ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ಸೋನಲ್ ಮೊಂಥೆರೋ ಸಪ್ತಪದಿ ತುಳಿದಿದ್ದಾರೆ. ತರುಣ್ ಮತ್ತು ಸೋನಲ್ ಸತಿ-ಪತಿ ಆಗಿದ್ದಾರೆ.
ಆಗಸ್ಟ್-11 ರಂದು ಬೆಳಗ್ಗೆ 10:50 ರಿಂದ 11:35 ಸಮಯದ ತುಲಾ ಲಗ್ನದಲ್ಲಿ ಮಾಂಗಲ್ಯ ಧಾರಣೆ ನೆರವೇರಿದೆ. ಹಿಂದೂ ಸಂಪ್ರದಾಯದಂತೆ ನಡೆಯಲಿರೋ ಈ ಮದುವೆಗೆ ಗಣ್ಯಾತಿ ಗಣ್ಯರು ಹಾಗೂ ಸಿನಿಮಾ ಗಣ್ಯರು ಆಗಮಿಸಿದ್ದರು.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಹಾಗೂ ಮದುವೆ ನಡೆದಿದೆ.
ಇದನ್ನೂ ಓದಿ: Tharun Sudhir: ವೈವಾಹಿಕ ಜೀವನಕ್ಕೆ ಕಾಲಿಟ್ಟ ತರುಣ್ ಸುಧೀರ್- ಸೋನಲ್ ಮೊಂಥೆರೋ!
ಇನ್ನು ತರುಣ್‌ಗೆ ಗಾಡ್ ಫಾದರ್ ಆಗಿರುವ ದರ್ಶನ್ ಜೈಲಿನಲ್ಲಿ ಇದ್ದಾರೆ. ಹೀಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮೊದಲ ಆಮಂತ್ರಣ ಪತ್ರಿಕೆ ನೀಡಿದ್ದರು.
ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಅದ್ಧೂರಿಯಾಗಿಯೇ ಪ್ಲಾನ್ ಆಗಿದೆ. ಮದುವೆ ಹಾಲ್ ಎಂಟ್ರನ್ಸ್ ವಿಶೇಷವಾಗಿಯೇ ಡಿಸೈನ್ ಆಗಿದೆ. ಮದುವೆ ಹಾಲ್‌ನ ಔಟ್ ಡೋರ್ ಫಿಲ್ಮ್ ಕಾನ್ಸೆಪ್ಟ್‌ನಲ್ಲಿಯೇ ರೆಡಿ ಆಗಿದೆ. ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು.
ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ.