Site icon Vistara News

Weekend With Ramesh: ದತ್ತಣ್ಣ ಮದುವೆ ಆಗದೇ ಇರಲು ಕಾರಣವೇನು? ಗೆಳೆಯ ಬಿಚ್ಚಿಟ್ಟ ರಹಸ್ಯವೇನು?

What is the reason why Dutta is not married

ಬೆಂಗಳೂರು: ʻವೀಕೆಂಡ್‌ ವಿತ್‌ ರಮೇಶ್‌ʼ (Weekend With Ramesh) ಶೋದಲ್ಲಿ ಏಪ್ರಿಲ್‌ 9ರಂದು ದತ್ತಣ್ಣ ಅತಿಥಿಯಾಗಿ ಭಾಹವಹಿಸಿದ್ದರು. ದತ್ತಣ್ಣ ಎಸ್ಎಸ್ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದೆದುಕೊಂಡಿದ್ದು, ಏರ್​ಫೋರ್ಸ್​​ನಲ್ಲಿ ವಿಂಗ್ ಕಮಾಂಡರ್​ ಆಗಿ ಸೇವೆ ಸಲ್ಲಿಸಿ ಬಳಿಕ ನಟನಾ ಕ್ಷೇತ್ರಕ್ಕೆ ಬಂದುದ್ದು, ಹೀಗೆ ತಮ್ಮ ಜರ್ನಿ ಕುರಿತು ಮನಬಿಚ್ಚಿ ಮಾತನಾಡಿದರು. ಅವರ ಬಾಲ್ಯದ ಸ್ನೇಹಿತರು ಕೂಡ ದತ್ತಣ್ಣ ಅವರ ಹಲವು ವಿಚಾರಗಳ ಬಗ್ಗೆ ಹೇಳಿಕೊಂಡರು. ಈ ವೇಳೆ ದತ್ತಣ್ಣ ಏಕೆ ಮದುವೆಯಾಗಲಿಲ್ಲ ಎಂಬ ಸತ್ಯವನ್ನು ಬಹಿರಂಗಪಡಿಸಿದರು.

ವೇದಿಕೆ ಮೇಲೆ ಮದುವೆ, ಸಂಸಾರ ಎನ್ನುವುದು ಗೋಳು ಎಂದರು ದತ್ತಣ್ಣ. ಈ ಕಾರಣಕ್ಕಾಗಿಯೇ ಮದುವೆಯಾಗದೇ ಇರುವ ಸಂಗತಿಯನ್ನು ಹೇಳಿದರು. ವೀಕೆಂಡ್ ವಿತ್ ರಮೇಶ್​ ಶೋನಲ್ಲಿ ದತ್ತಣ್ಣ ಅವರ ಗೆಳೆಯರು ಈ ಬಗ್ಗೆ ಮಾತನಾಡಿದ್ದಾರೆ. ‘ದತ್ತಣ್ಣ ಓದಿನಲ್ಲಿ ಚುರುಕಿದ್ದರು. ಜೀವನದಲ್ಲಿ ಅನೇಕ ಸಾಧನೆ ಮಾಡಿದರು. ಆದರೆ, ಮದುವೆ ಆಗಲೇ ಇಲ್ಲ. ಯಾವಾಗಲೂ ಫ್ರೀ ಆಗಿರಬೇಕು. ಎಲ್ಲರೂ ಬಂದು ಸಂಸಾರದ ಗೋಳು ಹೇಳಿಕೊಳ್ಳುತ್ತಾರೆ. ಅದಕ್ಕೆ ಮದುವೆ ಆಗುವುದಿಲ್ಲ ಎಂದು ದತ್ತಣ್ಣ ನಿರ್ಧರಿಸಿದ್ದರು’ ಎಂಬುದಾಗಿ ದತ್ತಣ್ಣ ಅವರ ಗೆಳೆಯ ಹೇಳಿದರು.

ದತ್ತಣ್ಣ ಚಿತ್ರರಂಗಕ್ಕೆ ಬಂದಾಗ ಅವರಿಗೆ 45 ವರ್ಷ. ಆದರೂ, ಬಣ್ಣದ ಮೇಲಿನ ಗೀಳು ಕಡಿಮೆ ಆಗಿರಲಿಲ್ಲ. ಹಿಂದಿ ಚಿತ್ರರಂಗದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ದತ್ತಣ್ಣ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ.

ಇದನ್ನೂ ಓದಿ: Weekend With Ramesh: ದತ್ತಣ್ಣ ಜೀವನದಲ್ಲಿ ಆ ಸಿನಿಮಾ ಕಪ್ಪು ಚುಕ್ಕೆ ಆಗಿತ್ತಂತೆ? ಯಾವುದು ಆ ಸಿನಿಮಾ?

ಹೆತ್ತವರನ್ನು ನೆನೆದು ಭಾವುಕರಾದ ದತ್ತಣ್ಣ

ಹಾಗೇ ಹೆತ್ತವರನ್ನು ನೆನೆದು ಭಾವುಕರಾದರು ದತ್ತಣ್ಣ. ʻʻನನ್ನ ಪೇ ಆಗ 10 ಸಾವಿರ ರೂ. ಇವತ್ತು ನಮ್ಮ ಪೆನ್ಷನ್‌ ಒಳ್ಳೆಯ ರೀತಿಯಲ್ಲಿ ಇದೆ. ಇದೆನಾದರೂ ಅವತ್ತು ಇದ್ದಿದ್ದರೆ ನನ್ನ ಅಪ್ಪ ಅಮ್ಮನನ್ನು ಇನ್ನು ಸ್ವಲ್ಪ ಚೆನ್ನಾಗಿ ನೋಡಿಕೊಳ್ಳಬಹುದಿತ್ತು. ಕಷ್ಟ ಆದರೂ ಪರವಾಗಿಲ್ಲ. ತಂದೆ ತಾಯಿ ಇರುವಾಗ ಚೆನ್ನಾಗಿ ನೋಡಿಕೊಳ್ಳಬೇಕುʼʼಎಂದು ಭಾವುಕರಾದರು.

Exit mobile version