Site icon Vistara News

Ambareesh Birthday: ಅಂಬರೀಶ್‌ ಹುಟ್ಟು ಹಬ್ಬಕ್ಕೆ ʻಬ್ಯಾಡ್‌ ಮ್ಯಾನರ್ಸ್ʼ ಚಿತ್ರತಂಡದಿಂದ ಸ್ಪೆಷಲ್‌ ಗಿಫ್ಟ್‌!

BadManners Film Update

ಬೆಂಗಳೂರು: ಮೇ 29 ಅಂಬರೀಶ್‌ ಅವರ 71ನೇ ಜನುಮದಿನ (Ambareesh Birthday). ಕನ್ನಡದಲ್ಲಿ ಮಾತ್ರವಲ್ಲದೆ ಅಂಬರೀಸ್ ಅವರು ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ನಲ್ಲಿಯೂ ಅಪಾರ ಸ್ನೇಹ ಬಳಗ ಹೊಂದಿದ್ದರು. ರಾಜಕೀಯದಲ್ಲಿಯೂ ಗುರುತಿಸಿಕೊಂದ್ದರು. ಇದೀಗ ಅಂಬಿ ಹುಟ್ಟುಹಬ್ಬಕ್ಕೆ ಅಭಿಷೇಕ್‌ ಅಂಬರೀಶ್‌ (Abhishek Ambareesh) ಅಭಿನಯದ ʻಬ್ಯಾಡ್‌ ಮ್ಯಾನರ್ಸ್ʼ ಚಿತ್ರತಂಡ ವಿಡಿಯೊ ಬಿಡುಗಡೆ ಮಾಡಿ ಶುಭಾಶಯ ತಿಳಿಸಿದೆ.

ಕೆಲವು ದಿನಗಳ ಹಿಂದೆ ಚಿತ್ರದ ಮೊಟ್ಟ ಮೊದಲ ಹಾಡು ಬಿಡುಗಡೆಗೊಂಡು ಸಖತ್‌ ಸೌಂಡ್‌ ಮಾಡಿತ್ತು. ರಿಲೀಸ್‌ ಆದ ಒಂದೇ ದಿನಕ್ಕೆ 2.7 ಮಿಲಿಯನ್‌ ವೀಕ್ಷಣೆ ಕಂಡಿತ್ತು. ಯುಗಾದಿ ಹಬ್ಬಕ್ಕೆ ಬ್ಯಾಡ್‌ ಮ್ಯಾನರ್ಸ್ ಟೈಟಲ್‌ ಟ್ರ್ಯಾಕ್‌ ಸಿನಿರಸಿಕರಿಗೆ ಸಖತ್‌ ಕಿಕ್‌ ನೀಡಿತ್ತು. ಬಹು ಭಾಷಾ ಗಾಯಕಿ ಉಷಾ ಉತ್ತುಪ್‌ ಅವರ ಅದ್ಭುತ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿತ್ತು. ಗೀತೆಯಲ್ಲಿ ಅಭಿಷೇಕ್‌ ಅಂಬರೀಶ್‌ ನಿರ್ವಹಿಸಿರುವ ಪಾತ್ರದ ಚಿತ್ರಣ ಇತ್ತು. ಪ್ರತಿ ಸಾಲಿನಲ್ಲೂ ಅಭಿ ಪಾತ್ರದ ಸಾಫ್ಟ್‌ ಮತ್ತು ಹಾರ್ಡ್‌ ಮ್ಯಾನರಿಸಂನ ಝಲಕ್ ಇತ್ತು.

ನಿರ್ದೇಶಕ ದುನಿಯಾ ಸೂರಿ ಅವರ ಕಲ್ಪನೆಯ ಈ ಗೀತೆಯ ಮೇಕಿಂಗ್ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹವಾ ಕ್ರಿಯೇಟ್‌ ಮಾಡಿತ್ತು. ಚರಣ್ ರಾಜ್ ಸಂಗೀತ ನಿರ್ದೇಶನದ ಈ ಹಾಡಲ್ಲಿ ಅಭಿಷೇಕ್‌ ಅಂಬರೀಶ್‌ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Abhishek Ambareesh: ಉಷಾ ಉತ್ತುಪ್‌ ಕಂಠದಲ್ಲಿ ʻಬ್ಯಾಡ್‌ ಮ್ಯಾನರ್ಸ್ʼ: ಯಂಗ್‌ ರೆಬೆಲ್‌ ಸ್ಟಾರ್‌ಗೆ ಭರ್ಜರಿ ರೆಸ್ಪಾನ್ಸ್‌!

ಬ್ಯಾಡ್ ಮ್ಯಾನರ್ಸ್‌ ಹಾಡಿಗೆ ಧನು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಸಿನಿಮಾಟೋಗ್ರಾಫರ್ ಶೇಖರ್ ಅದನ್ನು ಅಷ್ಟೇ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಅಭಿಷೇಕ್ ಖಡಕ್ ಪೊಲೀಸ್‌ ಆಫಿಸರ್ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಧನಂಜಯ್ ರಾಜನ್ ಈ ಗೀತೆಯನ್ನು ಬರೆದಿದ್ದಾರೆ.

Exit mobile version