Site icon Vistara News

Bastar Movie: `ದಿ ಕೇರಳ ಸ್ಟೋರಿ’ ತಂಡದಿಂದ ಹೊಸ ಸಿನಿಮಾ ಅನೌನ್ಸ್‌!

The Kerala Story ]

ಬೆಂಗಳೂರು: `ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಿರ್ಮಾಪಕ ವಿಪುಲ್ ಶಾ ತಮ್ಮ ಮುಂದಿನ ಪ್ರಾಜೆಕ್ಟ್ ʻಬಸ್ತಾರ್ʼ ಸಿನಿಮಾವನ್ನು ಘೋಷಿಸಿದ್ದಾರೆ. ಜೂನ್‌ 26ರಂದು ʻಸನ್‌ಶೈನ್ ಪಿಕ್ಚರ್ಸ್, ಪ್ರೊಡಕ್ಷನ್ ಬ್ಯಾನರ್, ಟ್ವಿಟರ್‌ನಲ್ಲಿ ಘೋಷಣೆ ಮಾಡಿದೆ. ʻಬಸ್ತಾರ್ ‘ (Bastar Movie:) ಸತ್ಯ ಘಟನೆ’ ಆಧಾರಿತವಾಗಿದೆ. ಮುಂದಿನ ವರ್ಷ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ದಟ್ಟ ಅರಣ್ಯದಲ್ಲಿ ಕೆಂಪು ಬಾವುಟ ಇದೆ. ನೆಲಕ್ಕೆ ಉರುಳಿದ ಮರ ಹೈಲೈಟ್​ ಆಗಿದೆ. ಗನ್​ ಮತ್ತು ಹೊಗೆ ಕೂಡ ಈ ಪೋಸ್ಟರ್​ನಲ್ಲಿ ಇದೆ. ‘ದೇಶದಲ್ಲಿ ಸಂಚಲನ ಮೂಡಿಸಲಿದೆ ಅಡಗಿದ ಸತ್ಯ’ ಎಂಬ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ.
ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ಮುಂಬರುವ ಚಿತ್ರದಲ್ಲಿ ವಿದ್ಯುತ್ ಜಮ್ವಾಲ್ ಅವರನ್ನು ನಟಿಸುವಂತೆ ತಯಾರಕರಲ್ಲಿ ವಿನಂತಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಯುವತಿಗೆ ಸಿಗುತ್ತಿಲ್ಲವಂತೆ ಮನೆ; ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ದೂಷಿಸಿದ ಹಿಂದು ಯುವಕ

ದಿ ಕೇರಳ ಸ್ಟೋರಿ

ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್​ಗೆ ಮತಾಂತರ ಮಾಡುವ/ಲವ್ ಜಿಹಾದ್​ಗೆ ಗುರಿಪಡಿಸುವ ಕಥೆಯನ್ನು ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿತ್ತು.ಈ ಚಿತ್ರದ ಬಿಡುಗಡೆಗೆ ಕಾಂಗ್ರೆಸ್​, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್​​​ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್​ಗಳಿಗೆ, ಸುಪ್ರೀಂಕೋರ್ಟ್​ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್​ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಸಿನಿಮಾ ಬಿಡುಗಡೆಯಾಗಿತ್ತು.‘ಬಸ್ತರ್​’ ಸಿನಿಮಾದಲ್ಲಿ ಯಾವ ನೈಜ ಘಟನೆಯನ್ನು ಜನರ ಎದುರು ಇಡಲಿದ್ದಾರೆ ಎಂಬುದು ಮುಂದೆ ತಿಳಿಯಬೇಕಿದೆ.

Exit mobile version