Site icon Vistara News

Tiger 3: ʻಟೈಗರ್‌ʼ ಪ್ರಿ ಬುಕ್ಕಿಂಗ್‌; 33 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟ, 1 ಕೋಟಿ ರೂ. ಗಳಿಕೆ!

Tiger 3 advance booking crosses 1 crore

ಬೆಂಗಳೂರು: ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಚಿತ್ರ ಟೈಗರ್ 3 (Tiger 3) ಬಾಕ್ಸ್ ಆಫೀಸ್‌ನಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆಯುವುದಂತೂ ಗ್ಯಾರಂಟಿ ಆದಂತಿದೆ. ಆರಂಭಿಕ ಅಂದಾಜಿನ ಪ್ರಕಾರ, ಭಾರತದಲ್ಲಿ ಸೀಮಿತ ನಗರಗಳಲ್ಲಿ ಟಿಕೆಟ್‌ ಪ್ರಿ ಬುಕ್ಕಿಂಗ್‌ನಲ್ಲಿ 1 ಕೋಟಿ ರೂ. ಗಡಿ ದಾಟಿದೆ ಎಂದು ವರದಿಯಾಗಿದೆ. ಚಿತ್ರವು ಸುಮಾರು 33,090 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಪೂರ್ಣ ಪ್ರಮಾಣದ ಬುಕ್ಕಿಂಗ್ ನ.5ರಂದು ಪ್ರಾರಂಭವಾಗಲಿದೆ.

ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಪ್ರಿ ಬುಕ್ಕಿಂಗ್‌ ಆರಂಭಿಕ ಅಂದಾಜುಗಳನ್ನು ಹಂಚಿಕೊಂಡಿದ್ದಾರೆ. ಟೈಗರ್ 3 ಅದ್ಭುತ ಪ್ರಾರಂಭ, PVRInox 7,500 ಟಿಕೆಟ್‌ಗಳು ಮಾರಾಟವಾಗಿದೆ, ಡಿಲೈಟ್‌ ದೆಹಲಿ 2,800 ಟಿಕೆಟ್‌ಗಳು, ಹೈದರಾಬಾದ್ 1,470, PVRInox 20,000, ಸಿನಿಪೋಲಿಸ್‌ 3,800 ಒಟ್ಟು: 23,800 ಟಿಕೆಟ್‌ಗಳು ಭಾನುವಾರ ಬೆಳಗ್ಗೆ ಸೋಲ್ಡ್‌ ಔಟ್‌ ಆಗಿವೆ. ಟೈಗರ್ 3 ಸಿನಿಮಾ ಶೋಗಳು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತವೆ. ಆದಾಗ್ಯೂ, ಬುಕ್‌ಮೈಶೋ ಪ್ರಕಾರ, ಮುಂಬೈನಂತಹ ನಗರಗಳಲ್ಲಿ ಮೊದಲ ಪ್ರದರ್ಶನವನ್ನು ಬೆಳಗ್ಗೆ 6:05 ಕ್ಕೆ ನೋಡಬಹುದು.

ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಒಳಗೊಂಡ ‘ಟೈಗರ್ 3’ ಟ್ರೈಲರ್‌ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾದ ನಂತರ, ಅಭಿಮಾನಿಗಳು ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಕಾಯುತ್ತಿದ್ದರು. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರ ದೀಪಾವಳಿಯ ನವೆಂಬರ್ 12ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Tiger 3: ʻಟೈಗರ್‌ʼ ಟವೆಲ್‌ ಸೀನ್‌ ಸಖತ್‌ ಚಾಲೆಂಜಿಂಗ್ ಆಗಿತ್ತು ಎಂದ ಹಾಲಿವುಡ್‌ ನಟಿ!

3 ನಿಮಿಷದ ಟ್ರೈಲರ್‌ನಲ್ಲಿ ಆ್ಯಕ್ಷನ್ ಪ್ಯಾಕ್ಡ್‌ ಸೀಕ್ವೆನ್ಸ್ ಹೊಂದಿದೆ. ಟ್ರೈಲರ್‌ನಲ್ಲಿ ಸಲ್ಮಾನ್ ದೇಶವನ್ನು ಉಳಿಸುವತ್ತ ಹೋರಾಟ ಮತ್ತು ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಕತ್ರಿನಾ ಕೈಫ್ ಬಗ್ಗೆ ಇರುವಂತಿದೆ. ಸಲ್ಮಾನ್‌ ಖಾನ್‌ (Salman Khan ) ಅವರು ಯಶ್‌ರಾಜ್‌ಫಿಲ್ಮ್ಸ್‌ ಸ್ಪೈ ಯುನಿವರ್ಸ್‌ನಲ್ಲಿ ಏಜೆಂಟ್‌ ಟೈಗರ್‌ ಆಗಿ ಮರಳಿದ್ದಾರೆ. ಅಮೆಜಾನ್ ಪ್ರೈಮ್ ಟೈಗರ್ 3 ಒಟಿಟಿ ಹಕ್ಕುಗಳನ್ನು ಬರೋಬ್ಬರಿ 200 ಕೋಟಿ ರೂ.ಗೆ ಪಡೆದುಕೊಂಡಿದೆ. ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ದೀಪಾವಳಿ ಸಮಯದಲ್ಲಿ ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಿದ್ದಾರೆ. ವರದಿಯ ಪ್ರಕಾರ, ಅಮೆಜಾನ್ ಪ್ರೈಮ್ ವಿಡಿಯೊ ಟೈಗರ್ 3 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಶಾರುಖ್ ಖಾನ್ ಅವರ ಜವಾನ್ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸ್ವಾಧೀನಪಡಿಸಿಕೊಂಡಂತೆಯೇ ಇದೂ ಒಪ್ಪಂದವನ್ನು ಮಾಡಿದೆ. ಟೈಗರ್ 3 ಚಿತ್ರದ OTT ಹಕ್ಕನ್ನು 200 ಕೋಟಿ ರೂ. ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಮತ್ತು ಒಟಿಟಿ ಹಕ್ಕುಗಳ ಕುರಿತ ಹೆಚ್ಚಿನ ವಿವರಗಳನ್ನು ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಟೈಗರ್‌ 3 ಸಿನಿಮಾವು ನವೆಂಬರ್‌ 10ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗೆಡೆಯಾಗುತ್ತಿಲ್ಲ. ಈ ಸಿನಿಮಾದಲ್ಲಿ ಪಠಾಣ್‌ ಸಿನಿಮಾದ ಮುಂದುವರಿದ ಭಾಗವಾಗಿ ಶಾರೂಖ್‌ ಖಾನ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಇಮ್ರಾನ್‌ ಹಶ್ಮಿ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

Exit mobile version