Site icon Vistara News

Telugu Film | ಹೊಸ ನಿಯಮ ಜಾರಿಗೆ ತಂದ ಟಾಲಿವುಡ್‌: ಇದು ಕಾಂತಾರ ಎಫೆಕ್ಟ್‌, ವೈರಲ್‌ ಆಯ್ತು ಪ್ರೆಸ್‌ ನೋಟ್‌!

telugu film

ಬೆಂಗಳೂರು: ಚಿತ್ರರಂಗದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳ ಸದ್ದು ಹೆಚ್ಚಾಗಿದೆ. ತೆಲುಗು ರಾಜ್ಯಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಬೇರೆ ಭಾಷೆಯ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಕಲೆಕ್ಷನ್‌ ಮಾಡುತ್ತಿದೆ. ಈ ನಿಟ್ಟಿನಲ್ಲಿ ತೆಲುಗು ಸಿನಿಮಾಗಳಿಗೆ (Telugu Film) ಮೊದಲ ಆದ್ಯತೆ ಆಂಧ್ರಪ್ರದೇಶದಲ್ಲಿ ಸಿಗಬೇಕು ಎಂದು ಹೊಸ ಚರ್ಚೆ ಒಂದು ಶುರುವಾಗಿದೆ. ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಈಗಾಗಲೇ ಪ್ರೆಸ್‌ ನೋಟ್‌ ಒಂದನ್ನು ಶೇರ್‌ ಮಾಡಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಬೇರೆ ಭಾಷೆಯಲ್ಲಿ ಡಬ್‌ ಆಗುತ್ತಿದೆ. ಆಂಧ್ರದಲ್ಲಿ ಸಂಕ್ರಾಂತಿ ಮತ್ತು ದಸರಾ, ದೀಪಾವಳಿಗೆ ಹೆಚ್ಚಾಗಿ ತೆಲುಗು ಸಿನಿಮಾಗಳಿಗೆ ಆದ್ಯತೆ ನೀಡಬೇಕು ಎನ್ನುವ ಚರ್ಚೆ ಶುರುವಾಗಿದೆ. ಆಂಧ್ರದಲ್ಲಿ ಸಂಕ್ರಾಂತಿ ಮತ್ತು ದೀಪಾವಳಿ ದೊಡ್ಡ ಹಬ್ಬ. ಆ ಸಂದರ್ಭದಲ್ಲಿ ಪ್ರೇಕ್ಷಕರಿಗೆ ರಜೆಗಳು ಸಿಗುವುದರಿಂದ ಚಿತ್ರಮಂದಿರಕ್ಕೆ ಬರುತ್ತಾರೆ. ಈ ಹಬ್ಬಗಳ ಸಂದರ್ಭದಲ್ಲಿ ಸಿನಿಮಾಗಳನ್ನು ಹೆಚ್ಚಾಗಿ ಆಂಧ್ರದಲ್ಲಿ ಬಿಡುಗಡೆ ಮಾಡುತ್ತಾರೆ. ಇದೀಗ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ | Pavitra Lokesh | ಪವಿತ್ರಾ ಲೋಕೇಶ್‌-ನರೇಶ್‌ ನಡುವೆ ಬ್ರೇಕಪ್‌ ಆಗಿದೆ ಅಂತಿದೆ ಟಾಲಿವುಡ್‌!

ಪ್ರೆಸ್‌ ನೋಟ್‌ನಲ್ಲಿ ಏನಿದೆ?
ʻʻಐದು ವರ್ಷಗಳ ಹಿಂದೆಯೇ ಸಕ್ರಾಂತಿ, ದಸರಾ ಸಂದರ್ಭದಲ್ಲಿ ಆಂಧ್ರದಲ್ಲಿ ತೆಲುಗು ಚಿತ್ರಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ತೆಲುಗು ನಿರ್ಮಾಪಕರ ಸಂಘ ತೀರ್ಮಾನ ಕೈಗೊಂಡಿತ್ತು. ನಿರ್ಮಾಪಕ ದಿಲ್‌ ರಾಜು ಅವರು ಈ ಬಗ್ಗೆ ಧ್ವನಿ ಎತ್ತಿದ್ದರು. ಇದೀಗ ಅವರ ಹೇಳಿಕೆ ಮುಂದಿಟ್ಟುಕೊಂಡು ಈ ಬಾರಿ ಸಂಕ್ರಾಂತಿಗೆ ಈ ನಿಯಮ ಜಾರಿಗೆ ತರಬೇಕುʼʼಎಂದು ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಪ್ರೆಸ್‌ನೋಟ್‌ ಬಿಡುಗಡೆಗೊಳಿಸಿದೆ.

