Site icon Vistara News

Weekend With Ramesh: ಶಂಕರ್‌ ನಾಗ್‌ಗೆ ಕರ್ನಾಟಕದ ಜನತೆಯ ಮೇಲಿದ್ದ ಕಾಳಜಿ ಬಗ್ಗೆ ವಿವರಿಸಿದ ಸಿಹಿ ಕಹಿ ಚಂದ್ರು

sihi kahi chandru talk about Shankar Nag concern for the people of Karnataka

ಬೆಂಗಳೂರು: ಈ ವಾರ ವೀಕೆಂಡ್‌ ವಿತ್‌ ರಮೇಶ್‌ ಶೋಗೆ (Weekend With Ramesh) ಸಿಹಿ ಕಹಿ ಚಂದ್ರು ಅತಿಥಿಯಾಗಿ ಆಗಮಿಸಿದ್ದರು. ಸಾಧಕರ ಸೀಟ್‌ನಲ್ಲಿ ತಮ್ಮ ಜೀವನದ ಪಯಣ ಹಾಗೇ ಸಿನಿರಂಗದ ಹಳೆಯ ನೆನಪುಗಳು, ಜತೆಗೆ ಶಂಕರ್‌ ನಾಗ್‌ ಅವರ ಕುರಿತಾದ ಹಲವು ವಿಚಾರಗಳನ್ನು ಹಂಚಿಕೊಂಡಿದರು. ಶಂಕರ್‌ ನಾಗ್‌ ಅವರ ಕನಸು ಯಾವುದಾಗಿತ್ತು, ಕರ್ನಾಟಕದ ಜನತೆಯ ಮೇಲಿದ್ದ ಕಾಳಜಿ ಏನು ಎಂಬುದರ ಸತ್ಯವನ್ನು ಬಹಿರಂಗಪಡಿಸಿದರು ಚಂದ್ರು.

ಸಿಹಿ ಕಹಿ ಚಂದ್ರು ಅವರಿಗೆ ಶಂಕರ್‌ನಾಗ್‌ ಪರಿಚಯವಾಗಿದ್ದು ಹೇಗೆ?

ಸಿಹಿ ಕಹಿ ಚಂದ್ರು ಅವರು ಕಾಲೇಜು ಪ್ರೆಸಿಡೆಂಟ್ ಆಗಿದ್ದಾಗ ಶಂಕರ್​ನಾಗ್ ಅವರನ್ನು ಕಾಲೇಜಿಗೆ ಅತಿಥಿಯಾಗಿ ಆಹ್ವಾನಿಸಲು ಸಿಹಿ ಕಹಿ ಚಂದ್ರು ಹೋಗಿದ್ದರು. ಆಗ ಶಂಕರ್‌ನಾಗ್‌ ಪುಸ್ತಕವೊಂದನ್ನು ಸಿಹಿ ಕಹಿ ಚಂದ್ರು ಅವರಿಗೆ ಕೊಟ್ಟು ಓದಿಕೊಂಡು ಬಂದು ಚರ್ಚಿಸುವಂತೆ ಹೇಳಿದರು. ಸಿಹಿ ಕಹಿ ಚಂದ್ರು ಅವರಿಗೆ ಅರ್ಥವಾಗದಾಗ ಶಂಕರ್‌ನಾಗ್‌ ಪುಸ್ತಕ ಹೇಗೆ ಓದಬೇಕು ಎಂದು ಹೇಳಿಕೊಟ್ಟಿದ್ದರಂತೆ ಅದಾದ ಮೇಲೆ ಓದಿ ಶಂಕರ್‌ನಾಗ್‌ ಜತೆ ಚರ್ಚಿಸಿದಾಗ, ಶಂಕರ್‌ ನಾಗ್‌ ಅವರು ಅತಿಥಿಯಾಗಿ ಸಿಹಿ ಕಹಿ ಚಂದ್ರು ಕಾಲೇಜಿಗೆ ಬರಲು ಒಪ್ಪಿಕೊಂಡಿದ್ದರು , ಅದು ಸಿಹಿ ಕಹಿ ಚಂದ್ರು ಹಾಗೂ ಶಂಕರ್‌ ನಾಗ್‌ ಅವರ ಮೊದಲ ಭೇಟಿ.

