Site icon Vistara News

Gandhada Gudi | ಕೇಕ್‌ ಕತ್ತರಿಸಿ ʻಗಂಧದ ಗುಡಿʼ ಸಕ್ಸೆಸ್‌ ಆಚರಿಸಿದ ಚಿತ್ರತಂಡ: ಫೋಟೊ ವೈರಲ್‌!

Gandhada Gudi

ಬೆಂಗಳೂರು : ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ʻಗಂಧದ ಗುಡಿʼ (Gandhada Gudi) ಸಿನಿಮಾ ಅಕ್ಟೋಬರ್‌ 28ರಂದು ತೆರೆ ಕಂಡಿತ್ತು. ಸಿನಿರಸಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಯಶಸ್ಸಿಗೆ ಚಿತ್ರತಂಡದ ಜತೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕೇಕ್‌ ಕತ್ತರಿಸಿ ಸಂಭ್ರಮ ಆಚರಿಸಿದ್ದಾರೆ.

ಕ್ವಿನ್ಸ್ ರೋಡ್‌ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ತಂಡ ಕೇಕ್ ಕಟ್ ಮಾಡಿ ಖುಷಿಪಟ್ಟಿದೆ. ಅಮೋಘ ವರ್ಷ ನಿರ್ದೇಶನದ ಈ ಸಿನಿಮಾ ವನ್ಯಜೀವಿ ಸಂಕುಲದ ಕಾಡು ಮೇಡಿನ ಚಿತ್ರಣವನ್ನ ತೆರೆಯ ಮೇಲೆ ತೋರಿಸಲಾಗಿತ್ತು. ಇದೀಗ ಚಿತ್ರದ ಸಕ್ಸೆಸ್‌ ಸೆಲೆಬ್ರೇಷನ್‌ ಚಿತ್ರತಂಡ ಆಚರಿಸಿದೆ. ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರು ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರ ಯುವರಾಜ್‌ ಕುಮಾರ್‌ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Gandhada gudi | ಶಿವಮೊಗ್ಗದಲ್ಲಿ ಗಂಧದ ಗುಡಿ ವೀಕ್ಷಿಸಿದ ಬಿಎಸ್‌ವೈ: ಮಗುವಿಗೆ ಶೇಕ್‌ಹ್ಯಾಂಡ್‌, ಸೆಲ್ಫಿಗೆ ಮುತ್ತಿಗೆ!

ʻಗಂಧದ ಗುಡಿʼ ಸಿನಿಮಾ ಬಿಡುಗಡೆಗೊಂಡಾಗ ಸಿನಿಮಾ ನೋಡಿ ಅನೇಕ ಕಲಾವಿದರು ಅಪ್ಪು ನೆನೆದು ಕಣ್ಣೀರು ಹಾಕಿದ್ದರು. ಹಲವು ಅಭಿಮಾನಿಗಳು ನೋವಿನ ನಡುವೆಯೇ ಕುಣಿದು ಕುಪ್ಪಳಿಸಿದ್ದರು. ಸಿನಿಮಾ ಕುರಿತು ಅದೆಷ್ಟೋ ಅಭಿಮಾನಿಗಳು, ಗಣ್ಯರು ಸೋಷಿಯಲ್‌ ಮೀಡಿಯಾ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ | Ganesh Chaturthi| ಗಣೇಶನ ಮೇಲೆ ಭಕ್ತಿ, ಪುನೀತ್‌ ರಾಜ್‌ ಕುಮಾರ್‌ ಮೇಲೆ ಪ್ರೀತಿ


Exit mobile version