Site icon Vistara News

Tiger 3 teaser: ಸೆಪ್ಟೆಂಬರ್ 27ಕ್ಕೆ ಸಲ್ಮಾನ್ ಖಾನ್‌ರಿಂದ ಹೊಸ ಸಂದೇಶ! ಏನದು?

Tiger 3 teaser

ಬೆಂಗಳೂರು: ಸಲ್ಮಾನ್ ಖಾನ್‌ ( Salman Khan), ಕತ್ರಿನಾ ಕೈಫ್ (Katrina Kaif) ಮತ್ತು ಇಮ್ರಾನ್ ಹಶ್ಮಿ ( Emraan Hashmi) ಅಭಿನಯದ ʻಟೈಗರ್ 3ʼ ಸಿನಿಮಾ (Tiger 3 teaser) ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಅದಕ್ಕೂ ಮೊದಲು, ಸಲ್ಮಾನ್ (ಸೆ.27)ರಂದು ಅಭಿಮಾನಿಗಳಿಗೆ ಹೊಸ ಅಪ್‌ಟೇಟ್‌ ಹಂಚಿಕೊಳ್ಳಲಿದ್ದಾರೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಈ ಹಿಂದೆಯೇ “ಮೆಗಾಸ್ಟಾರ್ ಸಲ್ಮಾನ್ ಖಾನ್ ಅವರ ಟೈಗರ್ 3 ಟೀಸರ್ ಸೆಪ್ಟೆಂಬರ್ 27ಕ್ಕೆʼʼಎಂದು ಟ್ವೀಟ್‌ ಮಾಡಿದ್ದರು. ಇದೀಗ ಟ್ವಿಟರ್‌ನಲ್ಲಿ ಟೈಗರ್‌ 3 ಟ್ರೆಂಡಿಂಗ್‌ನಲ್ಲಿದೆ. ʻಟೈಗರ್‌ ಕಾ ಮೆಸೆಜ್‌ʼ ಎಂಬ ವಿಡಿಯೊ ಇದೇ ಸೆಪ್ಟೆಂಬರ್‌ 27ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಯಶ್‌ ಚೋಪ್ರಾ ಅವರ ಜನ್ಮದಿನದಂದು ಈ ವಿಡಿಯೊ ಬಿಡುಗಡೆಯಾಗಲಿದೆ. ಸೆಪ್ಟೆಂಬರ್‌ 27ರಿಂದ ಟೈಗರ್‌ 3 ಪ್ರಚಾರವೂ ಆರಂಭವಾಗಲಿದೆ ಎಂದು ವರದಿಯಾಗಿದೆ. ಈ ವರ್ಷ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೀಗ ಚಿತ್ರವು ಈ ದೀಪಾವಳಿಗೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ʻಟೈಗರ್‌ ಕಾ ಮೆಸೆಜ್‌ʼ ವಿಡಿಯೊ ಬಗ್ಗೆ ಮಾದ್ಯಮವೊಂದು ʻʻಈ ವಿಡಿಯೊ ಟೈಗರ್ 3ಯ ಟ್ರೈಲರ್‌ಗೆ ಮುನ್ನುಡಿಯಾಗಿದೆ. ಈ ವಿಡಿಯೋದಲ್ಲಿ ಸಲ್ಮಾನ್‌ ಖಾನ್‌ ಅವರು ಏಜೆಂಟ್‌ ಟೈಗರ್‌ ಆಗಿ ಪ್ರಮುಖ ಸಂದೇಶ ನೀಡಲಿದ್ದಾರೆ. ವೈಆರ್‌ಎಫ್‌ (ಯಶ್‌ ರಾಜ್‌ ಫಿಲ್ಮ್‌)ನ ಮುಂದಿನ ಹೆಜ್ಜೆಗಳ ಕುರಿತೂ ಈ ವಿಡಿಯೊ ಮಾಹಿತಿ ನೀಡುವ ಸಾಧ್ಯತೆಯಿದೆ. ಇದು ವೈಆರ್‌ಎಫ್‌ನ ((ಯಶ್‌ ರಾಜ್‌ ಫಿಲ್ಮ್‌) ಐದನೇ ಚಿತ್ರವಾಗಿದೆ. ಈ ಸಿನಿಮಾವು ಪ್ರೇಕ್ಷಕರಿಗೆ ಹಿಂದೆಂದೂ ನೋಡದ ಆಕ್ಷನ್‌ ದೃಶ್ಯಗಳನ್ನು ನೀಡಲಿದೆ” ಎಂದು ವರದಿಗಳು ತಿಳಿಸಿವೆ.

ಈಗಾಗಲೇ ಯಶ್‌ ರಾಜ್‌ ಫಿಲ್ಮ್ಸ್‌ 2012 ರಲ್ಲಿ ಏಕ್ ಥಾ ಟೈಗರ್ ನಂತರ ಟೈಗರ್ ಜಿಂದಾ ಹೈ (2017), ವಾರ್ (2019), ಮತ್ತು ಪಠಾಣ್‌ (2023) ಸಿನಿಮಾವನ್ನು ನೀಡಿತ್ತು. ಎಲ್ಲವೂ ಹಿಟ್‌ ಚಿತ್ರಗಳೇ ಆಗಿದೆ. ಟೈಗರ್ 3 ನವೆಂಬರ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: Salman Khan : ತಲೆ ಬೋಳಿಸಿಕೊಂಡ ಸಲ್ಮಾನ್‌ ಖಾನ್‌; ಅಭಿಮಾನಿಗಳಲ್ಲಿ ಏನೇನೊ ಲೆಕ್ಕಾಚಾರ!

ಕತ್ರಿನಾ ಕೂಡ ವಿಜಯ್ ಸೇತುಪತಿ ಜತೆ `ಮೆರ್ರಿ ಕ್ರಿಸ್‌ಮಸ್’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಚಿತ್ರವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದಾರೆ. 2021ರಲ್ಲಿ ನಟ ವಿಕ್ಕಿ ಕೌಶಲ್ ಅವರನ್ನು ಮದುವೆಯಾದ ಕೆಲವೇ ದಿನಗಳಲ್ಲಿ ಕತ್ರಿನಾ ಕೈಫ್ ಈ ಚಿತ್ರವನ್ನು ಘೋಷಿಸಿದ್ದರು.

Exit mobile version