ಬೆಂಗಳೂರು: ಟೈಗರ್ 3 ವಿಶ್ವಾದ್ಯಂತ (Tiger 3 box office collection) ಹೊಸ ದಾಖಲೆಯನ್ನು ಮಾಡಿದೆ. ನವೆಂಬರ್ 22ರಂದು ಯಶ್ ರಾಜ್ ಫಿಲ್ಮ್ಸ್ (YRF) ಹೊಸ ಪೋಸ್ಟ್ ಹಂಚಿಕೊಂಡಿದ್ದು, ಚಿತ್ರವು ಜಾಗತಿಕವಾಗಿ 400 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದೆ. ಟೈಗರ್ 3 ವಿಶ್ವಾದ್ಯಂತ 400 ಕೋಟಿ ರೂ. ಗಳಿಸುತ್ತಿದ್ದಂತೆ ಕತ್ರಿನಾ ಕೈಫ್ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. “ಟೈಗರ್ ಫ್ರಾಂಚೈಸ್ ನನಗೆ 2012ರಿಂದ ಪ್ರೀತಿಯನ್ನು ನೀಡಿದೆ! ಹಾಗಾಗಿ ಇದು ಒಂದು ಅದ್ಭುತ ಭಾವನೆಯಾಗಿದೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಮತ್ತು ಈಗ ಟೈಗರ್ 3” ಎಂದರು ಕತ್ರಿನಾ.
ಕತ್ರಿನಾ ಅವರು, “ನಮಗೆ ಪಾತ್ರಗಳನ್ನು ಮರುಪರಿಶೀಲಿಸುವ ಅವಕಾಶವನ್ನು ಫ್ರಾಂಚೈಸ್ ನೀಡಿದೆ. ನನ್ನ ವೃತ್ತಿಜೀವನದಲ್ಲಿ ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಟೈಗರ್ ಚಿತ್ರದಲ್ಲಿ ಕೆಲವು ದೃಶ್ಯಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸವಾಲಾಗಿತ್ತು. ಈ ಯಶಸ್ಸನ್ನು ಆಚರಿಸಲಿಕ್ಕೆ ಕಾರಣ ಪ್ರೇಕ್ಷಕರು. ಟೈಗರ್ ಫ್ರಾಂಚೈಸ್ ನನಗೆ ನೀಡಿದ ಸಂತೋಷ, ಗೌರವ ಮತ್ತು ಮೆಚ್ಚುಗೆಗೆ ಯಾವಾಗಲೂ ನಾನು ಆಭಾರಿʼʼಎಂದು ಹೇಳಿಕೊಂಡಿದ್ದಾರೆ.
ತಮ್ಮ ಯಶ್ ರಾಜ್ ಫಿಲಂಸ್ ಮೂಲಕ ಆದಿತ್ಯ ಚೋಪ್ರಾ ನಿರ್ಮಿಸಿರುವ ಈ ಚಿತ್ರದ ಬಜೆಟ್ ಬರೋಬ್ಬರಿ 300 ಕೋಟಿ ರೂ. ಯಶ್ ರಾಜ್ ಫಿಲಂಸ್‌ನ ಅತಿ ದುಬಾರಿ ಚಿತ್ರ ಇದು ಎನ್ನುವುದು ಕೂಡ ವಿಶೇಷ. ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಯಶ್ ರಾಜ್ ಫಿಲಂಸ್‌ನ 5ನೇ ಸ್ಪೈ ಸೀರಿಸ್‌ನ ಚಿತ್ರ ಇದಾಗಿದೆ. ಈ ಹಿಂದೆ ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ವಾರ್’, ‘ಪಠಾಣ್’ ಚಿತ್ರಗಳನ್ನು ವೈಆರ್‌ಎಫ್ ಸ್ಪೈ ಯೂನಿವರ್ಸ್‌ನಲ್ಲಿ ನಿರ್ಮಿಸಲಾಗಿತ್ತು. ಅಲ್ಲದೆ ಟೈಗರ್ ಸೀರಿಸ್‌ನ ಮೂರು ಚಿತ್ರಗಳಲ್ಲಿಯೂ ಸಲ್ಮಾನ್ ಖಾನ್-ಕತ್ರಿನಾ ಕೈಫ್ ಜೋಡಿ ಮೋಡಿ ಮಾಡಿದೆ. ಜತೆಗೆ ʼಟೈಗರ್ 3’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜತೆ ಕತ್ರಿನಾ ಕೈಫ್ ಕೂಡ ಆ್ಯಕ್ಷನ್ ಮೆರೆದಿದ್ದಾರೆ. ವರದಿಯ ಪ್ರಕಾರ ಅಮೆಜಾನ್ ಪ್ರೈಮ್ ವಿಡಿಯೊ ʼಟೈಗರ್ 3ʼ ಡಿಜಿಟಲ್ ಹಕ್ಕುಗಳನ್ನು ದಾಖಲೆಯ ಮೊತ್ತಕ್ಕೆ ಪಡೆದುಕೊಂಡಿದೆಯಂತೆ. ಬರೋಬ್ಬರಿ 200 ಕೋಟಿ ರೂ.ಗೆ ಈ ಒಪ್ಪಂದ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: Tiger 3 box office collection: ಟೈಗರ್ 3 ಕಲೆಕ್ಷನ್‌ನಲ್ಲಿ ಭಾರಿ ಕುಸಿತ; 6 ಕೋಟಿ ರೂ. ಗಳಿಸುವ ಸಾಧ್ಯತೆ!
ಈ ವರ್ಷ ಬಾಲಿವುಡ್ ಚೇತರಿಕೆಯ ಹಾದಿಯಲ್ಲಿದೆ. ಈ ಹಿಂದೆ ತೆರೆಕಂಡ ಶಾರುಖ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ʼಪಠಾಣ್ʼ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂ. ಗಳಿಕೆ ಕಂಡಿತ್ತು. ಬಳಿಕ ಸನ್ನಿ ಡಿಯೋಲ್ ಅಭಿನಯ್ ʼಗದರ್ 2ʼ, ಶಾರುಖ್ ಖಾನ್-ನಯನತಾರಾ ನಟಿಸಿದ ʼಜವಾನ್ʼ ಕೂಡ ಸಾವಿರ ಕೋಟಿ ರೂ. ಮೀರಿದ ಕಲೆಕ್ಷನ್ ದಾಖಲಿಸಿದೆ.