Site icon Vistara News

Ranbir Kapoor | ಥೇಟ್​ ರಣಬೀರ್​ ಕಪೂರ್​​ರಂತೆಯೇ ಇದ್ದಾನೆ ಈ ಬಾಲಕ ನೀರವ್​ ಭಟ್​ !

ಮುಂಬಯಿ: ಜಗತ್ತಿನಲ್ಲಿ ಒಂದೇ ರೂಪದ ಏಳು ಜನರು ಇರುತ್ತಾರಂತೆ ಎಂಬುದೊಂದು ಮಾತಿದೆ. ಅದೆಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ, ಆದರೆ ‘ಹೋಲಿಕೆ’ ಇದ್ದೇ ಇರುತ್ತದೆ. ರಕ್ತ ಸಂಬಂಧಗಳಲ್ಲಿ ಒಬ್ಬರನ್ನು ಸ್ವಲ್ಪವಾದರೂ ಹೋಲುವಂತೆ ಇನ್ನೊಬ್ಬರು ಇರುತ್ತಾರೆ. ಆದರೆ ಕೆಲವೊಮ್ಮೆ ಪರಿಚಯವೇ ಇಲ್ಲದವರು, ರಕ್ತ ಸಂಬಂಧಿಗಳು ಅಲ್ಲದವರೂ ಒಬ್ಬರನ್ನೊಬ್ಬರು ಹೋಲುತ್ತಾರೆ. ಕೆಲವರನ್ನು ನೋಡಿ, ‘ಅರೆ, ಹೌದಲ್ಲ, ಇಬ್ಬರೂ ಒಂದೇ ತರ ಇದ್ದಾರೆ !’ ಎಂದು ನಾವು ಎಷ್ಟೋ ಸಂದರ್ಭಗಳಲ್ಲಿ ಅಂದುಕೊಳ್ಳುವುದೂ ಉಂಟು.

ಈಗ ಇಲ್ಲೊಬ್ಬ ಬಾಲಕನ ಫೋಟೋ-ವಿಡಿಯೊ ವೈರಲ್​ ಆಗುತ್ತಿದ್ದು, ಅವನನ್ನು ನೋಡಿದವರು, ಈ ಹುಡುಗ ಥೇಟ್ ಬಾಲಿವುಡ್​ ನಟ ರಣಬೀರ್ ಕಪೂರ್​​ರಂತೆಯೇ ಇದ್ದಾನೆ ಎಂದು ಹೇಳುತ್ತಿದ್ದಾರೆ. ಆ ಹುಡುಗನ ಹೆಸರು ನೀರವ್​ ಭಟ್ ಎಂದಾಗಿದ್ದು, ಇನ್​ಸ್ಟಾಗ್ರಾಂ ಅಕೌಂಟ್​ ಕೂಡ ಹೊಂದಿದ್ದಾನೆ.

ಬಾಲಕನ ಇನ್​ಸ್ಟಾಗ್ರಾಂ ಅಕೌಂಟ್​​ನ್ನು ಅವನ ತಂದೆ-ತಾಯಿಯೇ ನಿರ್ವಹಣೆ ಮಾಡುತ್ತಾರೆ. ಹಾಗೇ, ‘ನನ್ನನ್ನು ಪ್ರೀತಿಯಿಂದ ರಣಬೀರ್​ ಕಪೂರ್​ ಎಂದು ಕರೆಯುತ್ತಾರೆ’ ಎಂಬುದು ಅವನ ಇನ್​ಸ್ಟಾ ಖಾತೆಯ ಬಯೋದಲ್ಲಿ ಬರೆಯಲಾದ ವಾಕ್ಯ. ಆತ ಕಿವಿಗೆ ಹೆಡ್​ಫೋನ್​ ಹಾಕಿಕೊಂಡು ‘ಮೇರಾ ಮುಜೆ ನಹಿ ಪತಾ ಹೆ’ ಎಂಬ ಹಾಡಿಗೆ ಲಿಪ್​ಸಿಂಕ್​ ಮಾಡಿರುವ ವಿಡಿಯೊಕ್ಕೆ 3 ಮಿಲಿಯನ್ಸ್​ಗಳಷ್ಟು ವೀವ್ಸ್​ ಬಂದಿದೆ. ಆತನನ್ನು ನೋಡಿದ ಅನೇಕರು ‘ಈ ಹುಡುಗ ಪಕ್ಕಾ ರಣಬೀರ್​ ಕಪೂರ್​’ ಎಂದಿದ್ದಾರೆ.

ಇದನ್ನೂ ಓದಿ: Brahmastra: ಕನ್ನಡದಲ್ಲೇ ಟ್ವೀಟ್‌ ಮಾಡಿದ ಆಲಿಯಾ : ಶಿವನ ಅವತಾರದಲ್ಲಿ ರಣಬೀರ್‌ ಕಪೂರ್‌

Exit mobile version