ಮುಂಬೈ: ದಿ ಕೇರಳ ಸ್ಟೋರಿ(The Kerala Story) ಸಿನಿಮಾ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ನೈಜ ಘಟನೆಗಳ ಆಧಾರಿತ ಸಿನಿಮಾ ಎನ್ನಲಾದ ಈ ಸಿನಿಮಾ ಒಳ್ಳೆಯ ಗಳಿಕೆಯನ್ನೂ ಮಾಡಿಕೊಳ್ಳುತ್ತಿದೆ. ಚಿತ್ರ ಯಶಸ್ಸಿನ ಹೆಜ್ಜೆಯಲ್ಲಿ ಸಾಗುತ್ತಿರುವಾಗಲೇ ಸಿನಿ ತಂಡಕ್ಕೆ ದೊಡ್ಡದೊಂದು ಆಘಾತವಾಗಿದೆ. ಚಿತ್ರ ತಂಡ ಸಾಗುತ್ತಿದ್ದ ವಾಹನ ಅಪಘಾತಕ್ಕೀಡಾಗಿದ್ದು, ನಟಿ ಆದಾ ಶರ್ಮಾ ಮತ್ತು ನಿರ್ದೇಶಕ ಸುದೀಪ್ರೋ ಸೇನ್ ಗಾಯಗೊಂಡಿದ್ದಾರೆ.
ಕೇರಳ ಸ್ಟೋರಿ ಸಿನಿಮಾ ತಂಡವು ಕರೀಮ್‌ನಗರದಲ್ಲಿ ಹಿಂದೂ ಏಕ್ತಾ ಯಾತ್ರೆಯಲ್ಲಿ ಭಾಗಿಯಾಗಬೇಕಿತ್ತು. ಅದಕ್ಕೆಂದು ಚಿತ್ರತಂಡ ತೆರಳುವಾಗ ವಾಹನಕ್ಕೆ ಅಪಘಾತವಾಗಿದೆ. ಹಾಗಾಗಿ ಯಾತ್ರೆಯನ್ನೂ ರದ್ದು ಮಾಡಲಾಗಿದೆ.
ಇದನ್ನೂ ಓದಿ: The Kerala Story : 100 ಕೋಟಿ ರೂ. ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ: ಭರ್ಜರಿ ಪ್ರದರ್ಶನ!
ಅಪಘಾತದ ಬಗ್ಗೆ ನಟಿ ಆದಾ ಶರ್ಮಾ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. “ನಾನು ಅರಾಮವಾಗಿದ್ದೇನೆ. ಅಪಘಾತದ ಸುದ್ದಿಯಿಂದಾಗಿ ಸಾಕಷ್ಟು ಸಂದೇಶಗಳು ಬರುತ್ತಿವೆ. ನಾನು ಮತ್ತು ನಮ್ಮ ಪೂರ್ತಿ ತಂಡ ಸುರಕ್ಷಿತವಾಗಿದೆ. ಗಂಭೀರವಾದ ಅಪಘಾತವೇನಾಗಿರಲಿಲ್ಲ. ಹರಸಿದ ನಿಮಗೆಲ್ಲರಿಗೂ ಧನ್ಯವಾದಗಳು” ಎಂದು ಭಾನುವಾರ ಬರೆದುಕೊಂಡಿದ್ದಾರೆ.
ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿ ಆದಾ ಶರ್ಮಾ ಕೇರಳ ಮೂಲದ ಹಿಂದೂ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿಕೊಂಡು ಐಸಿಸ್ ಉಗ್ರ ಸಂಘಟನೆಗೆ ಸೇರಿಸುವ ಕುರಿತಾಗಿ ಸಿನಿಮಾವಿದೆ. ಈ ಸಿನಿಮಾ ಬಿಡುಗಡೆಯಾದಾಗಿನಿಂದ ನಟಿ ಆದಾ ಶರ್ಮಾ ಅವರಿಗೆ ಸಾಕಷ್ಟು ಜೀವ ಬೆದರಿಕೆ ಬಂದಿರುವುದಾಗಿಯೂ ಹೇಳಲಾಗಿದೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿ ನಿಷೇಧಿಸಿದ್ಯಾಕೆ?-ಸುಪ್ರೀಂಕೋರ್ಟ್ ಪ್ರಶ್ನೆ; ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯ ಸರ್ಕಾರಗಳಿಗೆ ನೋಟಿಸ್
ಕೇರಳ ಸ್ಟೋರಿ ಬಗ್ಗೆ ಈಗಾಗಲೇ ಅನೇಕ ರಾಜ್ಯಗಳಲ್ಲಿ ವಿವಾದಗಳು ಸೃಷ್ಟಿಯಾಗಿವೆ. ಮುಸ್ಲಿಮರು ಇದು ಸತ್ಯಕ್ಕೆ ದೂರವಾದ ಕಥೆ ಎಂದು ಬಣ್ಣಿಸಲಾರಂಭಿಸಿದ್ದಾರೆ. ಕೆಲ ರಾಜ್ಯಗಳು ಈ ಸಿನಿಮಾಕ್ಕೆ ತೆರಿಗೆ ಮುಕ್ತ ಮಾಡುತ್ತಿದ್ದರೆ, ಮಮತಾ ಬ್ಯಾನರ್ಜಿ ಅವರ ಸರ್ಕಾರವಿರುವ ಪಶ್ಚಿಮ ಬಂಗಾಳದಲ್ಲಿ ಈ ಸಿನಿಮಾವನ್ನು ನಿಷೇಧಿಸಲಾಗಿದೆ.