Site icon Vistara News

Weekend With Ramesh: ಮನೆ ಮಗ ದೇವರು ಇವರಿಗೆ; ವಿಶೇಷ ಚೇತನ ಮಗನ ಕುರಿತು ಮಾಳವಿಕಾ ಭಾವುಕ!

Malavika is emotional about the special disabled son

ಬೆಂಗಳೂರು: `ವೀಕೆಂಡ್‌ ವಿತ್‌ ರಮೇಶ್‌‘ (Weekend With Ramesh) ಶೋದಲ್ಲಿ ಈ ವಾರ ಹಿರಿಯ ನಟ ಅವಿನಾಶ್‌ ಹಾಗೂ ನಟ ಮಂಡ್ಯ ರಮೇಶ್‌ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಪತ್ನಿ ಮಾಳವಿಕಾ ಹಾಗೂ ಅವಿನಾಶ್‌ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಜೀ ವಾಹಿನಿ ಪ್ರೊಮೊ ಹಂಚಿಕೊಂಡಿದ್ದು, ವಿಶೇಷ ಚೇತನ ಮಗನ ಕುರಿತು ಮಾತನಾಡಿ ದಂಪತಿ ಭಾವುಕರಾದರು.

ಮಾಳವಿಕಾ ಅವರು ಮಗನ ಕುರಿತಾಗಿ ಮಾತನಾಡಿದರು. ʻʻಜಗತ್ತಿನಲ್ಲಿ ಎರಡು ಸಾವಿರ ಮಕ್ಕಳು ಹೀಗೆ ಇದ್ದಾರೆ ಎಂದು ಮಾಳವಿಕಾ ಹೇಳಿದ ಕೂಡಲೇ, ಅವಿನಾಶ್‌ ಅವರು ಈಗ ಅವನ ಜತೆ ದೇವರಿದ್ದಾನೆ ಎಂದರು. ಮಾಳವಿಕಾ ಮಾತು ಮುಂದುವರಿಸಿ ʻʻಒಬ್ಬೊಬ್ಬರು ಅವನ ಬಗ್ಗೆ ಒಂದೊಂದು ತರ ಮಾತನಾಡಿದರು. ಕೆಲವೊಂದು ಸಲ ಅನ್ನಿಸುತ್ತದೆ, ನಮ್ಮ ಮನೆಯಲ್ಲಿ ಯಾಕೆ ಹೀಗೆ! ಎಲ್ಲರ ಮನೆಯಲ್ಲಿಯೂ ಮಕ್ಕಳು ಸ್ಕೂಲ್‌ಗೆ ಹೋಗುತ್ತಾರಲ್ಲ. ನಮಗೆ ಯಾಕೆ ಹೀಗೆ ಎಂದು. ನಾವು ಸೋಷಿಯಲ್‌ ಗ್ಯಾದರಿಂಗ್‌ಗೆ ಹೋಗುವುದೇ ಇಲ್ಲ. ನಾನು ಏನು ಮಾತನಾಡಲಿ ಈ ಬಗ್ಗೆ? ಹೋದಲ್ಲಿ ಅವಿನಾಶ್‌ ಮಗ ಎನ್ನುತ್ತಾರೆʼʼಎಂದು ಭಾವುಕರಾದರು.

ಪ್ರೊಮೊಗೆ ಹಲವರು ಕಾಮೆಂಟ್‌ ಮೂಲಕ ಧೈರ್ಯವನ್ನು ಸೂಚಿಸಿದ್ದಾರೆ. ʻʻಪುಣ್ಯ ಮಾಡಿರುವವರ ಮನೆಯಲ್ಲಿ ಮಾತ್ರ ಇತರ ಮಕ್ಕಳು ಹುಟ್ಟುವುದು ಎಂದು ಒಬ್ಬರು ಕಾಮೆಂಟ್‌ ಮಾಡಿದರೆ, ಇನ್ನೊಬ್ಬರು ʻʻನೀವೆ ಭಾಗ್ಯವಂತರು ಇಂದಿನ ಕಾಲ ನೋಡಿದರೆ, ದೇವರೆ ನಿಮ್ಮ ಮನೆಲಿ ಇರುವುದುʼʼಎಂದು ಬರೆದಿದ್ದಾರೆ.

ಇದನ್ನೂ ಓದಿ: Weekend With Ramesh: ರಂಗಭೂಮಿ, ಸಿನಿ ರಂಗದಲ್ಲಿ ಛಾಪು ಮೂಡಿಸಿರುವವರು ಈ ವಾರದ ಅತಿಥಿಗಳು!

ಜೀ ವಾಹಿನಿ ಪೋಸ್ಟ್‌

ಅವಿನಾಶ್‌-ಮಾಳವಿಕಾ ಲವ್‌ ಸ್ಟೋರಿ ಏನು?

ಹಿರಿಯ ನಟ ಅವಿನಾಶ್ ಸಹ ಹಲವು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಪತ್ನಿ ಮಾಳವಿಕಾ ಅವರ ಮೇಲೆ ಹೇಗೆ ಪ್ರೀತಿ ಹುಟ್ಟಿತು ಎಂದು ಅವಿನಾಶ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ʻʻಕೃಷ್ಣಾವತಾರ ಎಂಬ ಧಾರವಾಹಿ ಮಾಡುವಾಗ ನಾನು ಒಂದು ಪಾತ್ರ ಮಾಡಲು ಹೋಗಿದ್ದೆ. ಗೊತ್ತಿಲ್ಲದೇ ಒಂದು ಸಂಬಂಧ ಹುಟ್ಟಿಕೊಂಡಿತು. ನನಗೆ ಮಾಳವಿಕಾ ಮೇಲೆ ಪ್ರೀತಿ ಇತ್ತು. ಆದರೆ ಹೇಳಿಕೊಳ್ಳುವಷ್ಟು ಧೈರ್ಯ ಇರಲಿಲ್ಲ. ನಂತರ ನಮ್ಮ ಅತ್ತೆಯವರೇ ಕೇಳಿದರು, ಮದುವೆಯಾಗುತ್ತೀರಾ ಎಂದು. ನನಗೆ ಖುಷಿಯಾಯ್ತುʼʼ ಎಂದಿದ್ದಾರೆ. 2001ರಲ್ಲಿ ಅವಿನಾಶ್ ಕಿರುತರೆ ನಟಿ ಮಾಳವಿಕಾ ಅವರ ಜತೆ ವಿವಾಹವಾಗುತ್ತಾರೆ.

Exit mobile version