ಬೆಂಗಳೂರು: ಕಿರುತೆರೆಯಲ್ಲಿ ಮನ ಮೆಚ್ಚಿದ ಶೋ ಎಂದರೆ ವೀಕೆಂಡ್ ವಿತ್ ರಮೇಶ್ (Weekend With Ramesh). ಸಾಧಕರನ್ನು ಕರೆಸಿ ಕೆಂಪು ಕುರ್ಚಿಯಲ್ಲಿ ಕೂರಿಸಿ ಅವರ ಬದುಕಿನ ನೋವು-ನಲಿವು, ಏಳು-ಬೀಳಿನ ಬಗ್ಗೆ ಮೆಲುಕು ಹಾಕಿ, ಸಾಧನೆಯ ಹಾದಿಯಲ್ಲಿ ನಡೆದ ಘಟನೆಗಳನ್ನು ಪ್ರೇಕ್ಷಕರ ಎದುರು ತೋರಿಸುವ ಅತೀ ದೊಡ್ಡ, ಜನ ಮೆಚ್ಚಿದ ಶೋ. ಶನಿವಾರ ಬಂತು ಅಂದರೆ ಪ್ರೇಕ್ಷಕರಿಗೆ ಈ ವಾರ ಯಾರು ಅತಿಥಿಯಾಗಿ ಬರಲಿದ್ದಾರೆ ಎಂಬ ಕುತೂಹಲ ಹೆಚ್ಚಿರುತ್ತದೆ. ಈ ವಾರ ವೀಕೆಂಡ್ ವಿತ್ ರಮೇಶ್ ಶೋದಲ್ಲಿ ನಟ ಮಂಡ್ಯ ರಮೇಶ್ ಹಾಗೂ ಹಿರಿಯ ನಟ ಅವಿನಾಶ್ ಸಾಧಕರ ಸೀಟ್ ಅಲಂಕರಿಸಲಿದ್ದಾರೆ.
ಈಗಾಗಲೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ರಮ್ಯಾ, ಪ್ರಭುದೇವ, ದತ್ತಣ್ಣ ಬಂದು ತಮ್ಮ ಸಾಧನೆಯ ಪ್ರಯಾಣವನ್ನು ಬಿಚ್ಚಿಟ್ಟಿದ್ದಾರೆ, ಇದೀಗ 5ನೇ ವಾರಕ್ಕೆ ಅತಿಥಿಗಳಾಗಿ ಮಂಡ್ಯ ರಮೇಶ್- ಹಿರಿಯ ನಟ ಅವಿನಾಶ್ ಭಾಗಿಯಾಗಿದ್ದಾರೆ. ತಮ್ಮ ಜೀವನದ ಸವಾಲುಗಳು, ಏಳು-ಬೀಳಿನ ಕಥೆಯನ್ನು ಹೇಳಿಕೊಳ್ಳಲಿದ್ದಾರೆ.
ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡ ಮಂಡ್ಯ ರಮೇಶ್
ಮಂಡ್ಯ ರಮೇಶ್ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡವರು. ನಟರಾಗಿ, ನಿರ್ದೇಶಕರಾಗಿ, ಅದ್ಭುತ ಕಲಾವಿದ. ರಂಗಶಿಕ್ಷಕರೂ ಹೌದು. ಮಜಾ ಟಾಕೀಸ್‌ನಲ್ಲಿ ಹಾಸ್ಯ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ʻನೀನಾಸಂʼ ನಾಟಕ ಶಾಲೆಯಲ್ಲಿ ಪದವಿ ಪಡೆದರು. ʻಅಗ್ನಿ ಮತ್ತು ಮಳೆʼ, ʻಮಾರನಾಯಕʼ, ಹೀಗೆ ಮುಂತಾದ ನಾಟಕಗಳ ಪ್ರದರ್ಶನ ನೀಡಿದ್ದಾರೆ. ಹಲವು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಅವುಗಳಲ್ಲಿ ʻಪಂಚರಂಗಿʼ, ʻಶ್ರೀರಸ್ತು ಶುಭಮಸ್ತುʼ, ʻಮಂಥನʼ ಹಲವು.
ʻಜನುಮದ ಜೋಡಿʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ʻಅಮೃತಧಾರೆʼ, ʻಮಠʼ, ʻಕನಸುಗಾರʼ, ʻನಾಗಮಂಡಲʼ, ʻಮುಸ್ಸಂಜೆ ಮಾತುʼ, ʻಯಜಮಾನʼ, 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೇಷ್ಠ ಪೋಷಕ ನಟ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರಿಗೆ ಸಂದಿವೆ.
ಇದನ್ನೂ ಓದಿ: Weekend With Ramesh: ಅಕ್ಕ ʻರಾಣಿʼ ಮಗಳಿದ್ದಂತೆ ಎಂದು ಭಾವುಕರಾದ ಡಾಲಿ ಧನಂಜಯ್
ಜೀ ವಾಹಿನಿ ಪ್ರೊಮೊ
ಸಿನಿಮಾ ರಂಗದಲ್ಲಿ ಛಾಪು ಮೂಡಿಸಿದ ಅವಿನಾಶ್
ಹಿರಿಯ ನಟ ಅವಿನಾಶ್ ಅವರು ನಟ, ಪೋಷಕ ನಟನಾಗಿ, ಖಳನಾಯಕನಾಗಿ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆಪ್ತಮಿತ್ರ, ಯುದ್ಧಕಾಂಡ, ಹುಡುಗರು, ಪರಮಾತ್ಮ,, ಸಿಂಗರವ್ವ, ಚಿನ್ನಾರಿ ಮುತ್ತ ಹೀಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆಪ್ತರಕ್ಷಕ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪೋಷಕ ನಟ ಪ್ರಶಸ್ತಿ, ಮತದಾನ ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಜೀ ವಾಹಿನಿ ಪ್ರೊಮೊ ಹಂಚಿಕೊಂಡಿದ್ದು, ಪ್ರೇಕ್ಷಕರು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.