Site icon Vistara News

Ashish Vidyarthi: ನಾವು ಸಂಸಾರ ಮಾಡುವುದು ಜನರಿಗಾಗಿ ಅಲ್ಲ; 2ನೇ ಮದುವೆ ಗುಟ್ಟು ರಟ್ಟು ಮಾಡಿದ ಆಶಿಶ್ ವಿದ್ಯಾರ್ಥಿ

separation Ashish Vidyarthi

ಬೆಂಗಳೂರು: ಹಿರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಇತ್ತೀಚೆಗೆ ತಮ್ಮ ಎರಡನೇ ಮದುವೆಯನ್ನು ರಿವೀಲ್‌ ಮಾಡಿದ್ದರು. ಕಳೆದ ವರ್ಷ ಮೊದಲ ಪತ್ನಿ ರಾಜೋಶಿ ಬರುವಾ ಅವರಿಂದ ವಿಚ್ಛೇದನ ಪಡೆದ ನಟ ಆಶಿಶ್‌ ಅವರು ರೂಪಾಲಿ ಬರುವಾ ಅವರನ್ನು ಪ್ರೀತಿಸುತ್ತಿದ್ದರು. ಮೇ 25ರಂದು ರೂಪಾಲಿ ಹಾಗೂ ಆಶಿಶ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು. ಮಾಧ್ಯಮವೊಂದರ ವಿಶೇಷ ಚಾಟ್‌ನಲ್ಲಿ, ಆಶಿಶ್ ಅವರು ಮತ್ತು ಅವರ ಮೊದಲ ಪತ್ನಿ ರಾಜೋಶಿ ತಮ್ಮ ಬೇರ್ಪಡುವಿಕೆಯ ನಿರ್ಧಾರದ ಬಗ್ಗೆ ಮಗ ಅರ್ಥ್‌ಗೆ ಹೇಗೆ ತಿಳಿಸಿದರು ಎಂಬುದನ್ನು ಬಹಿರಂಗಪಡಿಸಿದರು.

ತಾನು ಮತ್ತು ಪಿಲೂ (ರಾಜೋಶಿ ಬರುವಾ) ಈ ಸುದ್ದಿಯನ್ನು ಮಗ ಅರ್ಥ್‌ಗೆ ತಿಳಿಸಿದ್ದು ಹೇಗೆ ಎಂಬುದರ ಬಗ್ಗೆ ಆಶಿಶ್‌ ಹೇಳಿದ್ದು ಹೀಗೆ ʻʻನನಗೆ ತುಂಬಾ ತಪ್ಪಿತಸ್ಥ ಭಾವನೆ ಇತ್ತು, ನಾನು ಮತ್ತು ಪಿಲೂ ಇಬ್ಬರೂ ಅವನಿಗೆ ಈ ರೀತಿಯ ಜೀವನವನ್ನು ನೀಡಲು ಬಯಸಿರಲಿಲ್ಲ. ನಾನು ಪಿಲೂ ಒಟ್ಟಿಗೆ ಇರುವುದರಿಂದ ಗೊಂದಲಗಳು ಉಂಟಾಗುತ್ತಿತ್ತು. ಇದರಿಂದಾಗಿ ಪಿಲೂ ಮತ್ತು ನನ್ನಿಬ್ಬರ ಮೇಲೆ ಪರಿಣಾಮ ಬೀರುತ್ತಿತ್ತು, ಮುಖ್ಯವಾಗಿ, ಇದು ಅರ್ಥ್ ಮೇಲೆ ಪರಿಣಾಮ ಬೀರುತ್ತಿತ್ತುʼʼಎಂದರು.

