ಬೆಂಗಳೂರು: `ವೀಕೆಂಡ್ ವಿತ್ ರಮೇಶ್‘ ಶೋದಲ್ಲಿ (Weekend With Ramesh) ಈ ವಾರ ಡ್ಯಾನ್ಸ್ ಕೊರಿಯೋಗ್ರಫರ್ ಆಗಿರುವ ಚಿನ್ನಿ ಪ್ರಕಾಶ್ ಮಾಸ್ಟರ್ ಆಗಮಿಸಲಿದ್ದರೆ, ಭಾನುವಾರದ ಎಪಿಸೋಡ್ಗೆ ವೈದ್ಯ, ಲೇಖಕ, ಥಟ್ ಅಂತ ಹೇಳಿʼ ಕಾರ್ಯಕ್ರಮದ ನಿರೂಪಕ ನಾ. ಸೋಮೇಶ್ವರ್ ಆಗಮಿಸಲಿದ್ದಾರೆ. ಇದೀಗ ‘ವೀಕೆಂಡ್ ವಿತ್ ರಮೇಶ್’ ಶೋನಲ್ಲಿ ಅವರ ಲವ್ಸ್ಟೋರಿ ಹೊರಬಿದ್ದಿದೆ.
ʻವೀಕೆಂಡ್ ವಿತ್ ರಮೇಶ್ʼ ಶೋದಲ್ಲಿ ನಾ. ಸೋಮಶ್ವರ್ ಅವರು ಬೆಂಗಳೂರಿನ ಮಲ್ಲೇಶ್ವರ ಹಾಗೂ ತಮ್ಮ ಪ್ರೇಮವಿವಾಹದ ಕುರಿತು ಮನಚಿಚ್ಚಿ ಮಾತನಾಡಿದರು. ನಾ. ಸೊಮೇಶ್ವರ ಅವರ ಪತ್ನಿ ರುಕ್ಮಾವತಿ ವೇದಿಕೆ ಬಂದು ತಮ್ಮ ಲವ್ ಸ್ಟೋರಿ ಕುರಿತು ಮಾತನಾಡಿದರು. ʻʻನಮ್ಮಿಬ್ಬರದ್ದು ಪ್ರೇಮ ವಿವಾಹ. ಯಾರಿಗೂ ತೊಂದರೆ ಆಗಬಾರದು ಎಂದು ಸರಳವಾಗಿ ಮದುವೆ ಆದೆವು. ಬಂಧುಗಳಿಗಿಂತ ಹೆಚ್ಚಾಗಿ ಸ್ನೇಹಿತರು ಬಂದು ನಿಂತರುʼʼ ಎಂದರು. ನಾ. ಸೊಮೇಶ್ವರ ಅವರು ಮಾತನಾಡಿ ʻʻನಿಜ ಹೇಳಬೇಕು ಎಂದರೆ ಬರಿಗೈಯಲ್ಲಿ ಹೋಗಿ ನಾವಿಬ್ಬರು ಮದುವೆ ಆದದ್ದುʼʼ ಎಂದು ಹೇಳಿದರು.
ನಾ. ಸೋಮೇಶ್ವರ ಅವರು 1955ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿಸಿದರು. ಅಂದು ಬೆಂಗಳೂರು ಯಾವ ರೀತಿಯಲ್ಲಿತ್ತು ಎಂಬುದನ್ನು ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್ನಲ್ಲಿ ಅವರು ವಿವರಿಸಿದ್ದಾರೆ.
‘ಮಲ್ಲೇಶ್ವರದಲ್ಲಿ ಪ್ರಶಾಂತ ರಸ್ತೆ ಇತ್ತು. ಮಳೆ ಬಂತು ಎಂದರೆ ಕಾಗೆ ಬಂಗಾರ ಹುಡುಕಿಕೊಂಡು ಹೋಗುತ್ತಿದ್ದೆವು. ಈಡುಗಾಯಿ ಒಡೆಯೋದನ್ನು ಕಾಯುತ್ತಿದ್ದೆವು. ಮೀನು ಎಂದು ಹಿಡಿದುಕೊಂಡು ಬರುತ್ತಿದೆ. ಮರುದಿನ ಅದು ಕಪ್ಪೆ ಆಗಿರುತ್ತಿತ್ತು. ಅನೇಕ ನೆನಪುಗಳ ಸಾಲು ಬರುತ್ತಿದೆ’ ಎಂದು ನಾ. ಸೋಮೇಶ್ವರ ಅವರು ವಿವರಿಸಿದ್ದಾರೆ.
ಇದನ್ನೂ ಓದಿ: Weekend With Ramesh: ನೃತ್ಯ ಲೋಕದ ಲೆಜೆಂಡ್; ನಡೆದಾಡುವ ಗ್ರಂಥಾಲಯ ಈ ವೀಕೆಂಡ್ ಅತಿಥಿಗಳು
ವೀಕೆಂಡ್ ವಿತ್ ರಮೆಶ್ ಪೋಸ್ಟ್
ನಾ. ಸೋಮೇಶ್ವರ್
ಚಂದನ ವಾಹಿನಿಯಲ್ಲಿ ʻಥಟ್ ಅಂತ ಹೇಳಿʼ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ಕಾರ್ಯಕ್ರಮ 4000 ಕಂತುಗಳನ್ನು ದಾಟಿ ಮುಂದುವರಿದು ಭಾರತದ ಟೆಲಿವಿಷನ್ ಇತಿಹಾಸದಲ್ಲೇ ಒಂದು ದಾಖಲೆಯನ್ನು ಸೃಷ್ಟಿಸಿದೆ. ಇವರು ವೃತ್ತಿಯಿಂದ ವೈದ್ಯರಾಗಿದ್ದಾರೆ. ಹಾಗೂ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ‘ಜೀವನಂದಿ’ ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. 2004ರಲ್ಲಿ ವೈದ್ಯಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಆರ್ಯಭಟ್ಟ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದೆ.