟ್‌ನಲ್ಲಿ ಮಲಗಿ ಕೊಳ್ಳುತ್ತಿದ್ದೇವು. ನಮಗೆ ಆ ಮನೆ, ಈ ಮನೆ ಎಂಬುದು ಇರುತ್ತಿರಲಿಲ್ಲ. ಒಂದು ದಿನ ಲುಂಗಿ ಹಾಕಿಕೊಂಡು ಮಲಗಿದ್ದೆ. ಬೆಳಗ್ಗೆ ನೋಡಿದರೆ ಲುಂಗಿಯೇ ಇರಲಿಲ್ಲ. ಅವತ್ತೇ ನಿರ್ಧಾರ ಮಾಡಿದೆ. ಇನ್ನು ಲುಂಗಿ ಧರಿಸಬಾರದೆಂದುʼʼಎಂದು ತಮಾಷೆಯ ಸಂಗತಿಗಳನ್ನು ಹೇಳಿಕೊಂಡರು.

ಇಷ್ಟದ ಆಟಗಳನ್ನು ಆಡಿದ ಪ್ರಭುದೇವ

ಪ್ರಭುದೇವ ಅವರಿಗೆ ಗೋಲಿ ಆಟ ಹಾಗೇ ಬುಗುರಿ ಆಟ ತುಂಬ ಇಷ್ಟವಂತೆ. ಟೈಯರ್‌ ಆಟವನ್ನು ಆಡಿ ತೋರಿಸಿದ್ದಾರೆ. ಪ್ರಭುದೇವ ಅವರು ಬಾಲ್ಯದ ಬಗ್ಗೆ ನೆನಪಿನ ಬುತ್ತಿ ಬಿಚ್ಚಿಡುತ್ತ, ಅವರ ಇಷ್ಟದ ಹಪ್ಪಳವನ್ನು ಕೂಡ ಸವಿದರು.

ವೀಕೆಂಡ್‌ ಟೆಂಟ್‌ನಲ್ಲಿ ನಟನ ಸಾಧನೆ ಅನಾವರಣ

ಪ್ರಭುದೇವ ಅವರು `ಪದ್ಮಶ್ರೀ’ ಜತೆಗೆ 2 ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಭುದೇವ ಅವರು ಅಪ್ಪಟ ಕನ್ನಡದ ಪ್ರತಿಭೆ. 36 ವರ್ಷಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರುವ ಪ್ರಭುದೇವ ಅವರು 61 ಚಿತ್ರಗಳಲ್ಲಿ ನಟಿಸಿದ್ದಾರೆ, 15 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, 3 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಭಾರತದ ಸ್ಟಾರ್ ನಟರ ಜತೆ ಪ್ರಭುದೇವ ಕೆಲಸ ಮಾಡಿದ್ದಾರೆ.

Exit mobile version