Site icon Vistara News

Tharun Sudhir: ಸೋನಲ್ ಜತೆ `ತರುಣ್ ಸುಧೀರ್‌’ಗೆ ಕೂಡಿಬಂತು ಕಂಕಣಭಾಗ್ಯ?

Tharun Sudhir sonal monteiro will get marriage

ಬೆಂಗಳೂರು: ʻಕಾಟೇರʼ ಸಿನಿಮಾ (Kaatera Movie) ನಿರ್ದೇಶಕ, ‘ಮಹಾನಟಿ’ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕೂಡ ಗುರುತಿಸಿಕೊಂಡಿರುವ ತರುಣ್ ಸುಧೀರ್ ಮದುವೆಗೆ (Tharun Sudhir) ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ. ನಟಿ ಸೋನಾಲ್ ಮಂಥೆರೊ (sonal monteiro) ಕೈ ಹಿಡಿಯುತ್ತಾರೆ ಎಂದು ವರದಿಯಾಗಿದೆ. ತರುಣ್ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ರಾಘವ ವಿನೋದ್ ಪ್ರಭಾಕರ್ ಜೋಡಿ ತನು ಆಗಿ ಸೋನಲ್ ಮಿಂಚಿದ್ದರು. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನಲ್ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು. ‘ಅಭಿಸಾರಿಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಇದೀಗ ಈ ಜೋಡಿ ಸಪ್ತಪದಿ ತುಳಿಯಲಿದೆ ಎನ್ನಲಾಗಿದೆ. ತರುಣ್‌ ಹಾಗೂ ಸೋನಲ್‌ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

‘ಚೌಕ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ತರುಣ್ ಮುಂದೆ ಒಂದರ ಹಿಂದೆಯಂತೆ ಎರಡು ಹಿಟ್ ಸಿನಿಮಾಗಳನ್ನು ಕೊಟ್ಟರು. ಇದೀಗ ತರುಣ್ 4ನೇ ಸಿನಿಮಾ ತಯಾರಿಯಲ್ಲಿದ್ದಾರೆ. ಖಳನಟ ಸುಧೀರ್ ಕಿರಿಯಪುತ್ರ ತರುಣ್ ಮದುವೆ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿವೆ. ಈಗಾಗಲೇ ತರುಣ್‌ ಅವರ ಮದುವೆ ಫಿಕ್ಸ್‌ ಆಗಿದ್ದು, ಎರಡು ತಿಂಗಳಲ್ಲಿ ಮದುವೆ ಫಿಕ್ಸ್‌ ಎನ್ನುವ ವದಂತಿ ಹಬ್ಬಿದೆ.

‘ಎಕ್ಸ್‌ಕ್ಯೂಸ್‌ಮಿ’ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದರು. ‘ರ್ಯಾಂಬೊ’ ಚಿತ್ರದ ಸಹ ನಿರ್ದೇಶಕರಾಗಿ ಕೆಲಸ ಮಾಡಿ ತರುಣ್ ‘ಚೌಕ’ ಚಿತ್ರದಿಂದ ನಿರ್ದೇಶಕರಾದರು. ತರುಣ್‌ ಹಾಗೂ ಸೋನಲ್‌ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಅಗಸ್ಟ್‌ 10ಕ್ಕೆ ತರುಣ್‌ ಅವರ ಮದುವೆ ಎನ್ನಲಾಗಿದೆ.

ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌; ಸ್ಟಾರ್‌ ಹಿರೋ ಸಿನಿಮಾ ಜತೆ ಕ್ಲ್ಯಾಶ್‌?

ಕೆಲವು ದಿನಗಳ ಹಿಂದೆ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು BMW X1 ಕಾರನ್ನು ಖರೀದಿ ಮಾಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಈ ಕಾರನ್ನು ಅವರು ತೆಗೆದುಕೊಂಡಿದ್ದು, ಆ ವೇಳೆ ಅವರ ತಾಯಿ ಮಾಲತಿ ಸುಧೀರ್ ಕೂಡ ಜತೆಗೆ ಇದ್ದರು. ಅಂದಹಾಗೆ, ಈ BMW X1 ಕಾರಿನ ಬೆಲೆಯು 60 ಲಕ್ಷ ರೂಪಾಯಿಗಳಿಗೂ ಅಧಿಕ ಎಂದು ಹೇಳಲಾಗಿದೆ.

Exit mobile version