ಬೆಂಗಳೂರು: ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ ತಾಣ ಐಎಂಡಿಬಿ, (www.imdb.com)ಇಂದು 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅತ್ಯಂತ ಜನಪ್ರಿಯ 10 ಭಾರತೀಯ ಸಿನಿಮಾಗಳು ಹಾಗೂ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಬಿಡುಗಡೆಯಾದ ಅತ್ಯಂತ ಜನಪ್ರಿಯ 10 ಭಾರತೀಯ ಸಿನಿಮಾಗಳು ಮತ್ತು ಅತ್ಯಂತ ಜನಪ್ರಿಯ 10 ವೆಬ್ ಸಿರೀಸ್‌ಗಳನ್ನು ಘೋಷಿಸಿದೆ. ಐಎಂಡಿಬಿಯ ವರ್ಷಾಂತ್ಯದ ಈ ಪಟ್ಟಿಯನ್ನು ತಿಂಗಳಿಗೆ 200 ದಶಲಕ್ಷಕ್ಕೂ ಹೆಚ್ಚು ಬಾರಿ ಐಎಂಡಿಬಿ ತಾಣಕ್ಕೆ ಭೇಟಿ ನೀಡುವ ಬಳಕೆದಾರರ ಪೇಜ್ ವೀಕ್ಷಣೆಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ.
2023ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ನಂಬರ್ 1 ಸ್ಥಾನ ಪಡೆದುಕೊಂಡ ಜವಾನ್ ಚಿತ್ರದ ನಿರ್ದೇಶಕ ಆಟ್ಲಿ ಮಾತನಾಡಿ, “ಜವಾನ್ ಹಿಡಿದಿಡುವ, ಭಾವನೆಗಳಿಂದ ಕೂಡಿ, ಆ್ಯಕ್ಷನ್ ಮತ್ತು ರಂಜನೆಯ ಅಂಶಗಳಿದ್ದ. ಇದು ಸಮಾಜದಲ್ಲಿರುವ ಅನ್ಯಾಯಗಳನ್ನು ಸರಿಮಾಡಬೇಕೆಂದು ದೃಢ ನಿರ್ಧಾರ ಮಾಡಿದ ವ್ಯಕ್ತಿಯೊಬ್ಬನ ಮಹಾಗಾಥೆಯನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿತು. ಈ ಚಿತ್ರವು ನಮ್ಮೆಲ್ಲರ ಹೃದಯದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಇದು ಪಡೆದುಕೊಂಡ ವಿಶ್ವದಾದ್ಯಂತ ಇರುವ ಪ್ರೇಕ್ಷಕರಿಂದ ಪಡೆದುಕೊಂ ಪ್ರೀತಿ ನಿಜಕ್ಕೂ ಅಗಾಧವಾದದ್ದು. ನನ್ನನ್ನು ನಾನು ರೂಪಿಸಿಕೊಳ್ಳುತ್ತಾ ಬೆಳೆದ ಅವಧಿಯಲ್ಲಿ ನನ್ನ ಜ್ಞಾನ ಮತ್ತು ವಿಶ್ವದ ಸಿನಿಮಾವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಐಎಂಡಿಬಿ ಶ್ರೀಮಂತವಾಗಿಸಿದೆ. ಐಎಂಡಿಬಿಯಿಂದ ಈ ಗೌರವ ಸಿಗುತ್ತಿರುವುದು ನಿಜಕ್ಕೂ ಕನಸೊಂದು ನನಸಾದ ಖುಷಿ. ಶಾರುಖ್ ಖಾನ್ ಅವರಿಗೆ ನಾನು ಹೃದಯಪೂರ್ವಕ ಕೃತಜ್ಞತೆಯನ್ನು ಅರ್ಪಿಸಲು ಬಯಸುತ್ತೇನೆ. ರೆಡ್ ಚಿಲ್ಲೀಸ್, ನನ್ನ ಪತ್ನಿ, ನನ್ನ ತಂಡ ಮತ್ತು ಈ ಸಾಧನೆ ಸಾಧ್ಯವಾಗಿಸಲು ತಮ್ಮದೇ ಆದ ರೀತಿಯಲ್ಲಿ ಅಮೂಲ್ಯವಾದ ಕೊಡುಗೆ ನೀಡಿದ ಪ್ರೇಕ್ಷಕರಿಗೆ ನಾನು ಕೃತಜ್ಞತೆ ಅರ್ಪಿಸುತ್ತೇನೆ. ಪ್ರತಿಯೊಬ್ಬರಿಗೂ ನನ್ನ ಹೃದಯದಾಳದ ಪ್ರೀತಿ” ಎಂದು ಹೇಳಿದ್ದಾರೆ.
