Site icon Vistara News

The Kerala Story: 50 ಕೋಟಿ ರೂ. ದಾಟಿದ ʻದಿ ಕೇರಳ ಸ್ಟೋರಿʼ: ವಿವಾದದ ನಡುವೆಯೂ ಯಶಸ್ವಿ ಪ್ರದರ್ಶನ

The Kerala Story Box Office Day Five 50 crore mark

ಬೆಂಗಳೂರು:`ದಿ ಕೇರಳ ಸ್ಟೋರಿ‘ (The Kerala Story) ಐದು ದಿನದಲ್ಲಿ 50 ಕೋಟಿ ರೂ. ಗಡಿ ದಾಟಿದೆ. ತರಣ್ ಆದರ್ಶ್ ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ಐದನೇ ದಿನ 11.14 ಕೋಟಿ ರೂ. ಗಳಿಕೆ ಕಂಡಿದೆ. ಮೇ 9,ಸೋಮವಾರಕ್ಕಿಂತ ಹೆಚ್ಚು ಗಳಿಕೆ ಕಂಡಿದೆ. ಇದೀಗ ಒಟ್ಟು 56.86 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ತರಣ್‌ ಆದರ್ಶ್‌ ಟ್ವೀಟ್‌

ತರಣ್‌ ಆದರ್ಶ್‌ ಟ್ವೀಟ್‌ನಲ್ಲಿ ʻದಿ ಕೇರಳ ಸ್ಟೋರಿʼ ತನ್ನ ಬ್ಲಾಕ್‌ಬಸ್ಟರ್ ಓಟವನ್ನು ಮುಂದುವರಿಸಿದೆ. 50 ಕೋಟಿ ರೂ. ಗಳಿಕೆ ಕಂಡಾಯ್ತು. ಮೇ 9ರಂದು ಸೂಪರ್ ಟ್ರೆಂಡಿಂಗ್‌, ಮೇ 5ರಂದು 8 ಕೋಟಿ ರೂ. ಮೇ 6ರಂದು 11.22 ಕೋಟಿ ರೂ, ಮೇ 7ರಂದು, 16.40 ಕೋಟಿ ರೂ, ಮೇ 8ರಂದು 10.07 ಕೋಟಿ ರೂ, ಮೇ 9ರಂದು 11.14 ಕೋಟಿ ರೂ. ಒಟ್ಟು 56.86 ಕೋಟಿ ರೂ. ಗಳಿಕೆ ಕಂಡಿದೆʼ ಎಂದು ಟ್ವೀಟ್ ಮಾಡಿದ್ದಾರೆ.

ದಿ ಕೇರಳ ಸ್ಟೋರಿ (The Kerala Story) ಸಿನಿಮಾವನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧಿಸಲಾಗಿದೆ (The Kerala Story Ban in West Bengal). ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ರದ್ದುಗೊಳಿಸುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಘೋಷಣೆ ಮಾಡಿದ್ದಾರೆ. ಮಾತ್ರವಲ್ಲದೆ, ಚೆನ್ನೈ ಸೇರಿದಂತೆ ಕೆಲವು ನಗರಗಳಲ್ಲಿ, ತಮಿಳುನಾಡಿನ ಕೆಲವು ಮಲ್ಟಿಪ್ಲೆಕ್ಸ್‌ಗಳು ಕೇರಳ ಸ್ಟೋರಿಯನ್ನು ಪ್ರದರ್ಶಿಸುವುದನ್ನು ನಿಲ್ಲಿಸಿದ್ದಾರೆ. ಇದರ ನಡುವೆಯೂ ಭಾರಿ ಕಲೆಕ್ಷನ್‌ನತ್ತ ಸಿನಿಮಾ ಸಾಗುತ್ತಿದೆ.

ಇದನ್ನೂ ಓದಿ: The Kerala Story: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ನಿಷೇಧ; ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಚಿತ್ರತಂಡ

ಸಿನಿಮಾ ಬಿಡುಗಡೆಗೂ ಮುನ್ನವೇ ಅನೇಕರು ವಿವಿಧ ಹೈಕೋರ್ಟ್, ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿ, ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿದ್ದರು. ಆದರೆ ಫಲಪ್ರದ ವಾಗಿರಲಿಲ್ಲ. ಇನ್ನೊಂದೆಡೆ ಈ ಸಿನಿಮಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಮಧ್ಯಪ್ರದೇಶದಲ್ಲಿ, ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ.

ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್​ಗೆ ಮತಾಂತರ ಮಾಡುವ/ಲವ್ ಜಿಹಾದ್​ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿದೆ. ಈ ಚಿತ್ರದ ಬಿಡುಗಡೆಗೆ ಕಾಂಗ್ರೆಸ್​, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್​​​ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್​ಗಳಿಗೆ, ಸುಪ್ರೀಂಕೋರ್ಟ್​ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್​ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಬಿಡುಗಡೆಯಾಗಿತ್ತು.

Exit mobile version