ಬೆಂಗಳೂರು: ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಂದಿರುವ ʻದಿ ನೈಟ್ ಮ್ಯಾನೇಜರ್ʼ (‘The Night Manager’) ವೆಬ್ ಸೀರಿಸ್ ನೋಡುಗರ ಹೃದಯಗಳನ್ನು ಗೆಲ್ಲುತ್ತಿದೆ. ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದ ಸುತ್ತ ಹೆಣೆದಿರುವ ಸ್ಪೈ ಥ್ರಿಲ್ಲರ್ ಇದಾಗಿದೆ. ಈ ಪ್ರದರ್ಶನವು ಟಾಮ್ ಹಿಡಲ್ಸ್ಟನ್, ಹಗ್ ಲೌರಿ ಮತ್ತು ಒಲಿವಿಯಾ ಕೋಲ್ಮನ್ (Tom Hiddleston, Hugh Laurie and Olivia Colman) ನಟಿಸಿದ ಬ್ರಿಟಿಷ್ ಕಾರ್ಯಕ್ರಮದ ರೂಪಾಂತರವಾಗಿದೆ. ಕಾರ್ಯಕ್ರಮವನ್ನು ವೀಕ್ಷಿಸಿದ ಅಭಿಮಾನಿಗಳು ಅದ್ದೂರಿ ನಿರ್ಮಾಣ, ಆಸಕ್ತಿದಾಯಕ ಕಥೆ-ಹೇಳುವಿಕೆ ಮತ್ತು ಮುಖ್ಯ ತಾರೆಯರ ಅಭಿನಯವನ್ನು ಇಷ್ಟಪಟ್ಟಿದ್ದಾರೆ. ಇದೀಗ ನೆಟ್ಟಿಗರು ದಿ ನೈಟ್ ಮ್ಯಾನೇಜರ್ ಸಿರೀಸ್ ಪಠಾಣ್ಗಿಂತ ಉತ್ತಮವಾಗಿದೆ ಎಂದು ಟ್ರೆಂಡ್ ಮಾಡುತ್ತಿದ್ದಾರೆ.
ಈ ಹಿಂದೆ ಯಾರೂ ಪಠಾಣ್ ಸಿನಿಮಾವನ್ನು ವೆಬ್ ಸಿರೀಸ್ ಜತೆ ಹೋಲಿಕೆ ಮಾಡುತ್ತಿರಲಿಲ್ಲ. ಬರಹಗಾರ ಶ್ರೀಧರ್ ರಾಘವನ್ ಎರಡೂ ಪಠಾಣ್ ಹಾಗೂ ದಿ ನೈಟ್ ಮ್ಯಾನೇಜರ್ ಎರಡೂ ಯೋಜನೆಗಳಿಗೆ ಸ್ಕ್ರಿಪ್ಟ್ ಬರೆದಿದ್ದಾರೆ. ಎರಡೂ ಯೋಜನೆಗಳು ಸ್ಪೈ ಆ್ಯಂಗಲ್ ಹೊಂದಿದೆ ಎಂದು ನೆಟ್ಟಿಗರು ಟ್ವೀಟ್ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Shah Rukh Khan: ʼಪಠಾಣ್ʼ ಕುರಿತು ಶಾರುಖ್ ಖಾನ್ಗೆ ಇಷ್ಟವಾಗದ ಅಂಶ ಯಾವುದು? ಅವರು ಹೇಳಿದ್ದೇನು?
ನೆಟ್ಟಿಗರ ಟ್ವೀಟ್
ಆದರೂ ಶಾರುಖ್ ಖಾನ್ ಅಭಿಮಾನಿಗಳು ಇದರಿಂದ ಪ್ರಭಾವಿತರಾಗಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪಠಾಣ್ ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ರೂ. ಗಳಿಸಿದೆ.