Site icon Vistara News

Year Ender 2023: ಈ ವರ್ಷ ಸುದ್ದಿಯಲ್ಲಿದ್ದ ಟಿವಿ ಸ್ಟಾರ್‌ಗಳಿವರು!

Year Ender 2023TV Stars Made Headlines

ಬೆಂಗಳೂರು: 2023ಕ್ಕೆ (Year Ender 2023) ಟಾಟಾ ಹೇಳುವ ಸಮಯ ಬಂದಾಯ್ತು. ಹೊಸ ವರ್ಷವನ್ನು ಸ್ವಾಗತಿಸಲು ಇನ್ನು ಕೆಲವೇ ದಿನಗಳಷ್ಟೆ ಬಾಕಿ. 2023ರಲ್ಲಿ ಸಿನಿ ಲೋಕ ಮಾತ್ರವಲ್ಲ, ಸಣ್ಣ ಪರದೆಯಲ್ಲಿ ಮಿಂಚಿದವರು ಕೂಡ ಸಾಕಷ್ಟು ವಿವಾದಗಳಿಂದ ಸುದ್ದಿಯಾಗಿದ್ದರು. ಅನೇಕ ಉದಯೋನ್ಮುಖ ತಾರೆಗಳಿಗೆ ಇದು ಪ್ರಮುಖ ವರ್ಷವಾಗಿತ್ತು. ಈ ವರ್ಷ ಕಿರುತೆರೆ ಲೋಕದ ಸ್ಟಾರ್‌ಗಳು ಹೇಗೆಲ್ಲ ಸುದ್ದಿಯಾಗಿದ್ದರು ಎಂಬುದನ್ನು ನೋಡೋಣ.

ಎಲ್ವಿಶ್ ಯಾದವ್

ಬಿಗ್‌ ಬಾಸ್‌ ಒಟಿಟಿ 2 ವಿಜೇತ ಎಲ್ವಿಶ್ ಯಾದವ್ ವಿರುದ್ಧ ಕೇಸ್‌!

ಈ ವರ್ಷದ ಆರಂಭದಲ್ಲಿ ‘ಬಿಗ್ ಬಾಸ್ OTT’ ಸೀಸನ್-2 ಗೆದ್ದ ನಂತರ ಎಲ್ವಿಶ್ ಯಾದವ್ ಖ್ಯಾತಿ ಗಳಿಸಿದರು. ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಯೂಟ್ಯೂಬರ್, ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಹಾವು ಮತ್ತು ಅವುಗಳ ವಿಷವನ್ನು ಸರಬರಾಜು ಮಾಡುತ್ತಿದ್ದ ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿತ್ತು. ಎಲ್ವಿಶ್ ಯಾದವ್ ಅವರು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗಾಗಿ ವಿಡಿಯೊಗಳನ್ನು ಶೂಟ್ ಮಾಡಲು ಹಾವುಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಮನಿಷಾ ರಾಣಿ

ಮನಿಷಾ ರಾಣಿ ಅವರ ವೈಯಕ್ತಿಕ ಜೀವನವು ಹಲವು ಏರಿಳಿತಗಳಿಂದ ತುಂಬಿತ್ತು. 2023ರಲ್ಲಿ ಮನಿಷಾ ರಾಣಿ ಬಿಗ್ ಬಾಸ್ ಒಟಿಟಿ 2ರಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆದರು. ನಟಿ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದರು. ಸಾಕಷ್ಟು ಫಾಲೋವರ್ಸ್‌ ಹೊಂದಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಖ್ಯಾತಿ ಪಡೆದ ಬಳಿಕ ʻನ್ಯಾಷನಲ್‌ ಕ್ರಶ್‌ʼʼ ಎಂಬ ಹೆಗ್ಗಳಿಕೆಯನ್ನು ಗಳಿಸಿದರು. ಬಾಸ್ ಒಟಿಟಿ 2ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಟೋನಿ ಕಕ್ಕರ್ ಜತೆಗೆ ಜಮ್ನಾ ಪಾರ್ ಎಂಬ ಹಿಟ್ ಹಾಡಿನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Urfi Javed: ಪೊಲೀಸ್‌ ಕಸ್ಟಡಿಗೆ ಉರ್ಫಿ ಜಾವೇದ್‌; ವಿಡಿಯೊ ವೈರಲ್‌!

ಇದನ್ನೂ ಓದಿ: Year Ender 2023: ಕ್ರಿಸ್‌ಮಸ್‌ ಆಚರಣೆಯನ್ನು ನೋಡಲೇಬೇಕಾದ ಜಗತ್ತಿನ ಟಾಪ್‌ 10 ನಗರಗಳಿವು

ಅಭಿಷೇಕ್ ಮಲ್ಹಾನ್

ಅಭಿಷೇಕ್ ಮಲ್ಹಾನ್ ಅವರು ಬಿಗ್ ಬಾಸ್ OTT 2ಗೆ ಪ್ರವೇಶಿಸುವ ಮೊದಲು ಜನಪ್ರಿಯ ಯೂಟ್ಯೂಬರ್ ಆಗಿದ್ದರು. ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಅಭಿಷೇಕ್ ಅವರ ಪ್ರಾಮಾಣಿಕತೆ ಮತ್ತು ಬಿಗ್‌ ಬಾಸ್‌ ಮನೆಯಲ್ಲಿನ ಅವರ ಮನರಂಜನೆಗೆ ವೀಕ್ಷಕರ ಮನ ಗೆದ್ದರು. ಈಗ ಟೆಂಪ್ಟೇಶನ್ ಐಲ್ಯಾಂಡ್ ಎಂಬ ಮತ್ತೊಂದು ರಿಯಾಲಿಟಿ ಶೋಗೆ ಪ್ರವೇಶಿಸಿದ್ದಾರೆ.

