ಬೆಂಗಳೂರು: ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ಸೋನಲ್ ಮೊಂಥೆರೋ (Sonal Monteiro) ಇಂದು ಸಪ್ತಪದಿ ತುಳಿಯುತ್ತಿದ್ದಾರೆ. ನಿನ್ನೆ ಆಗಸ್ಟ್ 10 ರಂದು ಶನಿವಾರ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್ ಸುಧೀರ್ – ಸೋನಲ್ ಮಂಥೆರೊ ರಿಸೆಪ್ಷನ್ ಅದ್ಧೂರಿಯಾಗಿ ಜರುಗಿದೆ. ಈ ವೇಳೆ ತರುಣ್ ಸುಧೀರ್ ಅಪ್ಪ ಸುಧೀರ್ ಅವರನ್ನ ನೆನೆದು ಭಾವುಕರಾದರು. ಈ ವೇಳೆ ತಾಯಿ ಮಾಲತಿ ಸುಧೀರ್ ಸಹ ಕಣ್ಣೀರು ಸುರಿಸಿದರು. ಇದರ ಬೆನ್ನಲ್ಲೇ ತಾಯಿ ಮಾಲತಿ ಸುಧೀರ್ ಅವರು ತರುಣ್ ಬಗ್ಗೆ ಈ ಮುಂಚೆ ಹೇಳಿರುವ ಮಾತುಗಳು ವೈರಲ್ ಆಗುತ್ತಿದೆ.
ಗೋಲ್ಡ್‌ನ್ ಸ್ಟಾರ್ ಗಣೇಶ್ ನಡೆಸಿಕೊಡುತ್ತಿದ್ದ ಗೋಲ್ಡ್‌ನ್ ಗ್ಯಾಂಗ್‌ಗೆ ತರುಣ್ ಸುಧೀರ್ ಹಾಗೂ ಅವರ ಆಪ್ತ ಗೆಳೆಯರು ಬಂದಿದ್ದ ಸಂದರ್ಭದಲ್ಲಿ ತರುಣ್ ಸುಧೀರ್ ಮಾಲತಿ ಕೂಡ ಬಂದಿದ್ದರು. ಈ ವೇಳೆ ತರುಣ್ ಯಾಕೆ ಮದುವೆಯಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು.
ʻʻತರುಣ್ ಇಂದಿನವರೆಗೂ ಒಂದು ಅಡಿಕೆ ಹೋಳನ್ನು ಕೈಯಲ್ಲಿ ಮುಟ್ಟಿಲ್ಲ. ಒಂದು ಸಿಗರೇಟು ಮುಟ್ಟಿಲ್ಲ. ಇಷ್ಟು ಒಳ್ಳೆ ಗುಣ ಇರುವ ಹುಡುಗನಿಗೆ ಒಂದು ಹೆಣ್ಣು ಯಾಕೆ ಸಿಗ್ತಿಲ್ಲ. ಇವನಿಗೆ ಯಾಕೆ ಸೆಟ್ ಆಗುತ್ತಿಲ್ಲ. ಪ್ರತಿ ದಿನ ರಾತ್ರಿ- ಹಗಲು ಇದೇ ಆಲೋಚನೆ ನನಗೆ. ದೇವರಲ್ಲಿ ದಿನ ಇದನ್ನೇ ಪ್ರಾರ್ಥನೆ ಮಾಡುತ್ತೇನೆ. ಅವನ ಅಣ್ಣ-ಅತ್ತಿಗೆ ಇರುತ್ತಾರೆ. ಆದರೆ ಇವನಿಗೆ ಅಂತಾ ನೀನು ಊಟ ಮಾಡಿದ್ಯಾ ಅಂತಾ ಕೇಳೋರೆ ಇಲ್ಲ. ನೀವೆಲ್ಲಾ ಎಷ್ಟು ಒಳ್ಳೆ ಸ್ನೇಹಿತರು. ನೀವೇ ಈಗ ತಂದೆ-ತಾಯಿ ಅವನಿಗೆ ಈಗ. ಆದರೆ ಅವನಿಗೆ ಸಂಗಾತಿ ಅಂತಾ ಬಂದರೆ ಒಳ್ಳೆಯದು ಅಲ್ವಾ, ನನಗೆ ಯೋಚನೆ ಆಗುತ್ತದೆ. ಇವನೇನು ಸುಂದರ ಇಲ್ವಾ, ರೂಪವಂತ ಇಲ್ವಾ, ಇವನಿಗೆ ಒಳ್ಳೆಯ ಗುಣ ಇಲ್ವಾ ಎಂದು ನೋವು ಹೊರಹಾಕಿದ್ದರು.
ಇದನ್ನೂ ಓದಿ: Tharun Sudhir: ತರುಣ್ ಸುಧೀರ್-ಸೋನಲ್ ಮದುವೆ ಸಂಭ್ರಮದ ಲೈವ್ ವಿಡಿಯೊ ಇಲ್ಲಿದೆ ನೋಡಿ!
