Site icon Vistara News

Rakhi Sawant | ಮೈಸೂರಿನ ಜನ ನನ್ನೊಂದಿಗೆ ನಿಲ್ಲಬೇಕು: ಆದಿಲ್‌ ವಿಚಾರಕ್ಕೆ ಗಳಗಳನೆ ಅತ್ತ ರಾಖಿ ಸಾವಂತ್‌!

Rakhi Sawant

ಬೆಂಗಳೂರು : ನಟಿ ರಾಖಿ ಸಾವಂತ್‌ (Rakhi Sawant ), ತಾವು ಆದಿಲ್‌ ಖಾನ್‌ನನ್ನು ಮದುವೆಯ ಫೋಟೋ ಹಂಚಿಕೊಂಡಿದ್ದರು.  ಆದಿಲ್ ಜತೆಗೆ ಮದುವೆಯ ನಂತರ ರಾಖಿ ತನ್ನ ಹೆಸರನ್ನು ‘ರಾಖಿ ಸಾವಂತ್ ಫಾತಿಮಾ’ ಎಂದು ಬದಲಾಯಿಸಿಕೊಂಡಿದ್ದಾರೆ. ಇದೀಗ ಮಾಧ್ಯಮದವರ ಮುಂದೆ ರಾಖಿ ಅಳಲು ತೋರಿಕೊಂಡಿದ್ದಾರೆ. ನಮ್ಮಿಬ್ಬರದ್ದೂ ಮದುವೆ ಆಗಿಲ್ಲ ಎಂದು ಹೇಳುತ್ತಿದ್ದ ಆದಿಲ್, ಕೊನೆಗೂ ಒಪ್ಪಿಕೊಂಡು ಆಗಿದೆ. ಆದರೆ, ಮೈಸೂರಿನಿಂದ ಆತನಿಗೆ ನಿರಂತರವಾಗಿ ಕರೆ ಬರುತ್ತಿರುವುದಾಗಿ ರಾಖಿ ಹೇಳಿಕೊಂಡಿದ್ದಾರೆ.

ಕ್ಯಾಮೆರಾಗಳ ಮುಂದೆ ದುಃಖಿಸುತ್ತ ಮಾತನಾಡಿರುವ ರಾಖಿ ಸಾವಂತ್‌ ‘ಮೈಸೂರಿನ ಜನ ನನ್ನೊಂದಿಗೆ ನಿಲ್ಲಬೇಕು. ಆದಿಲ್‌ ನನ್ನನ್ನು ಮದುವೆಯಾದಾಗಿನಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ನನ್ನನ್ನು ಬಿಟ್ಟು ಬಿಡು ಎಂದು ಅವರಿಗೆ ಒತ್ತಾಯಿಸುತ್ತಿದ್ದಾರೆ. ನಾನು ಆದಿಲ್‌ ಅವರನ್ನು ತುಂಬ ಪ್ರೀತಿಸುತ್ತೇನೆ. ಈ ವಿಷಯದಲ್ಲಿ ನನಗೆ ಮೈಸೂರು ಜನ ಆಶೀರ್ವದಿಸಬೇಕುʼʼ ಎಂದು ರಾಖಿ ಕೈ ಮುಗಿದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ | Rakhi Sawant | ಅಮ್ಮನ ಚಿಕಿತ್ಸೆಗೆ ಉದ್ಯಮಿ ಅಂಬಾನಿ ನಮಗೆ ಸಹಾಯ ಮಾಡುತ್ತಿದ್ದಾರೆ: ರಾಖಿ ಸಾವಂತ್‌!

ರಾಖಿ ಸಾವಂತ್‌ ಸಂದರ್ಶಕರು ‘ನೀವು ಪ್ರಗ್ನೆಂಟಾ?’ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ‘ನೋ ಕಮೆಂಟ್ಸ್’ ಎಂದು ಹೇಳುವ ಮೂಲಕ ಅನುಮಾನಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ ರಾಖಿ ಸಾವಂತ್. ಕೆಲವು ದಿನಗಳ ಹಿಂದೆ, ನಟಿ ರಾಖಿ ಸಾವಂತ್ ಅವರು ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದರು.

ಇದನ್ನೂ ಓದಿ | Rakhi Sawant | ರಾಖಿ ಸಾವಂತ್‌ ಅಳುವಿನ ಬೆನ್ನಲ್ಲೇ ಮದುವೆ ಪೋಸ್ಟ್‌ ಹಂಚಿಕೊಂಡ ಪತಿ ಆದಿಲ್ ಖಾನ್ ದುರಾನಿ!

Exit mobile version