ಸನ್ನಿ ಆರ್ಯ

ಸಲ್ಮಾನ್ ಖಾನ್ ಹೋಸ್ಟ್ ಮಾಡಿದ ಬಿಗ್ ಬಾಸ್ 17ನಲ್ಲಿ ಸನ್ನಿ ಆರ್ಯ ಯೂಟ್ಯೂಬರ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ, ಮನೆಯಿಂದ ಹೊರ ನಡೆದರು. ಅಭಿಷೇಕ್ ಕುಮಾರ್ ಮತ್ತು ಅರುಣ್ ಮಾಶೆಟ್ಟಿ ನಡುವೆ ವಾಗ್ವಾದ ಉಂಟಾಗಿತ್ತು. ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸನ್ನಿ ಆರ್ಯ ಕೋಪಗೊಂಡು, ಅಭಿಷೇಕ್ ಅವರ ಕಾಲರ್ ಹಿಡಿದು ಬೆದರಿಕೆ ಹಾಕಿದ್ದರು. ಇದು ಬಿಗ್ ಬಾಸ್ ನ ಅತಿ ದೊಡ್ಡ ನಿಯಮ ಉಲ್ಲಂಘನೆಯಾಗಿತ್ತು.

ಇದನ್ನೂ ಓದಿ: BBK SEASON 10: ಬಿಗ್‌ಬಾಸ್‌ ಮನೆಯಲ್ಲೂ ಬಿಡ್ಡಿಂಗ್‌ ಜೋರು; ಯಾರು, ಯಾವ ತಂಡ?

ಅರ್ಚನಾ ಗೌತಮ್

ಹಿಂದಿ ಬಿಗ್ ಬಾಸ್-16ರ ಟಾಪ್ 5 ಫೈನಲಿಸ್ಟ್ ಅರ್ಚನಾ ಗೌತಮ್ ಅವರ ತಂದೆ ತಮ್ಮ ಮಗಳಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪಿಎ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಪ್ರಿಯಾಂಕಾ ಅವರ ಪಿಎ ಸಂದೀಪ್ ಕುಮಾರ್ ವಿರುದ್ಧ ಪರತಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಜತೆಗೆ ಜಾತಿ ನಿಂದನೆಯನ್ನೂ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಇದು ಸಾಕಷ್ಟು ಸುದ್ದಿಯಾಗಿತ್ತು.

ಶಿವ ಠಾಕ್ರೆ

ಶಿವ ಠಾಕ್ರೆ ಬಿಗ್ ಬಾಸ್ 16ರ ಮೊದಲ ರನ್ನರ್ ಅಪ್ ಆದರು. ಶಿವ್ ಠಾಕ್ರೆ ಅವರು ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾದೊಂದಿಗೆ ತಮ್ಮ ಪ್ರಯಾಣವನ್ನು ಮುಂದುವರಿಸಲು ಸಿದ್ಧರಾಗಿದ್ದಾರೆ.

ಉರ್ಫಿ ಜಾವೇದ್

ಉರ್ಫಿ ಜಾವೇದ್ ಅವರು ‘ಬಿಗ್ ಬಾಸ್ ಒಟಿಟಿ’ಯಲ್ಲಿ ಭಾಗವಹಿಸಿದ ನಂತರ ಖ್ಯಾತಿಯನ್ನು ಗಳಿಸಿದರು. ಹಲವಾರು ಟಿವಿ ಶೋಗಳಲ್ಲಿಯೂ ನಟಿಸಿದ್ದಾರೆ. ಅವರು ‘ಬಡೆ ಭಯ್ಯಾ ಕಿ ದುಲ್ಹನಿಯಾ’ ಚಿತ್ರದಲ್ಲಿ ಅವ್ನಿ ಪಾತ್ರವನ್ನು ಮರು ಸೃಷ್ಟಿಸಿ ಹೆಸರುವಾಸಿಯಾಗಿದ್ದಾರೆ. ನಗ್ನತೆಯ ವಿಚಾರಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿಂದೆ ಅಷ್ಟೇ, ಉರ್ಫಿ ಜಾವೇದ್ ಮುಂಬೈ ಬೀದಿಯಲ್ಲಿ ಬಿಕಿನಿ ಧರಿಸಿ ಓಡಾಡಿದರು ಎನ್ನುವ ಕಾರಣಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಷಯ ಗೊತ್ತಾಗುತ್ತಿದ್ದಂತೆ ಉರ್ಫಿ ಜಾವೇದ್ ಗರಂ ಆಗಿದ್ದರು. ʻನನ್ನ ದೇಹ, ನನ್ನ ಇಷ್ಟ. ಅತ್ಯಾಚಾರಿಗಳ ಮೇಲೆ ದೂರು ನೀಡಿ, ನನ್ನ ಮೇಲಲ್ಲʼ ಎಂದು ದೂರು ನೀಡಿದವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

Exit mobile version