ಇದೀಗ ತರುಣ್ ಅವರು ಮದುವೆಯಾಗುತ್ತಿದ್ದಾರೆ. ಈಗಾಗಲೇ ಮದುವೆಯ ಶಾಸ್ತ್ರಗಳು ಹಾಗೂ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್ಲೈನ್ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ.
ಲವ್ ಸ್ಟೋರಿ ಏನು?
ತರುಣ್ ಸುಧೀರ್ ಮಾತನಾಡಿ ʻʻನನ್ನ ಸೋನಲ್ ಪರಿಚಯ ಆಗಿದ್ದು ರಾಬರ್ಟ್ ಸಿನಿಮಾ ಮೂಲಕ. ಆಡಿಷನ್‌ನಲ್ಲಿ ಪರಿಚಯವಾದರು. ರಾಬರ್ಟ್ ಸೆಟ್ ಅಲ್ಲಿ ಲವ್ ಆಗಿಲ್ಲ. ಪ್ರೊಫೆಷನಲ್ ರಿಲೇಶನ್ ಶಿಪ್ ಅಲ್ಲಿ ಇದ್ವಿ. ಆದರೆ ಲವ್ ಆಗಿರಲಿಲ್ಲ. ಆಗಾಗ ಬರ್ತ್‌ಡೇ ವಿಶ್ ಮಾತ್ರ ಮೆಸೇಜ್ ಮಾಡ್ತಿದ್ವಿ. 2023 ಯಿಂದ ಇಬ್ಬರ ನಡುವೆ ಬಾಂಡಿಂಗ್ ಬೆಳೆದಿದ್ದು. ದರ್ಶನ್ ಅವರು ಕಾಲೆಳೆಯುತ್ತಿದ್ರು. ಸೋನಲ್ ಗೆ ಮಾತ್ರ ಯಾಕೆ ಚೆನ್ನಾಗ್ ಫ್ರೇಮ್ ಇಡ್ತಿಯಾ? ಅಂತ ತಮಾಷೆ ಮಾಡೋಕೆ ಶುರು ಮಾಡಿದ್ರು. ಏನು ಸೋನಲ್‌ನ ಲವ್ ಮಾಡ್ತಿದೀಯ ಎಂದು ರೇಗಿಸುತಿದ್ದರು. ನಂತರ ಮದುವೆ ಆಗ್ತೀಯಾ? ಅಂದ್ರು. ಅದ್ಕೆ ನಾನು ನೀವು ಯಾರನ್ನ ತೋರಿಸ್ತಿರೋ ಆಗ್ತೀನಿ ಅಂದೇ. ಕಾಟೇರ ಸೆಟ್ ನಲ್ಲೂ ದರ್ಶನ್ ಹಾಗು ಕೆಲವರು ಸೋನಲ್ ಹೆಸರಲ್ಲಿ ರೇಗಿಸುತಿದ್ರು. ಕೊನೆಗೆ ಒಂದು ಸಿನ ಸೋನಲ್ ನನಗೆ ಕಾಲ್ ಮಾಡಿ ಇಬ್ಬರು ಡೇಟ್ ಮಾಡುತ್ತಿದ್ದೇವೆ ಎನ್ನುವ ಸುದ್ದಿ ಹಬ್ಬುತಿದೆ. ತಪ್ಪು ತಿಳ್ಕೊಬೇಡಿ ಎಂದಿದ್ದರು. ನನಗೂ ಯಾಕೋ ಯೂನಿವರ್ಸ ನಮ್ಮಿಬ್ಬರನ್ನು ಕನೆಕ್ಟ್ ಮಾಡ್ತಿದೆ ಅನ್ಸಿತ್ತು. ನಾನು ಕಾಂಪ್ಲಿಕೇಟ್ ಇದೀನಿ ನೀವು ಸಿಂಪಲ್, ವರ್ಕ್ ಆಗುತ್ತ ಎಂದು ಸೋನಲ್ ಅವರನ್ನ ಕೇಳಿದ್ದೆ. ಕಾಟೇರ ವರೆಗೂ ಮದುವೆ ಬಗ್ಗೆ ಯೋಚಿಸಿಲ್ಲ. ಈ ಬಗ್ಗೆ ಸೋನಲ್‌ಗೂ ಹೇಳಿದ್ದೆ ಕಾಟೇರ ಸಕ್ಸಸ್ ಆಯಿತು. ಇದು ರೈಟ್ ಟೈಮ್ ಅಂತ ಸೋನಲ್ ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪ ಆಯಿತು.ಇಬ್ಬರ ಕುಟುಂಬದ ಸಮ್ಮತಿಯಿಂದ ಮದುವೆ ಆಗುತ್ತಿದ್ದೇವೆʼʼ ಎಂದರು,