ಬೆಂಗಳೂರು: ಟಾಲಿವುಡ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯದ ಇತ್ತೀಚಿಗೆ ಬಿಡುಗಡೆಯಾದ ʻಶಾಕುಂತಲಂʼ ಸಿನಿಮಾ ಅಷ್ಟಾಗಿ ಯಶಸ್ಸು ಕಂಡಿಲ್ಲ. ಇದಾದ ಬಳಿಕ ನಿರ್ಮಾಪಕ ಚಿಟ್ಟಿಬಾಬು ಸಮಂತಾ ಅವರ ಚಲನಚಿತ್ರ ವೃತ್ತಿಜೀವನವು ಅಂತ್ಯ ಕಾಣುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಸಮಂತಾ ಪರೋಕ್ಷವಾಗಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ʻʻಕಿವಿಯಲ್ಲಿ ಕೂದಲು ಹೇಗೆ ಬೆಳೆಯುತ್ತದೆ” ಎಂಬ ಗೂಗಲ್ ಸರ್ಚ್ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡು ಚಿಟ್ಟಿ ಬಾಬುಗೆ ತಿರುಗೇಟು ನೀಡಿದ್ದರು. ಇದೀಗ ಮತ್ತೆ ಇವರಿಬ್ಬರ ಜಟಾಪಟಿ ತಾರಕಕ್ಕೇರಿದೆ. ಈ ಪೊಸ್ಟ್ ಬಗ್ಗೆ ನಿರ್ದೇಶಕ ಚಿಟ್ಟಿಬಾಬು ಸಂದರ್ಶನವೊಂದರಲ್ಲಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಸಮಂತಾ ಬಗ್ಗೆ ನಾನು ಬಾಯ್ಬಿಟ್ರೆ ಅಷ್ಟೇ ಕಥೆ!
ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಬಗ್ಗೆ ಚಿಟ್ಟಿಬಾಬು ಮಾತನಾಡಿ ʻʻಸಮಂತಾ ಅವರ ಬಗ್ಗೆ ನಾನು ಬಾಯ್ಬಿಟ್ರೆ ಅಷ್ಟೇ ಕಥೆ ಅವರದ್ದು, ನನ್ನ ಹೆಸರು ಹೇಳಿಲ್ಲ, ಹಾಗಾಗಿ ನಾನು ಕೂಡ ಆಕೆಯ ಹೆಸರು ಹೇಳುತ್ತಿಲ್ಲ. ನನ್ನ ಕಿವಿಯಲ್ಲಿರುವ ಕೂದಲಿನ ಬಗ್ಗೆ ಮಾತನಾಡುವ ಬದಲು ನನ್ನ ಮಾತಿನಲ್ಲಿರುವ ಸತ್ಯಾಸತ್ಯತೆ ಬಗ್ಗೆ ಮಾತನಾಡಿದ್ದರೆ ಚೆನ್ನಾಗಿತ್ತು. ಆಕೆ ಪರೋಕ್ಷವಾಗಿ ನಾಗ ಚೈತನ್ಯ ಅವರ ಮೇಲೆ ಆರೋಪಗಳನ್ನು ಮಾಡುತ್ತಿರುವುದು ಯಾಕೆ? ಮತ್ತೊಬ್ಬರಿಂದ ಪೋಸ್ಟ್ ಮಾಡಿಸಿ ಚೈತನ್ಯ ಅವರನ್ನು ವಿಲನ್ ರೀತಿ ತೋರ್ಪಡಿಸುವುದು ಯಾಕೆ? ಸಿಂಪತಿಗಾಗಿ ಹೀಗೆ ಮಾಡುತ್ತಿದ್ದಾರಾ? ಎಂದು ನಾನು ಹೇಳಿದ್ದೆ. ಆದರೆ ಆಕೆ ಏನೇನೋ ಪೋಸ್ಟ್ ಮಾಡುತ್ತಿದ್ದಾರೆ. ನಾನು ಮಾತಾನಾಡಿದ್ದರಲ್ಲಿ ತಪ್ಪಿದ್ದರೆ ಹೇಳಲಿ, ಅದು ಬಿಟ್ಟು ನನ್ನ ಕಿವಿಯಲ್ಲಿನ ಕೂದಲಿನ ಕಥೆ ಯಾಕೆ?ʼʼ ಎಂದು ಕೇಳಿದ್ದಾರೆ.
ಈ ಬಗ್ಗೆ ನಟಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೀರಾ ಎಂಬ ಸಂದರ್ಶಕರ ಪ್ರಶ್ನೆಗೆ ಚಿಟ್ಟಿಬಾಬು ಉತ್ತರಿಸಿ ʻʻಒಂದು ವೇಳೆ ಕ್ರಮ ಕೈಗೊಂಡರು,. ನಾನು ಸುಮ್ಮನೇ ಈ ರೀತಿ ಪೋಸ್ಟ್ ಮಾಡಿದ್ದು, ಹೆಸರನ್ನು ಪ್ರಸ್ತಾಪಿಸಿಲ್ಲ ಎನ್ನಬಹುದು. ಹಾಗಾಗಿ ಅಂತಹ ಪ್ರಯತ್ನ ತಾನು ಮಾಡುವುದಿಲ್ಲʼʼಎಂದು ಹೇಳಿದ್ದಾರೆ.
