ಹಿಂದೂಗಳ (hindu) ಆರಾಧ್ಯ ದೇವರಾದ ಶ್ರೀ ರಾಮನ (sriram) ಭಕ್ತ ಹನುಮಾನ್ ಜನ್ಮ ದಿನದ ಶುಭ ಸಂದರ್ಭದಲ್ಲೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney Plus Hotstar) ಜನಪ್ರಿಯ ಅನಿಮೇಟೆಡ್ ಸರಣಿ ‘ದಿ ಲೆಜೆಂಡ್ ಆಫ್ ಹನುಮಾನ್’ ನ (The Legend of Hanuman) ನಾಲ್ಕನೇ ಸರಣಿಯನ್ನು ಏಪ್ರಿಲ್ 23ರಂದು ಘೋಷಣೆ ಮಾಡಿದೆ. ಹನುಮಾನ್ ಜಯಂತಿಯ ದಿನದಂದೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಈ ಘೋಷಣೆ ಮಾಡಿರುವುದು ಬಹುತೇಕ ಹನುಮಾನ್ ಭಕ್ತರಲ್ಲಿ ಸಂತಸ ತಂದಿದೆ.
ನಾಲ್ಕನೇ ಸರಣಿಯ ಕಥಾವಸ್ತುವಿನ ಕುರಿತಾದ ವಿವರಗಳನ್ನೂ ಇನ್ನೂ ಘೋಷಣೆ ಮಾಡಿಲ್ಲ. ಆದರೆ ಅಭಿಮಾನಿಗಳು ಹನುಮಂತನ ಶೌರ್ಯ, ಭಕ್ತಿ ಮತ್ತು ಅಚಲ ನಂಬಿಕೆಯ ಹೆಚ್ಚಿನ ಕಥೆಗಳನ್ನು ಇದರಲ್ಲಿ ನಿರೀಕ್ಷಿಸಬಹುದು. ಹಿಂದಿನ ಸರಣಿಯಲ್ಲಿ ಹನುಮಂತನ ಆರಂಭಿಕ ಜೀವನ, ಭಗವಾನ್ ರಾಮನೊಂದಿಗಿನ ಅವನ ಭೇಟಿ, ಲಂಕಾಕ್ಕೆ ಮಹಾಕಾವ್ಯದ ಪ್ರಯಾಣ ಮತ್ತು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತಿಮ ಯುದ್ಧವನ್ನು ವಿವರಿಸಲಾಗಿತ್ತು.
ಡಿಸ್ನಿ+ ಹಾಟ್‌ಸ್ಟಾರ್‌ಗೆ ‘ದಿ ಲೆಜೆಂಡ್ ಆಫ್ ಹನುಮಾನ್’ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿದೆ. ಕಾರ್ಯಕ್ರಮದ ಬೆರಗುಗೊಳಿಸುವ ಅನಿಮೇಷನ್, ಆಕರ್ಷಕ ಕಥೆ ಹೇಳುವಿಕೆ ಮತ್ತು ಹಿಂದೂ ಪುರಾಣಗಳ ಚಿತ್ರಣವು ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ: OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!
‘ದಿ ಲೆಜೆಂಡ್ ಆಫ್ ಹನುಮಾನ್’ ನ ಹೊಸ ಸೀಸನ್‌ನಲ್ಲಿ ನಟ ಮತ್ತು ರಾವಣನ ಧ್ವನಿ, ಶರದ್ ಕೇಳ್ಕರ್ ಅವರದ್ದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಡಿ ಲೆಜೆಂಡ್ ಆಫ್ ಹನುಮಾನ್ ನ ಹೊಸ ಸೀಸನ್‌ನಲ್ಲಿ ರಾವಣ ರಾಜನಿಗೆ ಧ್ವನಿ ನೀಡುವುದು ನನಗೆ ಆಳವಾದ ವೈಯಕ್ತಿಕ ಪ್ರಯಾಣವಾಗಿದೆ. ಒಂದು ಪೌರಾಣಿಕ ಸಿದ್ಧಾಂತವನ್ನು ಆಧರಿಸಿ ಮತ್ತು ಇದರ ಮೂಲಕ ನಾನು ಅನೇಕ ಲೇಯರಿಂಗ್ ಕಥೆಗಳನ್ನು ಕಂಡುಹಿಡಿದಿದ್ದೇನೆ. ಇದರಿಂದ ನನಗೆ ಹೆಚ್ಚು ತಿಳಿಯಲು ಸಾಧ್ಯವಾಯಿತು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ದಿ ಲೆಜೆಂಡ್ ಆಫ್ ಹನುಮಾನ್‌ನ ಹೊಸ ಸರಣಿ ಇನ್ನಷ್ಟು ಶ್ರೇಷ್ಠವಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.
ಸಾಹಸಮಯ, ಭಕ್ತಿಪ್ರಧಾನವಾದ ಹನುಮಂತನ ಜೀವನ ಕಥೆಯನ್ನು ಹೇಳುವ ಮೂರು ಸರಣಿಯನ್ನು ಇಷ್ಟಪಟ್ಟಿರುವವರು ನಾಲ್ಕನೇ ಸರಣಿಗೆ ಕುತೂಹಲದಿಂದ ಕಾಯುವಂತಾಗಿದೆ.
ರಾವಣನ ದುಷ್ಟತನವನ್ನು ಎದುರಿಸಲು, ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅವನ ದಾರಿಯಲ್ಲಿ ಎದುರಾಗುವ ವಿನಮ್ರ ರಾಮ ಭಕ್ತನಾದ ವಾನರನು ತನ್ನ ಭಕ್ತಿಯಿಂದಾಗಿಯೇ ದೇವರಾಗಿರುವ ಕಥೆಯನ್ನು ಇದು ಒಳಗೊಂಡಿದೆ. ಗ್ರಾಫಿಕ್ ಇಂಡಿಯಾ ರಚಿಸಿರುವ ಈ ಸರಣಿಗೆ ಶರದ್ ದೇವರಾಜನ್, ಜೀವನ್ ಜೆ. ಕಾಂಗ್, ಶರದ್ ಕೇಳ್ಕರ್ ಮತ್ತು ದಮನ್ ಬಗ್ಗನ್ ಧ್ವನಿ ನೀಡಿದ್ದಾರೆ.