Site icon Vistara News

The Kerala Story: ʻದಿ ಕೇರಳ ಸ್ಟೋರಿʼ ಮೂರನೇ ದಿನದ ಗಳಿಕೆ ಏನು?

The Kerala Story box office day 3 collection

ಬೆಂಗಳೂರು: ಸುದೀಪ್ತೋ ಸೇನ್ ನಿರ್ದೇಶನದ ʻದಿ ಕೇರಳ ಸ್ಟೋರಿʼ (The Kerala Story), ಬಿಡುಗಡೆಯಾದ ಮೂರನೇ ದಿನದಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 16 ಕೋಟಿ ರೂ. ಗಳಿಸಿದೆ. ಚಿತ್ರ ಮೇ 7ರಂದು 42.60ರಷ್ಟು ಏರಿಕೆ ಕಂಡಿದೆ. ಕೇರಳ ಸ್ಟೋರಿ ಮೇ 5ರಂದು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಒಟ್ಟು 35 ಕೋಟಿ ರೂ. ಗಳಿಕೆ ಕಂಡಿದೆ. ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ ಕೇರಳ ಸ್ಟೋರಿ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದ ನಂತರ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಗೊಂಡು ಹಿಟ್ ಕಂಡಿದೆ. ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ʻʻಮೇ 8ರಂದು ಟ್ವಿಟರ್‌ನಲ್ಲಿ ವಿಶ್ಲೇಷಕ ತರಣ್ ಆದರ್ಶ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಇನ್ನು ʻದಿ ಕೇರಳ ಸ್ಟೋರಿʼಯನ್ನು ತಡೆಯಲು ಅಸಾಧ್ಯ. ಎರಡನೇ ಮತ್ತು ಮೂರನೇ ದಿನದಂದು ಒಳ್ಳೆಯ ಬಜ್‌ ಕ್ರಿಯೇಟ್‌ ಮಾಡಿದೆ. ಮೇ 5ರಂದು 8 ಕೋಟಿ ರೂ, ಮೇ 6ರಂದು 11 ಕೋಟಿ ರೂ, ಮೇ 7ರಂದು 16 ಕೋಟಿ ರೂ. ಒಟ್ಟು 35 ಕೋಟಿ ರೂ. ಗಳಿಕೆ ಕಂಡಿದೆʼʼ ಎಂದು ತರಣ್‌ ಆದರ್ಶ್‌ ಟ್ವೀಟ್‌ ಮಾಡಿದ್ದಾರೆ.

ಕೇರಳದಿಂದ ಕಾಣೆಯಾದ ಹುಡುಗಿಯರ ನಿಜ ಜೀವನದ ಅನುಭವವನ್ನು ಆಧರಿಸಿದೆ ಈ ಸಿನಿಮಾ. ನರ್ಸ್ ಆಗುವ ಕನಸು ಹೊತ್ತ ಶಾಲಿನಿ ಉನ್ನಿಕೃಷ್ಣನ್ ಎಂಬ ಗ್ರಾಮೀಣ ಹುಡುಗಿ, ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕ ಶಿಬಿರಕ್ಕೆ ಸೇರಿಹೋದ, ಅಲ್ಲಿಂದ ಹೊರಬರಲಾಗದೆ ಪರಿತಪಿಸುವ ಕತೆಯನ್ನು ಕೇರಳ ಸ್ಟೋರಿ ಹೊಂದಿದೆ. ಕೇರಳದ ಹಿಂದು ಯುವತಿಯರನ್ನು ಕಳ್ಳಸಾಗಣೆ ಮಾಡಿ, ಮತಾಂತರಿಸಿ, ಭಯೋತ್ಪಾದಕ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಕಷ್ಟಿವೆ. ಅಂಥ ನೈಜ ಪ್ರಕರಣಗಳೂ ವರದಿಯಾಗಿವೆ. ಅದೇ ಹಿನ್ನೆಲೆಯಲ್ಲಿ ಈ ಚಿತ್ರ ಹುಟ್ಟಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: The Kerala Story : ಕೇರಳ ಸ್ಟೋರಿಯಲ್ಲಿ ಹೊಸ ಮಾದರಿಯ ಭಯೋತ್ಪಾದನೆ ಅನಾವರಣ ಎಂದ ಜೆ.ಪಿ ನಡ್ಡಾ

ತರಣ್‌ ಆದರ್ಶ್‌ ಟ್ವೀಟ್‌

ಇದನ್ನೂ ಓದಿ: The Kerala Story : ಕೇರಳ ಸ್ಟೋರಿಯಲ್ಲಿ ಹೊಸ ಮಾದರಿಯ ಭಯೋತ್ಪಾದನೆ ಅನಾವರಣ ಎಂದ ಜೆ.ಪಿ ನಡ್ಡಾ

ಈ ಸಿನಿಮಾದಲ್ಲಿದ್ದ 10 ದೃಶ್ಯಗಳಿಗೆ ಕತ್ತರಿ

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC-ಸೆನ್ಸಾರ್​ ಮಂಡಳಿ-Censor Board) ದಿ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್ (A certificate To The Kerala Story)​ ಕೊಟ್ಟಿದೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿದ್ದ 10 ದೃಶ್ಯಗಳಿಗೆ ಕತ್ತರಿ ಹಾಕಿದೆ. ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರ ಸಂದರ್ಶನದ ದೃಶ್ಯವೂ ಸೇರಿ 10 ದೃಶ್ಯಗಳನ್ನು ತೆಗೆದುಹಾಕಲಾಗಿದೆ.

Exit mobile version