Site icon Vistara News

Tiger Shroff: ʻಸಿಂಗಂ ಅಗೇನ್ʼನಲ್ಲಿ ಟೈಗರ್ ಶ್ರಾಫ್‌; ಶರ್ಟ್‌ಲೆಸ್‌ ಫೋಟೊಗೆ ಫುಲ್‌ ಮಾರ್ಕ್ಸ್‌!

Tiger Shroff joins Rohit Shetty's cop

ಬೆಂಗಳೂರು: ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರ ಲುಕ್‌ ಪೋಸ್ಟರ್‌ ಔಟ್‌ ಆಗಿದೆ. ಇದೀಗ ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಮತ್ತೊಂದು ಬಿಗ್‌ ಅಪ್‌ಡೇಟ್‌ ಹಂಚಿಕೊಂಡಿದೆ. ಎಸಿಪಿ ಸತ್ಯ ಪಾತ್ರದಲ್ಲಿ ಟೈಗರ್ ಶ್ರಾಫ್ ಕಾಣಿಸಿಕೊಳ್ಳುತ್ತಿದ್ದಾರೆ. ಟೈಗರ್ ಶ್ರಾಫ್‌ (Tiger Shroff) ಎರಡು ವಿಭಿನ್ನ ಅವತಾರದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಟೈಗರ್ ಮೊದಲ ಚಿತ್ರದಲ್ಲಿ ಗನ್‌ ಹಿಡಿದು ಪೋಸ್ ನೀಡುತ್ತಿರುವುದು ಕಂಡುಬರುತ್ತದೆ. ಮತ್ತೊಂದರಲ್ಲಿ ಶರ್ಟ್‌ಲೆಸ್‌ ಆಗಿ ಸಿಕ್ಸ್‌ ಪ್ಯಾಕ್‌ ತೋರಿಸಿರುವ ರಗಡ್‌ ಲುಕ್‌ನಲ್ಲಿ ಕಂಡಿದ್ದಾರೆ.

ಪೋಸ್ಟರ್‌ಗಳನ್ನು ಹಂಚಿಕೊಂಡ ಟೈಗರ್, “ಎಸಿಪಿ ಸತ್ಯ ರಿಪೋರ್ಟಿಂಗ್ ಆನ್ ಡ್ಯೂಟಿ ಸಿಂಗಮ್ ಸರ್ #ಸಿಂಗಮ್ ಅಗೇನ್” ಎಂದು ಬರೆದಿದ್ದಾರೆ. ರಣವೀರ್ ಸಿಂಗ್ ಬರೆದಿದ್ದಾರೆ, ” ಸತ್ಯ. ಅವನು ಅಮರ. ವಿಶೇಷ ಕಾರ್ಯಪಡೆ ಅಧಿಕಾರಿ ಎಸಿಪಿ ಸತ್ಯ, ತಂಡಕ್ಕೆ ಸ್ವಾಗತʼʼ ಎಂದು ಬರೆದುಕೊಂಡಿದ್ದಾರೆ. ನನ್ನ ಸಹೋದರ ಟೈಗರ್‌ ಜಾಕಿ ಶ್ರಾಫ್ ಅವರನ್ನು ಎಸಿಪಿ ಸತ್ಯವಾಗಿ ತಂಡಕ್ಕೆ ಸ್ವಾಗತಿಸುತ್ತೇನೆ” ಎಂದು ಅಕ್ಷಯ್ ಕುಮಾರ್ ಕೂಡ ಕಮೆಂಟ್‌ ಮಾಡಿದ್ದಾರೆ.

ಟೈಗರ್‌ ಲುಕ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ಎಂತಹ ಸರ್ಪ್ರೈಸ್ . ಶೀಘ್ರದಲ್ಲೇ ಭೇಟಿಯಾಗಲು ಉತ್ಸುಕನಾಗಿದ್ದೇನೆ. ಈ ಹಿಂದೆ ವರದಿ ಪ್ರಕಾರ ಟೈಗರ್ ಸಿಂಗಮ್ ಅಗೇನ್ ನಲ್ಲಿ ವಿಶೇಷ ಅತಿಥಿ ಪಾತ್ರವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿತ್ತು. “ಸಿಂಗಮ್ ಅಗೇನ್‌ನಲ್ಲಿ ಟೈಗರ್ ಶ್ರಾಫ್‌ಗೆ ಇದು ಅತಿಥಿ ಪಾತ್ರವಾಗಿದೆ. ರೋಹಿತ್ ಅವರನ್ನು ಪೊಲೀಸ್‌ ಆಗಿ ಪರಿಚಯಿಸಲು ಯೋಜಿಸಿದ್ದಾರೆ. ಸಿಂಗಮ್, ಸಿಂಬಾ ಮತ್ತು ಸೂರ್ಯವಂಶಿಯಂತೆ ಟೈಗರ್ ಶ್ರಾಫ್ ಕೂಡ ತಮ್ಮದೇ ಆದ ವಿಶಿಷ್ಟ ಗುರುತನ್ನು ಹೊಂದಿರುತ್ತಾರೆʼʼಎನ್ನಲಾಗಿತ್ತು.

ಇದನ್ನೂ ಓದಿ: Deepika Padukone: ಕೈಯಲ್ಲಿ ರಿವಾಲ್ವರ್, ಸುತ್ತಲೂ ಹೆಣಗಳ ರಾಶಿ; ದೀಪಿಕಾ ಈಗ ʻಲೇಡಿ ಸಿಂಗಂʼ!

ಟೈಗರ್ ಚಿತ್ರದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಇದೀಗ ದೀಪಿಕಾ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಅನಾವರಣಗೊಳಿಸಿತ್ತು. ಶಕ್ತಿ ಶೆಟ್ಟಿ ಪಾತ್ರದ ಹೆಸರು. ʻಸಿಂಗಮ್ ಅಗೇನ್” ಎಂದು ಇನ್‌ಸ್ಟಾದಲ್ಲಿ ಬರೆದಿದ್ದಾರೆ.

ರಕ್ತಸಿಕ್ತವಾಗಿ ದೀಪಿಕಾ ಕಂಡಿದ್ದು, ವ್ಯಕ್ತಿಯ ಬಾಯಿಯೊಳಗೆ ರಿವಾಲ್ವರ್ ಹಾಕಿ ಖಡಕ್‌ ಲುಕ್‌ ಕೊಟ್ಟಿದ್ದಾರೆ ದೀಪಿಕಾ. ಹಿಂದೆ ಬೆಂಕಿ, ಸುತ್ತಲೂ ಹೆಣಗಳ ರಾಶಿ, ಕಾರು ಅವಶೇಷಗಳು ಕಾಣಿಸಿಕೊಂಡವು. ನಟ-ಪತಿ ರಣವೀರ್ ಸಿಂಗ್, ಕೂಡ ದೀಪಿಕಾ ಲುಕ್‌ಗೆ ಹೊಗಳಿದ್ದಾರೆ. ಈ ಹಿಂದೆ ವರದಿಯೊಂದು ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿತ್ತು.

Exit mobile version