ಮಾತು ಮುಂದುವರಿಸಿ ʻಯಾವುದೇ ವಿಚಾರಗಳು ಕಾರ್ಯರೂಪಕ್ಕೆ ಬರದಿದ್ದಾಗ, ಒಳ್ಳೆಯ ಜನರು ಶತ್ರುಗಳಾಗುತ್ತಾರೆ. ಕಷ್ಟ ಪಟ್ಟು ಸಂಬಂಧದಲ್ಲಿರಲು ಪ್ರಯತ್ನಿಸುತ್ತೀರಿ, ಏಕೆಂದರೆ ಜನರು ಏನು ಹೇಳುತ್ತಾರೆ? ಎಂಬ ಭಾವನೆ ನಿಮ್ಮಲ್ಲಿ ಇರುತ್ತದೆ. ಜನರು ಒಟ್ಟಿಗೆ ಇರಲು, ಒಂದೇ ಮನೆಯಲ್ಲಿರಲು ಮತ್ತು ಅದನ್ನು ನಿಭಾಯಿಸಲು ಸಲಹೆ ನೀಡುತ್ತಾರೆ. ಹಾಗೇ ಅವರ ಸಲಹೆಯಂತೆ ನಾನು ಒಂದೇ ಮನೆಯಲ್ಲಿ ಉಳಿದುಕೊಂಡರೆ, ಬೇರೆಯವರು ಸಂತೋಷವಾಗಿರುತ್ತಾರೇ ವಿನಃ ನಾವಲ್ಲ. ಈ ರೀತಿಯಲ್ಲಿ ಬದುಕುವುದರಿಂದ ಕುಟುಂಬದ ಮೇಲೆ ಪರಿಣಾಮ ಬೀರುವುದಿಲ್ಲವೇ? ಅರ್ಥ್ ಮೇಲೆ ಪರಿಣಾಮ ಬೀರುವುದಿಲ್ಲವೇ?ಎಂದರು. ʻʻನಾವು ವಯಸ್ಕ ಮಗುವಿನೊಂದಿಗೆ ಮಾತನಾಡುತ್ತಿದ್ದೇವೆ ಎಂಬುದು ತುಂಬಾ ಸ್ಪಷ್ಟವಾಗಿತ್ತು, ಅವರೊಂದಿಗೆ ಈ ವಿಚಾರವನ್ನು ಹೇಳುವುದು ತುಂಬಾ ಕಷ್ಟಕರವಾಗಿತ್ತು ಎಂದರು. ಆದರೆ ಅವನು ಈ ಸಂಗತಿಯನ್ನು ಅರ್ಥಮಾಡಿಕೊಂಡʼʼ ಎಂದರು.

ಇದನ್ನೂ ಓದಿ: Ashish Vidyarthi: ಯಾವುದೇ ವಯಸ್ಸಲ್ಲಾದರೂ ಸಂತೋಷವಾಗಿರಬಹುದು; ಮದುವೆ ಬಗ್ಗೆ ಆಶಿಶ್ ವಿದ್ಯಾರ್ಥಿ ಹೇಳಿದ್ದೇನು?

ಆಶಿಶ್ ವಿದ್ಯಾರ್ಥಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಕೋರ್ಟ್‌ ಮ್ಯಾರೇಜ್‌ ಆಗಿದ್ದರು. ಮದುವೆಯಲ್ಲಿ ಕೇರಳ ಮತ್ತು ಅಸ್ಸಾಂ ಸಂಪ್ರದಾಯಗಳನ್ನು ಅನುಸರಿಸಿದ್ದರು. ಆಶಿಶ್ ವಿದ್ಯಾರ್ಥಿ ಅವರ ತಂದೆ ಮಲಯಾಳಿಯಾಗಿದ್ದು ಕೇರಳದ ಕಣ್ಣೂರಿನವರಾಗಿದ್ದರು. ಅವರ ತಾಯಿ ಬೆಂಗಾಲಿಯವರಾಗಿದ್ದು ರಾಜಸ್ಥಾನ ಮೂಲದವರು. ಆಶಿಶ್‌ ಇದುವರೆಗೆ 11 ವಿವಿಧ ಭಾಷೆಗಳಲ್ಲಿ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದ್ದರು. ಸರ್ದಾರ್ ವಲ್ಲಭಭಭಾಯಿ ಪಟೇಲ್ ಅವರ ಜೀವನವನ್ನು ಆಧರಿಸಿದ ಸರ್ದಾರ್‌ನಲ್ಲಿ ಆಶಿಶ್ ವಿದ್ಯಾರ್ಥಿ ವಿ ಪಿ ಮೆನನ್ ಪಾತ್ರವನ್ನು ನಿರ್ವಹಿಸಿದ್ದಾರೆ.

Exit mobile version