Site icon Vistara News

Yuva Movie: ಬರ್ತಿದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ ʻಯುವ; ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶ!

Yuva Movie Premier On star Suvarna

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ “ಯುವ” (Yuva Movie) ಸಿನಿಮಾವನ್ನು ಪ್ರಸಾರಮಾಡಲಿದೆ. ಜತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ.

ಇದೇ ಮೊದಲ ಬಾರಿಗೆ ದೊಡ್ಮನೆಯ ಕುಡಿ, ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್ ಕುಮಾರ್ “ಯುವ” ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಜತೆಗೆ ʻಕಾಂತಾರʼ ಬೆಡಗಿ ಸಪ್ತಮಿ ಗೌಡ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಥಿಯೇಟರ್ ಅಲ್ಲಿ ಜನ ಮನ ಗೆದ್ದ ‘ಯುವ’ ಸಿನಿಮಾ ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಸಿನಿಮಾದ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ಈ ವಾರಾಂತ್ಯದಲ್ಲಿ ನೋಡುಗರಿಗೆ ಭರ್ಜರಿ ಮನರಂಜನೆ ಸಿಗೋದಂತು ಖಚಿತ.

ಬೈಕ್ ಗೆಲ್ಲುವ ಅವಕಾಶ

ಅಷ್ಟೇ ಅಲ್ಲದೆ ಸ್ಟಾರ್ ಸುವರ್ಣ ವಾಹಿನಿಯು ನೋಡುಗರಿಗೊಂದು ಸುವರ್ಣಾವಕಾಶವನ್ನು ನೀಡುತ್ತಿದೆ. ‘ಯುವ’ ಸಿನಿಮಾ ನೋಡ್ತಿರುವಾಗ ಸ್ಟಾರ್ ಸುವರ್ಣ ಲೋಗೋ ಕೆಳಗಡೆ ಎಷ್ಟು ಬಾರಿ ಬೈಕ್ ಚಿತ್ರ ಬರುತ್ತದೆ ಎಂಬುದನ್ನು ನೋಡಿ, ಸರಿಯಾದ ಉತ್ತರ ಕೊಟ್ಟ ಅದೃಷ್ಟಶಾಲಿ ವಿಜೇತರಿಗೆ ‘ಯುವ’ ಸಿನಿಮಾದಲ್ಲಿ ಯುವರಾಜ್ ಕುಮಾರ್ ಬಳಸಿರೋ ಬೈಕ್ ಬಹುಮಾನವಾಗಿ ಸಿಗಲಿದೆ.

ಇದನ್ನೂ ಓದಿ: Hamare Baarah: ಮುಸ್ಲಿಂ ಮಹಿಳೆಯರ ಕುರಿತ ʻಹಮಾರೆ ಬಾರಾʼ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ

ಯುವರಾಜ್ ಕುಮಾರ್ ಹಾಗು ಸಪ್ತಮಿ ಗೌಡ ಅಭಿನಯದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ “ಯುವ” ಇದೇ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್​’ (Hombale Films) ನಿರ್ಮಿಸುತ್ತಿರುವ, ಯುವ ರಾಜ್‌ಕುಮಾರ್ ಅಭಿನಯದ ಚಿತ್ರ ʼಯುವʼ (Yuva Movie). ಮಾರ್ಚ್‌ 29ರಂದು ತೆರೆ ಕಂಡಿತ್ತು. ಸುಮಾರು 3 ಕೋಟಿ ರೂ. ಮೊತ್ತಕ್ಕೆ ‘ಯುವ’ ಆಡಿಯೊ ರೈಟ್ಸ್ ಆನಂದ್ ಆಡಿಯೊ ಪಾಲಾಗಿದೆ ಎನ್ನಲಾಗಿದೆ.

Exit mobile version