Site icon Vistara News

The Vaccine War Box Office: ಮೊದಲ ದಿನ ಕೇವಲ 1 ಕೋಟಿ ರೂ. ಕಲೆಕ್ಷನ್‌ ಮಾಡಿದ ಅಗ್ನಿಹೋತ್ರಿ ಸಿನಿಮಾ!

The Vaccine War

ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಯಶಸ್ಸಿನ ನಂತರ, ರಾಷ್ಟ್ರ-ಪ್ರಶಸ್ತಿ ಪುರಸ್ಕೃತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಸೆ.28ರಂದು (The Vaccine War Box Office) ಬಿಡುಗಡೆಗೊಂಡಿತು. ಅನುಪಮ್ ಖೇರ್, ನಾನಾ ಪಾಟೇಕರ್, ಸಪ್ತಮಿ ಗೌಡ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ದಿ ವ್ಯಾಕ್ಸಿನ್ ವಾರ್’ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಮೊದಲನೇ ದಿನ ಕೇವಲ ಒಂದು ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.

ಟ್ರೇಡ್‌ ವಿಶ್ಲೇಷಕ ತರಣ್‌ ಆದರ್ಶ್‌ ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. “ವ್ಯಾಕ್ಸಿನ್ ವಾರ್ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ. ಇದು ಪ್ರಬುದ್ಧ ಮತ್ತು ಸ್ಫೂರ್ತಿದಾಯಕ ಕಥೆ. ಇಲ್ಲಿನ ವೀರರು ನಮ್ಮ ವಿಜ್ಞಾನಿಗಳು ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ತಮ್ಮ ತ್ಯಾಗ ಮತ್ತು ಶಕ್ತಿಯನ್ನು 2 ಗಂಟೆ 40 ನಿಮಿಷಗಳಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ಈ ಸಿನಿಮಾ ವೀಕ್ಷಿಸಲು ಮರೆಯಬೇಡಿ” ಎಂದು ಹೇಳಿಕೊಂಡಿದ್ದರು. ಲಸಿಕೆಗಳ ಅಭಿವೃದ್ಧಿಯ ಹಿಂದೆ ಭಾರತೀಯ ವಿಜ್ಞಾನಿಗಳ ಹೋರಾಟದ ಕುರಿತು ‘ದಿ ವ್ಯಾಕ್ಸಿನ್ ವಾರ್’ ಕಥೆಯಿದೆ.

ವರದಿಗಳ ಪ್ರಕಾರ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಸೆಪ್ಟೆಂಬರ್ 28ರಂದು ಕೇವಲ 1.3 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಇದು ‘ಫುಕ್ರೆ 3’ (Fukrey 3) ಮತ್ತು ಕಂಗನಾ ರಣಾವತ್ ಅವರ ‘ಚಂದ್ರಮುಖಿ 2’ ಜತೆಗೆ ರಿಲೀಸ್‌ ಆಗಿದೆ. ‘ದಿ ವ್ಯಾಕ್ಸಿನ್ ವಾರ್’ ಗುರುವಾರ (ಸೆ.28) ಶೇ.10.17 ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಸುಮಾರು 10 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: The Vaccine War Movie: ದಿ ವ್ಯಾಕ್ಸಿನ್ ವಾರ್ ಸಿನಿಮಾ ಟ್ರೈಲರ್ ಔಟ್, ಜನರಿಂದ ಸಖತ್ ರೆಸ್ಪಾನ್ಸ್!

ಪಲ್ಲವಿ ಜೋಶಿ ಮತ್ತು ಐ ಆಮ್ ಬುದ್ಧ ನಿರ್ಮಿಸಿದ ಈ ಸಿನಿಮಾ ಸೆಪ್ಟೆಂಬರ್ 28 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮಹಿಳಾ ವಿಜ್ಞಾನಿಗಳು ಕೋವ್ಯಾಕ್ಸಿನ್‌ಗೋಸ್ಕರ ಹೇಗೆಲ್ಲ ಶ್ರಮಿಸುತ್ತಾರೆ ಎಂಬ ಬಗ್ಗೆ ಸಿನಿಮಾವಿದೆ.

ಸಪ್ತಮಿ ಗೌಡ ಅವರಿಗೆ ಇದು ಮೊದಲನೇ ಬಾಲಿವುಡ್‌ ಸಿನಿಮಾ. ಅಷ್ಟೇ ಅಲ್ಲದೆ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ಅವರ ʼಕಾಳಿʼ ಸಿನಿಮಾದಲ್ಲಿಯೂ ಸಪ್ತಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಪೈಲ್ವಾನ್‌, ಗಜಕೇಸರಿ, ಹೆಬ್ಬುಲಿ ಚಿತ್ರವನ್ನು ನಿರ್ದೇಶಿಸಿರುವ ಕೃಷ್ಣ ಅವರು ʼಕಾಳಿʼ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಯ ಮಗ ಯುವ ರಾಜ್‌ಕುಮಾರ್‌ ಅವರ ಚೊಚ್ಚಲ ಸಿನಿಮಾ ʻಯುವʼ ಸಿನಿಮಾಗೂ ಸಪ್ತಮಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Exit mobile version