ಚಿಟ್ಟಿ ಬಾಬು ಈ ಹಿಂದೆ ಆರೋಪಿಸಿದ್ದೇನು?
ಚಿಟ್ಟಿಬಾಬು ಅವರು ಸಮಂತಾ ಅವರನ್ನು “ಸ್ಟಾರ್ ಹೀರೋಯಿನ್” ಆಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಈಗ ಅವರು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಚೀಪ್ ತಂತ್ರಗಳನ್ನು ಬಳಸುತ್ತಿದ್ದಾರೆʼ ಎಂದು ಆರೋಪಿಸಿದ್ದರು. “ಸಮಂತಾ ವಿಚ್ಛೇದನದ ನಂತರ ಪುಷ್ಪಾ ದಿ ರೈಸ್ ಚಿತ್ರದಲ್ಲಿ ಊ ಅಂಟವಾ ಐಟಂ ಸಾಂಗ್ ಮಾಡಿದ್ದಾರೆ. ತನ್ನ ಜೀವನೋಪಾಯಕ್ಕಾಗಿ ಆ ಸಾಂಗ್ ಮಾಡಿದರು. ಸ್ಟಾರ್ ಹೀರೋಯಿನ್ ಪಟ್ಟ ಕಳೆದುಕೊಂಡ ನಂತರ ತನಗೆ ಬರುತ್ತಿರುವ ಆಫರ್ ಗಳನ್ನೆಲ್ಲ ಮಾಡುತ್ತ ಇದ್ದಾರೆ. ನಾಯಕಿಯಾಗಿ ಅವರ ವೃತ್ತಿಜೀವನ ಮುಗಿದಿದೆ. ಮತ್ತೆ ಸ್ಟಾರ್‌ಡಮ್‌ಗೆ ಮರಳಲು ಸಾಧ್ಯವಿಲ್ಲ. ಬಂದಿರುವ ಆಫರ್‌ಗಳನ್ನು ಮಾಡುತ್ತ ತನ್ನ ಪ್ರಯಾಣವನ್ನು ಮುಂದುವರಿಸಬೇಕು,” ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Samantha Ruth Prabhu : ಬ್ರಿಟಿಷರಂತೆ ಇಂಗ್ಲಿಷ್ ಮಾತನಾಡಿ ಟ್ರೋಲ್ ಆದ ಸಮಂತಾ!
ಸಮಂತಾ ಪರೋಕ್ಷವಾಗಿ ಚಿಟ್ಟಿಬಾಬುಗೆ ತಿರುಗೇಟು ನೀಡಿದ್ದೇನು?
ಚಿಟ್ಟಿಬಾಬು ಹೇಳಿಕೆ ಸಮಂತಾ ಗಮನಕ್ಕೆ ಬಂದಿದ್ದು, ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಮಂತಾ ಅವರು ʻʻಕಿವಿಯಲ್ಲಿ ಕೂದಲು ಹೇಗೆ ಬೆಳೆಯುತ್ತದೆ” ಎಂಬ ಗೂಗಲ್ ಸರ್ಚ್ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿದ್ದರು.
“ಇದಕ್ಕೆ ಹೆಚ್ಚಿದ ಟೆಸ್ಟೋಸ್ಟೆರಾನ್ ಕಾರಣ ಎಂದು ಇಂಟರ್‌ನೆಟ್ ತೋರಿಸಿದೆ. ಕೆಲ ಪುರುಷರಲ್ಲಿ ವಯಸ್ಸಾದಂತೆ ಕಿವಿಗಳಲ್ಲಿ ಕೂದಲು ಬೆಳೆಯುತ್ತದೆ. ಟೆಸ್ಟೋಸ್ಟೆರಾನ್ ಹೆಚ್ಚಾಗುವುದರಿಂದ ಹೀಗಾಗುತ್ತದೆ. ಈ ಹಾರ್ಮೋನ್ ಕೂದಲನ್ನು ಒರಟಾಗಿ ಮತ್ತು ದಪ್ಪವಾಗುವಂತೆ ಮಾಡುತ್ತದೆ. ಆದರೆ ನಿಮ್ಮ ಕಿವಿಯನ್ನು ಕೊಳಕು ಮತ್ತು ಕಸದಿಂದ ಇದು ದೂರವಿರಿಸುತ್ತದೆʼʼ ಎಂಬ ಮಾಹಿತಿಯನ್ನು ಸಮಂತಾ ಹಂಚಿಕೊಂಡಿದ್ದರು.