Site icon Vistara News

RRR Movie | RRR ತಂಡವನ್ನು ಅಭಿನಂದಿಸಲು ಟೈಗರ್ ಶ್ರಾಫ್ ವಿಶೇಷ ವಿಡಿಯೊ: ಇದು ವಿಜಯದ ನೃತ್ಯ!

RRR Movie

ಬೆಂಗಳೂರು : ರಾಜಮೌಳಿ ನಿರ್ದೇಶನದ RRR ಸಿನಿಮಾ (RRR Movie ) ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯ ʼಅತ್ಯುತ್ತಮ ಒರಿಜಿನಲ್‌ ಹಾಡುʼ ವಿಭಾಗದಲ್ಲಿ ಪುರಸ್ಕಾರ ಪಡೆದಿದೆ. ಇದೀಗ ಬಾಲಿವುಡ್‌ ನಟ ಟೈಗರ್ ಶ್ರಾಫ್ ‘RRR’ ತಂಡವನ್ನು ಅಭಿನಂದಿಸಲು ವಿಶೇಷ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ‘ನಾಟು ನಾಟು’ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿರುವ ವಿಡಿಯೊವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ʻನಾಟು ನಾಟುʼ ಹಾಡಿಗೆ ಹೆಜ್ಜೆ ಹಾಕಿದ ಟೈಗರ್‌ ಶ್ರಾಫ್‌ ʻʻಭಾರತೀಯ ಚಿತ್ರರಂಗಕ್ಕೆ ದೊಡ್ಡ ಗೆಲುವು. ಆರ್‌ಆರ್‌ಆರ್‌ ಇಡೀ ತಂಡಕ್ಕೆ ಅಭಿನಂದನೆಗಳು. ಇದು ವಿಜಯದ ನೃತ್ಯವಾಗಬೇಕುʼʼ ಎಂದು ಪೋಸ್ಟ್‌ ಮಾಡಿದ್ದಾರೆ. 80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ‌ ಮಿಂಚಿದ RRR, ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿತ್ತು. ಅವು ʼಅತ್ಯುತ್ತಮ ಆಂಗ್ಲೇತರ ಚಿತ್ರʼ ಹಾಗೂ ʼಅತ್ಯುತ್ತಮ ಹಾಡುʼ ವಿಭಾಗಗಳು. ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ಆರ್‌ಆರ್‌ಆರ್‌ನ ʼನಾಟು ನಾಟುʼ ಗೆದ್ದುಕೊಂಡಿದೆ. ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ನಿರ್ದೇಶಕ ಎಸ್‌.ಎಸ್‌ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ಚರಣ್ ಜತೆ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಭಾಗಿಯಾಗಿದ್ದರು. ಕೀರವಾಣಿ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು.

ಇದನ್ನೂ ಓದಿ | RRR Movie | ನಾಟು ನಾಟು ಹಾಡು ಚಿತ್ರೀಕರಣ ಆಗಿದ್ದ ಆ ಜಾಗ ಈಗ ಯುದ್ಧದ ಸ್ಥಳ! ಯಾವುದು ಆ ಜಾಗ?

ಸಮಾರಂಭದಲ್ಲಿ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಭಾವನಾತ್ಮಕ ಮಾತುಗಳನ್ನಾಡಿ ʻʻನಾನು ಇದೀಗ ಪಡೆದ ಈ ಶ್ರೇಷ್ಠ ಪ್ರಶಸ್ತಿಯ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ. RRR ಇಬ್ಬರು ಸ್ನೇಹಿತರ ನಡುವಿನ ಬಾಂಧವ್ಯದ ಬಗ್ಗೆ ಹೇಳುತ್ತದೆ. ಇದು ದೇಶಭಕ್ತಿಯ ಬಗ್ಗೆ, ಭಾವನೆಗಳು, ಸಾಹಸ ದೃಶ್ಯಗಳು ಮತ್ತು ಸಂಗೀತದಿಂದ ತುಂಬಿರುತ್ತದೆ. ಮೊದಲ ಬಾರಿಗೆ, ಇದು ಅಂತಾರಾಷ್ಟ್ರೀಯ ಪ್ರೇಕ್ಷಕರ ಗಮನ ಮತ್ತು ಚಪ್ಪಾಳೆಗಳನ್ನು ಗಳಿಸಿದೆ. ಅದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ನನ್ನ ಸಹೋದರ ಎಸ್‌ಎಸ್ ರಾಜಮೌಳಿ ಅವರ ಜತೆ ಒಡನಾಟವಿರುವುದು ಖುಷಿ ತಂದಿದೆ. ವಿಶ್ವಾದ್ಯಂತ ಅಂತಹ ಉತ್ತಮ ಅವಕಾಶಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ.” ಎಂದಿದ್ದಾರೆ.

ಇದನ್ನೂ ಓದಿ | RRR Movie | ರೆಡ್ ಕಾರ್ಪೆಟ್‌ನಲ್ಲಿ ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಮಿಂಚಿದ ಆರ್‌ಆರ್‌ಆರ್‌ ಚಿತ್ರತಂಡ

Exit mobile version