Site icon Vistara News

Vaishnavi Gowda | ನಟಿ ವೈಷ್ಣವಿ ತಾಯಿಗೆ ವಿದ್ಯಾಭರಣ್‌ ತಾಯಿ ಹೇಳಿದ್ದೇನು? ಆಡಿಯೊದಲ್ಲಿ ಏನಿದೆ?

Vaishnavi Gowda

ಬೆಂಗಳೂರು : ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda ) ಅವರ ನಿಶ್ಚಿತಾರ್ಥ ವಿವಾದ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಟ ವಿದ್ಯಾಭರಣ್ ಅವರ ಕುರಿತು ಆರೋಪ ಮಾಡಿರುವ ನಟಿಯ ಆಡಿಯೊ ಬೆನ್ನಲ್ಲೇ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮುರಿದುಕೊಂಡಿದ್ದಾರೆ. ಈ ಆಡಿಯೊ ವಿಷಯ ಮೊದಲು ಗೊತ್ತಾಗಿದ್ದು ವೈಷ್ಣವಿ ಅವರ ತಾಯಿಗೆ ಎಂಬುದು ಸ್ಪಷ್ಟವಾಗಿದೆ. ವಿದ್ಯಾಭರಣ್ ತಾಯಿಯನ್ನು ವೈಷ್ಣವಿ ತಾಯಿ ವಿಚಾರಿಸಿದಾಗ, ವಿದ್ಯಾಭರಣ್ ತಾಯಿ ವಾಯ್ಸ್ ನೋಟ್‌ ಒಂದನ್ನು ಕಳುಹಿಸಿದ್ದಾರೆ. ಇದೀಗ ಮಾಧ್ಯಮಗಳ ಮುಂದೆ ಕೇಳಿಸಿದ್ದಾರೆ.

ವಾಯ್ಸ್‌ ನೋಟ್‌ನಲ್ಲಿ ವಿದ್ಯಾಭರಣ್ ತಾಯಿ ಮಾತನಾಡಿದ್ದು ʻʻಆಕೆ ಮೆಸೇಜ್‌ ಮಾಡಿರುವುದೇ ಫೇಕ್‌ ಅಕೌಂಟ್‌ನಿಂದ. ಆಕೆಯನ್ನು ನಾವು ಸೊಸೆ ಎಂದು ಯಾವುತ್ತೂ ಹೇಳಿಲ್ಲ. ವೈಷ್ಣವಿ ಅವರನ್ನು ಇಷ್ಟ ಪಟ್ಟು ಸೊಸೆ ಮಾಡಿಕೊಳ್ಳುತ್ತೇವೆ ಎಂದು ಬಂದಿದ್ದು. ಈ ಥರ ನೂರು ಜನ ಆರೋಪ ಮಾಡುತ್ತಾರೆ. ನೀವು ಕೂಡ ಸಮಾಧಾನದಿಂದಿರಿ. ಆಕೆ ಯಾರು ಏನು ಎಂದು ತಿಳಿದುಕೊಂಡು ಮಾತನಾಡುತ್ತೇನೆ. ನಮ್ಮ ಕಡೆಯಿಂದ ತಪ್ಪಾಗಿದೆ ಹೌದು. ಕ್ಷಮೆಯಿರಲಿ. ಆಕೆ ಯಾರು, ಅವರ ಹಿಂದೆ ಯಾರಿದ್ದಾರೆ ಎಂಬುದು ಪತ್ತೆಹಚ್ಚಿ ಮುಂದೆ ಮಾತನಾಡುತ್ತೇನೆ. ಆಕೆ ಹೇಳಿಕೆ ನೀಡುವಷ್ಟು ನನ್ನ ಮಗ ಕೆಟ್ಟವನಲ್ಲ. ಸಮಯ ಕೊಡಿʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ | Vaishnavi Gowda |ʻʻಮಗಳ ಮೇಲೆ ಆಪಾದನೆ ಮಾಡಿದರೆ ಕಮಿಷನರ್‌ವರೆಗೂ ಹೋಗುತ್ತೇವೆʼʼ: ವೈಷ್ಣವಿ ಪೋಷಕರು

ವಿದ್ಯಾಭರಣ್ ಕೂಡ ಮಾಧ್ಯಮಗಳ ಮುಂದೆ ಈ ವಿಷಯವನ್ನು ಹೇಳುತ್ತಲೇ ಇದ್ದಾರೆ. ʻʻನನಗೆ ಗರ್ಲ್ ಫ್ರೆಂಡ್ ಇದ್ದದ್ದು ನಿಜ. ಆದರೆ, ನಾನು ಯಾರೊಂದಿಗೂ ಕೆಟ್ಟದ್ದಾಗಿ ನಡೆದುಕೊಂಡಿಲ್ಲ. ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆʼʼ ಎಂದು ಆರೋಪಿಸಿದ್ದರು.

ಇದನ್ನೂ ಓದಿ | Vaishnavi Gowda | ಆಡಿಯೊ ಲೀಕ್‌ ಮಾಡಿದ ನಟಿಯ ವಿರುದ್ಧ ನಟ ವಿದ್ಯಾಭರಣ್‌ ದೂರು; ಅದರಲ್ಲೇನಿದೆ?

Exit mobile version