ನಂಬರ್ 3ನೇ ಸ್ಥಾನದಲ್ಲಿರುವ, ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ರಾಕಿ ಔರ್ ರಾಣಿಕಿ ಪ್ರೇಮ್ ಕಹಾನಿ ಚಿತ್ರದ ನಿರ್ದೇಶಕ ಕರಣ್ ಜೊಹರ್ ಮಾತನಾಡಿ, “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಸಿಕ್ಕ ಪ್ರೀತಿ, ನನಗೆ ಮತ್ತು ನನ್ನ ತಂಡಕ್ಕೆ ಸಂತಸ ಉಂಟು ಮಾಡಿದೆ. ಐಎಂಡಿಬಿಯ 10 ಚಿತ್ರಗಳ ಪಟ್ಟಿಯಲ್ಲಿರುವುದೇ ನಮ್ಮ ಚಿತ್ರಕ್ಕೆ ಸಿಕ್ಕ ಮೆಚ್ಚುಗೆಯನ್ನು ಪ್ರಮಾಣೀಕರಿಸುತ್ತದೆ. ಚಿತ್ರ ತಯಾರಕನಾಗಿ, ನನಗೆ ಇದು ಇನ್ನಷ್ಟು ಚೈತನ್ಯ ನೀಡಿದೆ. ನಾನು ಆಭಾರಿಯಾಗಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Upcoming Web Series: ನೆಚ್ಚಿನ ವೆಬ್‌ಸಿರೀಸ್‌ಗಳ ರಿಲೀಸ್ ಡೇಟ್ ಅನೌನ್ಸ್; ಮಾರ್ಕ್ ಮಾಡಿಕೊಳ್ಳಿ
“ಈ ವರ್ಷ ನಾವು ಬಿಡುಗಡೆ ಮಾಡಿದ ಎರಡೂ ಸರಣಿಗಳು ತುಂಬಾ ಮೆಚ್ಚುಗೆ ಪಡೆದಿರುವುದನ್ನು ನೋಡುವುದೇ ರೋಮಾಂಚನಕಾರಿ”ಎಂದು ಫರ್ಝಿ ಮತ್ತು ಗನ್ಸ್ ಮತ್ತು ಗುಲಾಬ್ಸ್ (2023 ರ ನಂ. 1 ಮತ್ತು ನಂ. 2 ಶ್ರೇಯಾಂಕ ಪಡೆದಿರುವ ವೆಬ್ ಸಿರೀಸ್‌ಗಳು) ನಿರ್ದೇಶಕರಾದ ರಾಜ್ ಮತ್ತು ಡಿಕೆ ಹೇಳಿದ್ದಾರೆ. “ಪ್ರೈಮ್ ವೀಡಿಯೊ ಮತ್ತು ನೆಟ್‌ಫ್ಲಿಕ್ಸ್‌ಗಾಗಿ ನಿರ್ಮಿಸಿದ ಎರಡೂ ಸರಣಿಗಳು ವಿಭಿನ್ನ ಪ್ರಪಂಚಗಳು. ಎರಡೂ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಲ್ಲಿ ಗೆಲುವು ಸಾಧಿಸಿದ್ದೇವೆನ್ನಲು ಇದು ಸಾಕು. ಎಲ್ಲಾ ಚಲನಚಿತ್ರ ಪ್ರೇಮಿಗಳಿಗಾಗಿ ಸದಾ ಲಭ್ಯವಿರುವುದಕ್ಕೆ ಧನ್ಯವಾದಗಳು, ಐಎಂಡಿಬಿ” ಎಂದು ಅವರು ಹೇಳಿದ್ದಾರೆ.
ಐಎಂಡಿಬಿಯ 2023ರ ಟಾಪ್ 10 ಭಾರತೀಯ ಚಿತ್ರಗಳು
- ಜವಾನ್
- ಪಠಾಣ್
- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
- ಲಿಯೊ
- ಒಎಂಜಿ 2
- ಜೈಲರ್
- ಗದರ್ -2
- ದಿ ಕೇರಳ ಸ್ಟೋರಿ
- ತು ಝೂಠಿ ಮೈ ಮಕ್ಕಾರ್
- ಭೋಲ
ಜನವರಿ 1 ಮತ್ತು ನವೆಂಬರ್ 6, 2023 ರ ನಡುವೆ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳಲ್ಲಿ, ಸರಾಸರಿ ಐಎಂಡಿಬಿ ಬಳಕೆದಾರರ ರೇಟಿಂಗ್ 5 ಅಥವಾ ಅದಕ್ಕಿಂತ ಹೆಚ್ಚಿನದಾಗಿದೆ. ಈ 10 ಶೀರ್ಷಿಕೆಗಳು ಐಎಂಡಿಬಿ ಬಳಕೆದಾರರಲ್ಲಿ ಸ್ಥಿರವಾಗಿ ಹೆಚ್ಚು ಜನಪ್ರಿಯವಾಗಿವೆ.