Site icon Vistara News

Choreographer Chaitanya Death: ತೆಲುಗು ಕೋರಿಯೊಗ್ರಾಫರ್‌ ಚೈತನ್ಯ ಆತ್ಮಹತ್ಯೆ

Telugu choreographer Chaitanya dies by suicide

ಬೆಂಗಳೂರು : ತೆಲುಗು ಕೋರಿಯೊಗ್ರಾಫರ್‌ ಚೈತನ್ಯ (Choreographer Chaitanya Death) ಏಪ್ರಿಲ್ 30ರಂದು ನಿಧನರಾಗಿದ್ದಾರೆ. ಚೈತನ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಾಲ ತೀರಿಸಲಾಗದೇ ಮನನೊಂದು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ವರದಿಯಾಗಿದೆ. ಚೈತನ್ಯ ಅವರು ತೆಲುಗಿನ ಜನಪ್ರಿಯ ಡ್ಯಾನ್ಸ್‌ ಶೋ ʻಧೀʼ ಮೂಲಕ ಖ್ಯಾತಿ ಗಳಿಸಿದ್ದರು.

ಇಂಡಿಯಾ ಟುಡೇ ವರದಿ ಪ್ರಕಾರ ಚೈತನ್ಯ ಅವರು ಸಾಯುವ ಮುನ್ನ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ತಮ್ಮ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ

ವಿಡಿಯೊದಲ್ಲಿ ಚೈತನ್ಯ ಹೇಳಿದ್ದೇನು?

ವಿಡಿಯೊದಲ್ಲಿ ʻʻನನ್ನ ತಾಯಿ, ತಂದೆ ಮತ್ತು ಸಹೋದರಿ ನನ್ನನ್ನು ಯಾವುದೇ ಸಮಸ್ಯೆಗಳನ್ನು ಎದುರಿಸಲು ಬಿಡದೆ ಚೆನ್ನಾಗಿ ನೋಡಿಕೊಂಡರು. ನನ್ನ ಎಲ್ಲ ಸ್ನೇಹಿತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಅನೇಕ ಜನರಿಗೆ ತೊಂದರೆ ನೀಡಿದ್ದೇನೆ ಮತ್ತು ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ. ಹಣದ ವಿಷಯದಲ್ಲಿ ನಾನು ನನ್ನ ಒಳ್ಳೆಯತನವನ್ನು ಕಳೆದುಕೊಂಡೆ. ಕೇವಲ ಸಾಲ ತೆಗೆದುಕೊಳ್ಳುವುದಲ್ಲ, ಅದನ್ನು ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿರಬೇಕು. ಆದರೆ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಪ್ರಸ್ತುತ, ನಾನು ನೆಲ್ಲೂರಿನಲ್ಲಿ ಇದ್ದೇನೆ. ಇದು ನನ್ನ ಕೊನೆಯ ದಿನವಾಗಿದೆ. ನನ್ನ ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಾನು ಎದುರಿಸಲು ಸಾಧ್ಯವಿಲ್ಲ, ”ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮಾನಸಿಕ ಖಿನ್ನತೆಯಿಂದ ಕುದೂರು ಠಾಣೆಯ ಹೆಡ್‌ ಕಾನ್ಸ್‌ಟೇಬಲ್‌ ಆತ್ಮಹತ್ಯೆಗೆ ಶರಣು

ಚೈತನ್ಯ ಅವರ ಸಾವಿನ ಸುದ್ದಿ ವೈರಲ್‌ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಸೋಷಿಯಲ್‌ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.

Exit mobile version