ಬೆಂಗಳೂರು: ಜೀ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ, ರಿಯಾಲಿಟಿ ಶೋ ಸೇರಿದಂತೆ ಜೀ ಕನ್ನಡ ಕುಟುಂಬ ಅವಾರ್ಡ್ಸ್-2022 (Zee Kutumba Awards) ಈ ಬಾರಿಯೂ ನಡೆದಿದೆ. ಹಲವರು ಪ್ರಶಸ್ತಿ ಗೆದ್ದ ಖುಷಿಯನ್ನು ಹಂಚಿಕೊಂಡರೆ, ಇನ್ನು ಕೆಲವರು ಧಾರಾವಾಹಿಯೊಟ್ಟಿಗಿನ, ಪ್ರೇಕ್ಷಕರೊಂದಿಗಿನ ಸಂಬಂಧದ ಬಗ್ಗೆ ಅಭಿಮತ ವ್ಯಕ್ತಪಡಿಸಿದರು.
ನಟಿ ಉಮಾಶ್ರೀ ತಮ್ಮ ಬದುಕಿನ ಬಗ್ಗೆ ಹೇಳಿದ್ದು ಹೆಚ್ಚು ಗಮನ ಸೆಳೆಯಿತು. ನೆಚ್ಚಿನ ಅಮ್ಮ ಪ್ರಶಸ್ತಿಯನ್ನು ಅವರು ತಮ್ಮದಾಗಿಸಿಕೊಂಡರು. ಅಪರೂಪದ ಅಭಿಮಾನಿ ಅವಾರ್ಡ್ ಅನ್ನು ಸುಮಾ ಅವರಿಗೆ ನೀಡಲಾಗಿದ್ದು, ಅವರಿಗೆ ಎರಡೂ ಕಣ್ಣು ಕಾಣುವುದಿಲ್ಲ. ಆದರೂ ಕಲಾವಿದರ ಧ್ವನಿಯನ್ನು ಕೇಳಿ ಯಾರೆಂಬುದನ್ನು ಹೇಳುತ್ತಾರೆ. ಹಲವಾರು ಧಾರಾವಾಹಿಯನ್ನು ಪ್ರತಿ ದಿನ ಅವರು ಕೇಳಿಸಿಕೊಳ್ಳುತ್ತಾರಂತೆ. ಹಿಟ್ಲರ್ ಕಲ್ಯಾಣ ಧಾರಾವಾಹಿಯ ಪೋಷಕ ನಟಿಯಾಗಿ ದುರ್ಗಾ ಅವರು ಪ್ರಶಸ್ತಿ ಪಡೆದುಕೊಂಡರು.
ಇದನ್ನೂ ಓದಿ | Filmfare Awards 2022 | ಈ ಬಾರಿ ಫಿಲ್ಮ್‌ಫೇರ್ ಅವಾರ್ಡ್ ಬೆಂಗಳೂರಿನಲ್ಲಿ: ಅಡ್ವಾನ್ಸ್ ಬುಕ್ಕಿಂಗ್ ಓಪನ್!
ಜೀ ಕನ್ನಡದ ನೆಚ್ಚಿನ ಅಜ್ಜಿ ಅವಾರ್ಡ್ ಗಿರಿಜಮ್ಮ, ಅತ್ತೆಯಾಗಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಪರಿಮಳ ಅವರ ಪಾಲಾಗಿದೆ. ನೆಚ್ಚಿನ ಸೊಸೆಯಾಗಿ ‘ಪಾರು’ ಧಾರಾವಾಹಿಯ ಮೋಕ್ಷಾ ಪ್ರಭು ಅವಾರ್ಡ್ ಸ್ವೀಕಾರ ಮಾಡಿದರು. ನೆಚ್ಚಿನ ಅಳಿಯ ಆಗಿ ಸತ್ಯ ಧಾರಾವಾಹಿಯ ಕಾರ್ತಿಕ್ ಸೆಲೆಕ್ಟ್ ಆಗಿದ್ದಾರೆ. ನೆಚ್ಚಿನ ಪೋಷಕ ನಟನಾಗಿ ಪಾರು ಧಾರಾವಾಹಿಯ ವೀರಯ್ಯ ದೇವ ಆಯ್ಕೆ ಆಗಿದ್ದಾರೆ. ನೆಚ್ಚಿನ ನಾಯಕ ನಟನಾಗಿ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಅಭಿರಾಮ್ ಜಯಶಂಕರ್ ಆಯ್ಕೆಯಾದರೆ, ನೆಚ್ಚಿನ ನಾಯಕಿ ನಟಿ ಅವಾರ್ಡ್ ಇಬ್ಬರ ಪಾಲಾಗಿದೆ .
ಹಿಟ್ಲರ್ ಕಲ್ಯಾಣ ಧಾರಾವಾಹಿಯ ಲೀಲಾಗೆ ಹಾಗೂ ಸತ್ಯ ಧಾರಾವಾಹಿಯ ಸತ್ಯಗೆ ಅವಾರ್ಡ್ ದೊರಕಿದೆ. ಜನ ಮೆಚ್ಚಿದ ಮಾವ ಆಗಿ ಪಾರು ಧಾರಾವಾಹಿಯ ರಘು ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ | Kantara Movie | ಆಸ್ಕರ್ ಅವಾರ್ಡ್‌ಗೆ ಕಾಂತಾರ ನಾಮಿನೇಟ್ ಮಾಡಿ: ಶುರುವಾಯ್ತು ಟ್ವಿಟರ್ ಆಂದೋಲನ!