Site icon Vistara News

Chalaki Chanti: ತೆಲುಗು ಹಾಸ್ಯ ನಟ ಚಾಲಾಕಿ ಚಂಟಿಗೆ ಹೃದಯಾಘಾತ: ಐಸಿಯುಗೆ ದಾಖಲು

Telugu comedy actor Chalaki Chanti suffers heart attack

ಬೆಂಗಳೂರು: ತೆಲುಗು ಹಾಸ್ಯ ನಟ ಚಾಲಾಕಿ ಚಂಟಿ (Chalaki Chanti) ಏಪ್ರಿಲ್ 22ರಂದು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ, ಅವರ ಆರೋಗ್ಯದ ಬಗ್ಗೆ ವೈದ್ಯಕೀಯ ಬುಲೆಟಿನ್ ಬಿಡುಗಡೆಯಾಗಿಲ್ಲ. ಸ್ನೇಹಿತರಾಗಲಿ ಅವರ ಕುಟುಂಬಸ್ಥರಾಗಲಿ ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.

ಚಾಲಾಕಿ ಚಂಟಿ ಅವರ ನಿಜವಾದ ಹೆಸರು ವಿನಯ್ ಮೋಹನ್‌. ʻಈಟಿವಿʼಯಲ್ಲಿ ಪ್ರಸಾರವಾಗುವ ಹಾಸ್ಯ ಕಾರ್ಯಕ್ರಮ ʻಜಬರ್ದಸ್ತ್‌ನಲ್ಲಿʼ ಕಾಣಿಸಿಕೊಂಡಿದ್ದರು. ನಾಗಾರ್ಜುನ ಹೋಸ್ಟ್ ಮಾಡಿದ ಬಿಗ್ ಬಾಸ್ ತೆಲುಗು ಆರನೇ ಸೀಸನ್‌ನಲ್ಲಿ ಭಾಗವಹಿಸಿದರು. ಆದರೆ, ಅವರು ಕಾರ್ಯಕ್ರಮದಿಂದ ಮಧ್ಯದಲ್ಲೇ ಹೊರನಡೆದರು. ಇದೀಗ ಅವರ ಅಭಿಮಾನಿಗಳು ಶೀಘ್ರ ಗುಣಮುಖರಾಗಲಿ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಹಾರೈಕೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Dharwad News: ಕಾಂಗ್ರೆಸ್ ಸಭೆಯಲ್ಲಿ ಹೃದಯಾಘಾತದಿಂದ ಕಾರ್ಯಕರ್ತ ಸಾವು

ರಾಹು (2019) ಮತ್ತು ತ್ರಿವಿಕ್ರಮನ್ (2016) ಸಿನಿಮಾದಲ್ಲಿ ಚಾಲಾಕಿ ಚಂಟಿ ನಟಿಸಿದ್ದಾರೆ. ಚಾಲಾಕಿ ಚಂಟಿ ಅವರ ನಿಜವಾದ ಹೆಸರು ವಿನಯ್ ಮೋಹನ್. RJ ಆಗಿ ರೆಡಿಯೊ ಮಿರ್ಚಿಗೆ ಸೇರಿದ್ದರು. ʻಚಂಟಿ ಬಂಟಿʼ ಕಾರ್ಯಕ್ರಮದಿಂದ ಚಂಟಿ ಎಂಬ ಹೆಸರನ್ನು ಪಡೆದರು. ʻಜಲ್ಲುʼ ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟರು.

Exit mobile version