Site icon Vistara News

Tiger 3 teaser: ಸಲ್ಮಾನ್‌ ಖಾನ್‌ಗೆ ಭಾರತದಿಂದ ‘ಕ್ಯಾರೆಕ್ಟರ್ ಸರ್ಟಿಫಿಕೇಟ್ʼ ಬೇಕಂತೆ; ಟೈಗರ್‌ 3 ಟೀಸರ್‌ ಔಟ್‌!

Tiger 3 teaser Salman Khan

ಬೆಂಗಳೂರು: ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಬಳಿಕ, ʻಟೈಗರ್‌ 3ʼ (Tiger 3 teaser) ಮೂಲಕ ಸಲ್ಮಾನ್ ಖಾನ್ ರಗಡ್‌ ಲುಕ್‌ನೊಂದಿಗೆ ಬಂದಿದ್ದಾರೆ. ʻಟೈಗರ್‌ ಕಾ ಮೆಸೆಜ್‌ʼ ಎಂಬ ವಿಡಿಯೊ ಮೂಲಕ ಮತ್ತೆ ಸಲ್ಮಾನ್‌ ಅಬ್ಬರಿಸಿದ್ದಾರೆ. ಸಲ್ಮಾನ್‌ ಖಾನ್‌ (Salman Khan ) ಅವರು ಯಶ್‌ರಾಜ್‌ಫಿಲ್ಮ್ಸ್‌ ಸ್ಪೈ ಯುನಿವರ್ಸ್‌ನಲ್ಲಿ ಏಜೆಂಟ್‌ ಟೈಗರ್‌ ಆಗಿ ಮರಳಿದ್ದಾರೆ. ಸೆ. 27ರಂದು ಟೈಗರ್‌ 3 ಸಿನಿಮಾದ ಹೊಸ ಟೀಸರ್‌ ʻಟೈಗರ್‌ ಕಾ ಮೆಸೆಜ್‌ʼ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.ʻʻನಾನು ಭಾರತದಿಂದ ಕ್ಯಾರೆಕ್ಟರ್​ ಸರ್ಟಿಫಿಕೇಟ್​ ಕೇಳುತ್ತಿದ್ದೇನೆʼʼಎಂಬುವ ಡೈಲಾಗ್‌ ಇದೀಗ ವೈರಲ್‌ ಆಗುತ್ತಿದೆ.

ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ದೀಪಾವಳಿಯಂದು ಬಿಡುಗಡೆಯಾಗಲಿದೆ. ‘ಟೈಗರ್ 3’ ಟೀಸರ್‌ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಭಿಮಾನಿಗಳು ವಿಮರ್ಶಿಸಿ ಹಾಡಿ ಹೊಗಳಿದ್ದಾರೆ. ಟೈಗರ್‌ 3 ಬಳಿಕ ಹಲವು ಪತ್ತೆದಾರಿ ಸಿರೀಸ್‌ ಚಿತ್ರಗಳನ್ನು ವೈಆರ್‌ಎಫ್‌ ಬಿಡುಗಡೆ ಮಾಡಲಿದೆ. “ಎಲ್ಲಿಯವರೆಗೆ ಟೈಗರ್‌ ಸಾಯುವುದಿಲ್ಲವೋ, ಅಲ್ಲಿಯವರೆಗೆ ಅವನು ಕಾಣೆಯಾಗುವುದಿಲ್ಲ” ಎಂಬ ಡೈಲಾಗ್‌ ಸಖತ್‌ ಮಜವಾಗಿದೆ.

ಒಂದು ನಿಮಿಷದ 43 ಸೆಕೆಂಡುಗಳ ಅವಧಿಯ ಟೀಸರ್ ಇದಾಗಿದೆ. “ಭಾರತಕ್ಕೆ 20 ವರ್ಷಗಳ ಸೇವೆಯ ನಂತರ, ನಾನು ಪ್ರತಿಯಾಗಿ ಏನನ್ನೂ ಕೇಳಲಿಲ್ಲ. ಆದರೆ ಇಂದು ನನಗೆ ಬೇಡಿಕೆಯಿದೆ. ಟೈಗರ್​ ನಿಮ್ಮ ಶತ್ರು ಎಂದು ಹೇಳಲಾಗುತ್ತಿದೆ. ಟೈಗರ್​ ಒಬ್ಬ ದ್ರೋಹಿ ಎಂದು ಹೇಳಲಾಗುತ್ತಿದೆ. 20 ವರ್ಷಗಳ ಸೇವೆಯ ನಂತರವೂ ನಾನು ಭಾರತದಿಂದ ಕ್ಯಾರೆಕ್ಟರ್​ ಸರ್ಟಿಫಿಕೇಟ್​ ಕೇಳುತ್ತಿದ್ದೇನೆʼʼಎಂಬುವ ಸಲ್ಮಾನ್‌ ಡೈಲಾಗ್‌ ಹೈಲೈಟ್‌ ಆಗಿದೆ.

ಇದನ್ನೂ ಓದಿ: Tiger 3 teaser: ಸೆಪ್ಟೆಂಬರ್ 27ಕ್ಕೆ ಸಲ್ಮಾನ್ ಖಾನ್‌ರಿಂದ ಹೊಸ ಸಂದೇಶ! ಏನದು?

ಈ ವರ್ಷ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೀಗ ಚಿತ್ರವು ಈ ದೀಪಾವಳಿಗೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ʻಈಗಾಗಲೇ ಯಶ್‌ ರಾಜ್‌ ಫಿಲ್ಮ್ಸ್‌ 2012 ರಲ್ಲಿ ಏಕ್ ಥಾ ಟೈಗರ್ ನಂತರ ಟೈಗರ್ ಜಿಂದಾ ಹೈ (2017), ವಾರ್ (2019), ಮತ್ತು ಪಠಾಣ್‌ (2023) ಸಿನಿಮಾವನ್ನು ನೀಡಿತ್ತು. ಎಲ್ಲವೂ ಹಿಟ್‌ ಚಿತ್ರಗಳೇ ಆಗಿದೆ. ಟೈಗರ್ 3 ನವೆಂಬರ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದರು.

ಟೈಗರ್‌ 3 ಸಿನಿಮಾವು ನವೆಂಬರ್‌ 10ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗೆಡೆಯಾಗುತ್ತಿಲ್ಲ. ಈ ಸಿನಿಮಾದಲ್ಲಿ ಪಠಾಣ್‌ ಸಿನಿಮಾದ ಮುಂದುವರಿದ ಭಾಗವಾಗಿ ಶಾರೂಖ್‌ ಖಾನ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಇಮ್ರಾನ್‌ ಹಶ್ಮಿ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version