ನೋಡಿ ಸ್ವಾಮಿ ನಾವಿರೋದೆ ಹೀಗೆ ಸಿನಿಮಾ ಮೂಲಕ ಒಟ್ಟಿಗೆ ಕೆಲಸ

ಶಂಕರ್ ನಾಗ್ ಅವರ ಬಗ್ಗೆ ಮಾತನಾಡಿರುವ ಸಿಹಿ ಕಹಿ ಚಂದ್ರು,”ಶಂಕರ್ ನಾಗ್ ಜತೆಗೆ ನಾಟಕ ಮಾಡಿದ್ದೇವು. ಅದು ನೋಡಿ ಸ್ವಾಮಿ ನಾವಿರೋದೆ ಹೀಗೆ.‌ ಆ ನಾಟಕದ ರಿಹರ್ಸಲ್‌ಗೆ ಕರೆದುಕೊಂಡು ಹೋದರು. ಅಲ್ಲಿ ಅವರ ಜತೆ ಬಾಂಧವ್ಯ ಬೆಳೆಯಿತು. ಅನಂತ್ ನಾಗ್ ಮತ್ತು ಶಂಕರ್ ನಾಗ್ ನೋಡಿದರೆ ನಮಗೆ ಖುಷಿ ಆಗ. ನಮಗೆಲ್ಲ ಅವರೇ ಆಗ ಗುರುಗಳು. ಆ ಬಳಿಕ ಅಲ್ಲಿ ಶಂಕರ್​ ನಾಗ್ ಅವರು ತಮ್ಮನ್ನು ಗುರುತಿಸಿ ಮಾಲ್ಗುಡಿ ಡೇಸ್​ ತಂಡಕ್ಕೆ ಸೇರಿಸಿಕೊಂಡರುʼʼಎಂದರು.

ಶಂಕರ್‌ ನಾಗ್‌ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದರು

ʻʻನರಸಿಂಹ ಎನ್ನುವ ಸಿನಿಮಾ ನಾವು ಮಾಡುವಾಗ, ಒಂದು ಗಂಟೆ ನಾವು ಫ್ರೀ ಇದ್ದಿದ್ವಿ. . ನಾನು ಒಂದು ಮನೆ ಕಟ್ಟಿದ್ದೀನಿ ಬಾ ತೋರಿಸ್ತೀನಿ ಎಂದು ಕರೆದುಕೊಂಡು ಹೋದರು. ನಾನು ಅಂದುಕೊಂಡೆ ದೊಡ್ಡ ಬಂಗಲೆ ಕಟ್ಟಿರುತ್ತಾರೆ ಎಂದು. ಹೋಗಿ ನೋಡದರೆ ಚಿಕ್ಕ ಬೆಡ್ ರೂಮ್ ಹೌಸ್. ಆ ಟೆಕ್ನಾಲಕಜಿ ಬಂದು ಜರ್ಮನ್‌ರದ್ದು. ಇಲ್ಲಿ ತಂದ್ದಂತಹ ಒಂದು ಮಾಡೆಲ್ ಹೌಸ್ ಅವರು ಕಟ್ಟಿದ್ದರುʼʼ.

ಇದನ್ನೂ ಓದಿ: Weekend With Ramesh: ಶಿಕ್ಷಣ ತಜ್ಞರು, ಸಿಹಿಕಹಿಯಂತೆ ಮನರಂಜನೆ ಕೊಟ್ಟವರು ಈ ವಾರದ ಅತಿಥಿಗಳು!

ಶಂಕರ್‌ ನಾಗ್‌ ಇದ್ದಿದ್ದರೆ ಸ್ಲಂ ಇರುತ್ತಿರಲಿಲ್ಲ

“ಈ ಮನೆ ತೋರಿಸಿ ಮನೆ ಕಟ್ಟುವುದಕ್ಕೆ ಆಗಿದ್ದು, ಕೇವಲ ಎರಡು ದಿನ. ಒಂದು ಮನೆಗೆ ಹದಿನೈದು ಸಾವಿರ ಆಗುತ್ತದೆ. ನನ್ನ ಗುರಿ ಏನು ಅಂದರೆ, ಕರ್ನಾಟಕದ ಸ್ಲಂಗಳಲ್ಲಿರುವ ಗುಡಿಸಲುಗಳನ್ನೆಲ್ಲ ತೆಗೆದು ಈ ರೀತಿಯ ಮನೆ ಕಟ್ಟಿಕೊಡಬೇಕು ಎಂದು. ಸರ್ಕಾರದಿಂದ ಹತ್ತು ಸಾವಿರ ಸಬ್ಸಿಡಿಗೆ ಓಡಾಡುತ್ತ ಇದ್ದೇನೆ. ಅದು ಆಗಿಬಿಟ್ರೆ ಕರ್ನಾಟಕದಲ್ಲಿ ಸ್ಲಂಗಳು ಇರಲ್ಲ ಎಂದು ಹೇಳಿದರು. ಅವರಿಗಿದ್ದ ದೂರದೃಷ್ಟಿ, ಬಡವರ ಪರವಾಗಿ ಕಾಳಜಿ ಜೀವನದಲ್ಲಿ ಮರೆಯುವಂತಿಲ್ಲʼʼಎಂದು ನೆನಪಿಸಿಕೊಂಡರು ಚಂದ್ರು.

Exit mobile version