Site icon Vistara News

Weekend With Ramesh: ನೃತ್ಯ ಲೋಕದ ಲೆಜೆಂಡ್; ನಡೆದಾಡುವ ಗ್ರಂಥಾಲಯ ಈ ವೀಕೆಂಡ್‌ ಅತಿಥಿಗಳು

Weekend With Ramesh this week guest

ಬೆಂಗಳೂರು: ಶನಿವಾರ ಹತ್ತಿರ ಬರುತ್ತಿದ್ದಂತೆ `ವೀಕೆಂಡ್‌ ವಿತ್‌ ರಮೇಶ್‌’ ಶೋದಲ್ಲಿ (Weekend With Ramesh) ಯಾರು ಅತಿಥಿಯಾಗಿ ಬರಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಿಗೆ ಹೆಚ್ಚಿರುತ್ತದೆ. ಈಗಾಗಲೇ ನೆನಪಿರಲಿ ಪ್ರೇಮ್‌ ಶೋಗೆ ಭಾಗಿಯಾಗಿ, ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ವಾರ ಡ್ಯಾನ್ಸ್ ಕೊರಿಯೋಗ್ರಫರ್ ಆಗಿರುವ ಚಿನ್ನಿ ಪ್ರಕಾಶ್ ಮಾಸ್ಟರ್ ಆಗಮಿಸಲಿದ್ದರೆ, ಭಾನುವಾರದ ಎಪಿಸೋಡ್​ಗೆ ವೈದ್ಯ, ಲೇಖಕ, ಥಟ್ ಅಂತ ಹೇಳಿʼ ಕಾರ್ಯಕ್ರಮದ ನಿರೂಪಕ ನಾ. ಸೋಮೇಶ್ವರ್ ಆಗಮಿಸಲಿದ್ದಾರೆ.

ಕಾರ್ಯಕ್ರಮದ ಪ್ರೊಮೊ ಈಗಾಗಲೇ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಪ್ರೊಮೊದಲ್ಲಿ ನೋಡಿದಾಗ ಚಿನ್ನ ಪ್ರಕಾಶ್ ಮಾಸ್ಟರ್ ಅವರು ತಮ್ಮ ಸಿನಿ ಜರ್ನಿ, ಅಮಿತಾಭ್‌ ಬಚ್ಚನ್ ಸೇರಿದಂತೆ ಬಾಲಿವುಡ್​ನ ಹಲವು ದಿಗ್ಗಜರು, ಕನ್ನಡದಲ್ಲಿ ರವಿಚಂದ್ರನ್, ವಿಷ್ಣುವರ್ಧನ್ ಇನ್ನೂ ಹಲವು ತಾರೆಯರಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದನ್ನು ನೆನಪು ಮಾಡಿಕೊಂಡಿದ್ದಾರೆ.

ಯಾರು ಈ ಚಿನ್ನಿ ಪ್ರಕಾಶ್?

ಚಿಕ್ಕಂದಿನಿಂದಲೂ ಚಿನ್ನಿ ಪ್ರಕಾಶ್‌ ಅವರಿಗೆ ಹಿಂದಿ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆ ಇತ್ತು . ಓದು ಮುಗಿಸಿ ಬಾಂಬೆಗೆ ಬಂದ ಅವರು ಕಾಲಕ್ರಮೇಣ ಹಲವು ನೃತ್ಯ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದರು. ಚಿನ್ನಿ ಪ್ರಕಾಶ್ ಅವರು ನೃತ್ಯ ನಿರ್ದೇಶಕಿಯಾಗಿರುವ ರೇಖಾ ಅವರನ್ನು ವಿವಾಹವಾಗಿದ್ದಾರೆ. ಒಟ್ಟಿಗೆ ನೃತ್ಯ ಸಂಯೋಜನೆಯನ್ನು ಮಾಡುತ್ತಾರೆ. ಅಮಿತಾಭ್‌ ಅವರ “ಜುಮ್ಮಾ ಚುಮ್ಮಾ” ಹಾಡಿಗೆ ನೃತ್ಯ ಸಂಯೋಜನೆಯನ್ನೂ ಮಾಡಿದ್ದಾರೆ. ಚಿನ್ನಿ ಪ್ರಕಾಶ್ ಅವರು ರಾಷ್ಟ್ರೀಯ ಪ್ರಶಸ್ತಿ , ಮತ್ತು ಫಿಲ್ಮ್‌ಫೇರ್‌ನ ಅತ್ಯುತ್ತಮ ನೃತ್ಯ ಸಂಯೋಜಕ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಇದನ್ನೂ ಓದಿ: Weekend With Ramesh: ಕನಸು ನನಸಾಗಲು ತಾಳಿ ಅಡ ಇಟ್ಟಿದ್ದಳು: ನೆನಪಿರಲಿ ಪ್ರೇಮ್‌ ಭಾವುಕ

ನಾ. ಸೋಮೇಶ್ವರ್

ಚಂದನ ವಾಹಿನಿಯಲ್ಲಿ ʻಥಟ್ ಅಂತ ಹೇಳಿʼ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ಕಾರ್ಯಕ್ರಮ 4000 ಕಂತುಗಳನ್ನು ದಾಟಿ ಮುಂದುವರಿದು ಭಾರತದ ಟೆಲಿವಿಷನ್ ಇತಿಹಾಸದಲ್ಲೇ ಒಂದು ದಾಖಲೆಯನ್ನು ಸೃಷ್ಟಿಸಿದೆ. ಇವರು ವೃತ್ತಿಯಿಂದ ವೈದ್ಯರಾಗಿದ್ದಾರೆ. ಹಾಗೂ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ‘ಜೀವನಂದಿ’ ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. 2004ರಲ್ಲಿ ವೈದ್ಯಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಆರ್ಯಭಟ್ಟ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದೆ

ಶೋನಲ್ಲಿ ಚಿನ್ನಿ ಮಾಸ್ಟರ್ ಪತ್ನಿ ಸಹ ಭಾಗವಹಿಸಿದ್ದು ಇಬ್ಬರೂ ಸಹ ಹಾಡುಗಳಿಗೆ ನರ್ತಿಸಿದ್ದಾರೆ. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ವೈದ್ಯ ಮಂಜುನಾಥ್, ಡಾಲಿ ಧನಂಜಯ್, ದತ್ತಣ್ಣ, ಮಂಡ್ಯ ರಮೇಶ್, ಸಿಹಿ-ಕಹಿ ಚಂದ್ರು, ಗುರುರಾಜ ಕರಜಗಿ, ಅವಿನಾಶ್, ನೆನಪಿರಲಿ ಅವರುಗಳು ಆಗಮಿಸಿ ಸಾಧಕರ ಕುರ್ಚಿಯ ಮೇಲೆ ಕುಳಿತಿದ್ದಾರೆ.

Exit mobile version