ಬೆಂಗಳೂರು: ನಿರ್ದೇಶಕ ಸುದೀಪ್ತೋ ಸೇನ್ ಅವರ ʻದಿ ಕೇರಳ ಸ್ಟೋರಿʼ (The Kerala Story) ಸಿನಿಮಾ ಈಗಾಗಲೇ 50 ಕೋಟಿ ರೂ. ಬಾಚಿಕೊಂಡಿದೆ. ವಿವಾದವೂ ಕೂಡ ಅಷ್ಟೇ ಭುಗಿಲೆದ್ದಿದೆ. ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ನಟ ಅದಾ ಶರ್ಮಾ (Adah Sharma), ಚಿತ್ರದಲ್ಲಿ ತನ್ನ ಪಾತ್ರವು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಭಯಭೀತಳನ್ನಾಗಿಸಿತು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
“ಸಿನಿಮಾದಲ್ಲಿ ಶಾಲಿನಿ ಉನ್ನಿಕೃಷ್ಣನ್ ಪಾತ್ರವು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನನ್ನನ್ನು ಭಯಭೀತಳನ್ನಾಗಿಸಿತು. ನಾನು ಲೈಫ್‌ಟೈಮ್ ಈ ಪಾತ್ರವನ್ನು ಮರೆಯುವಂತಿಲ್ಲʼʼ ಎಂದಿದ್ದಾರೆ. ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಎದುರಿಸಿದ ವಿರೋಧದ ಬಗ್ಗೆ ನಟಿ ಮಾತನಾಡಿ ʻʻಚಿತ್ರವು ಸೃಷ್ಟಿಸಿದ ಜಾಗೃತಿಯು ಅನೇಕ ಹುಡುಗಿಯರ ಜೀವಗಳನ್ನು ಉಳಿಸುತ್ತದೆ. ನಮಗೆ ಸಿಕ್ಕಿರುವ ಬೆಂಬಲ ದೊಡ್ಡದಾಗಿದೆʼʼ ಎಂದಿದ್ದಾರೆ.
ʻʻಸಿನಿಮಾ ಕುಟುಂಬಕ್ಕೆ ಸೇರದಿದ್ದರೂ, ನಾನು ಪಡೆದ ಪ್ರೀತಿ ಅಭೂತಪೂರ್ವವಾಗಿದೆ. ಇಡೀ ರಾಷ್ಟ್ರವೇ ನನಗಾಗಿ ಬೇರೂರಿದೆ. ನನಗಾಗಿ ನಾನು ಕಂಡ ಕನಸುಗಳು ತುಂಬಾ ಚಿಕ್ಕದಾಗಿದೆ. ನನ್ನ ಪ್ರೀತಿಪಾತ್ರರು ನನಗಾಗಿ ಕಂಡ ಕನಸುಗಳು ನನಸಾಗುತ್ತಿವೆ, ”ಎಂದು ನಟಿ ಹೇಳಿದ್ದಾರೆ. ಈ ಚಿತ್ರವು ಇತ್ತೀಚಿನ ದಿನಗಳಲ್ಲಿ ಅತ್ಯಂತ ಯಶಸ್ವಿ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಇದನ್ನೂ ಓದಿ: The Kerala Story: 50 ಕೋಟಿ ರೂ. ದಾಟಿದ ʻದಿ ಕೇರಳ ಸ್ಟೋರಿʼ: ವಿವಾದದ ನಡುವೆಯೂ ಯಶಸ್ವಿ ಪ್ರದರ್ಶನ
ಅದಾ ಶರ್ಮಾ ಅವರು ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಸೇರಿದಂತೆ ಈವರೆಗೆ 18 ಸಿನಿಮಾಗಳಲ್ಲಿ ನಟಿಸಿದ್ದಾರೆ. ದಿ ಕೇರಳ ಸ್ಟೋರಿ ಬಿಡುಗಡೆಯಾದ ಐದನೇ ದಿನದಂದು 50 ಕೋಟಿ ರೂ. ಗಡಿ ದಾಟಿತ್ತು.
ಸಿನಿಮಾ ಬಿಡುಗಡೆಗೂ ಮುನ್ನವೇ ಅನೇಕರು ನ್ಯಾಯಾಲಯದ ಮೆಟ್ಟಿಲೇರಿ ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿದ್ದರು. ಆದರೆ ಫಲಪ್ರದವಾಗಿರಲಿಲ್ಲ. ಇನ್ನೊಂದೆಡೆ ಈ ಸಿನಿಮಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಮಧ್ಯಪ್ರದೇಶದಲ್ಲಿ, ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ: The Kerala Story: 50 ಕೋಟಿ ರೂ. ದಾಟಿದ ʻದಿ ಕೇರಳ ಸ್ಟೋರಿʼ: ವಿವಾದದ ನಡುವೆಯೂ ಯಶಸ್ವಿ ಪ್ರದರ್ಶನ
ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್ಗೆ ಮತಾಂತರ ಮಾಡುವ/ಲವ್ ಜಿಹಾದ್ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಹೊಂದಿದೆ. ಈ ಚಿತ್ರದ ಬಿಡುಗಡೆಗೆ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್ಗಳಿಗೆ, ಸುಪ್ರೀಂಕೋರ್ಟ್ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಬಿಡುಗಡೆಯಾಗಿತ್ತು.