ಇದನ್ನೂ ಓದಿ | Sneha Reddy | ಟಾಲಿವುಡ್‌ ಸ್ಟಾರ್‌ ಅಲ್ಲು ಅರ್ಜುನ್‌ ಪತ್ನಿ ಸ್ನೇಹಾ ರೆಡ್ಡಿ ಮಾಲಿವುಡ್‌ಗೆ ಎಂಟ್ರಿ: ನಟ ಯಾರು?

ತೆಲುಗು ಸಿನಿಮಾಗಳಿಗೆ ಹೆಚ್ಚು ಸ್ಕ್ರೀನ್‌!
ಮೂಲ ತೆಲುಗು ಸಿನಿಮಾಗಳಿಗೆ ಹೆಚ್ಚು ಸ್ಕ್ರೀನ್‌ ಕೊಡಬೇಕು ಆ ನಂತರವೇ ಡಬ್‌ ಸಿನಿಮಾಗಳಿಗೆ ಅವಕಾಶ ನೀಡಬೇಕು ಎನ್ನುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಚಿರಂಜೀವಿ ನಟನೆಯ ʻʻ’ವಾಲ್ತೇರು ವೀರಯ್ಯ’, ಬಾಲಕೃಷ್ಣ ನಟನೆಯ ‘ವೀರಸಿಂಹ ರೆಡ್ಡಿ’ ಸಿನಿಮಾಗಳು ಬಿಡುಗಡೆಗೆ ಸಿದ್ಧತೆ ನಡೆಸಿವೆ. ಅಖಿಲ್ ಅಕ್ಕಿನೇನಿ ‘ಏಜೆಂಟ್’ ಆಗಿ ಬರುತ್ತಿದ್ದಾರೆ. ಈ ಸಿನಿಮಾಗಳ ಜತೆಗೆ ತಮಿಳಿನ ‘ವಾರಿಸು’ ಹಾಗೂ ‘ತುನಿವು’ ಸಿನಿಮಾಗಳನ್ನು ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡುವ ಪ್ರಯತ್ನ ಆಗುತ್ತಿದೆ. ವಿಜಯ್ ಮತ್ತು ಅಜಿತ್‌ ಅವರಿಗೆ ತೆಲುಗು ರಾಜ್ಯಗಳಲ್ಲೂ ದೊಡ್ಡ ಅಭಿಮಾನಿ ಬಳಗ ಇದ್ದು,ತೆಲುಗಿಗೂ ಡಬ್ ಮಾಡಿ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಿರ್ಮಾಪಕ ದಿಲ್‌ರಾಜು ಹೇಳಿಕೆ ಅವರಿಗೇ ಮುಳುವಾಯ್ತಾ?
ದಿಲ್‌ರಾಜು ನಿರ್ಮಾಣದ ʻವಾರಿಸುʼ ಸಿನಿಮಾ ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್‌ ಆಗುತ್ತಿದೆ. ತೆಲುಗಿನಲ್ಲಿ ʻವಾರಸುಡುʼ ಹೆಸರಿನಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಅವರ ಹೇಳಿಕೆ ಅವರಿಗೇ ಸಂಕಷ್ಟ ಎದುರಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಚಿತ್ರವನ್ನು ತೆಲುಗಿನ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕಾಂತಾರ ಎಫೆಕ್ಟ್‌!
ಕಾಂತಾರ ಸಿನಿಮಾದಿಂದಾಗಿಯೂ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಕಾಂತಾರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಚಿರಂಜೀವಿ ನಟನೆಯ ʻಗಾಡ್‌ ಫಾದರ್‌ʼ ಹಾಗೂ ನಾಗಾರ್ಜುನ್‌ ನಟನೆಯ ʻದಿ ಘೋಸ್ಟ್‌ʼ ಚಿತ್ರಗಳು ರಿಲೀಸ್‌ ಆಗಿತ್ತು. ಆದರೆ ಕಾಂತಾರ ಸಿನಿಮಾ ಈ ಸಿನಿಮಾಗಳನ್ನು ಹಿಂದಿಕ್ಕಿ ಭರ್ಜರಿ ಕಲೆಕ್ಷನ್‌ ಮಾಡಿದೆ. ಇದರಿಂದಾಗಿ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಈ ನಿಯಮ ಜಾರಿಗೆ ತಂದಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ.

ಇದನ್ನೂ ಓದಿ | Actress Ramya | ಕಾಲಿವುಡ್‌ ನಟ ಧನುಷ್‌ ಜತೆ ಕಾಣಿಸಿಕೊಂಡ ಮೋಹಕ ತಾರೆ ರಮ್ಯಾ!

Exit mobile version