ಬೆಂಗಳೂರು: ‘ಶೇರ್ ಖುಲ್ ಗಯೆ’ (Sher Khul Gaye) ಹಾಡು ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರ ‘ಫೈಟರ್’ (Fighter song) ಸಿನಿಮಾದಿಂದ ಬಿಡುಗಡೆಯಾದ ಮೊದಲ ಹಾಡು. ಡಿಸೆಂಬರ್ 15ರಂದು ಹಾಡು ಬಿಡುಗಡೆಯಾದಾಗಿನಿಂದ ಸಖತ್ ಟ್ರೆಂಡ್ ಆಗಿದೆ. ಅದೆಷ್ಟೋ ಜನ ರೀಲ್ಸ್ ಮಾಡಿ ಪೋಸ್ಟ್ ಕೂಡ ಮಾಡಿದ್ದಾರೆ. ಆದರೀಗ ನಟ ಟೈಗರ್ ಶ್ರಾಫ್ (Tiger Shroff) ‘ಶೇರ್ ಖುಲ್ ಗಯೆ’ ಡ್ಯಾನ್ಸ್‌ವನ್ನು ಮರುಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದಕ್ಕೆ ಹೃತಿಕ್ (Hrithik Roshan) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ 2024ರ ಜನವರಿ 26ರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲಿದೆ. ಫೈಟರ್ ಟೀಸರ್‌ನಲ್ಲಿ, ಜೆಟ್ ವಿಮಾನವೇರಿ ಸಾಹಸ ಪ್ರದರ್ಶಿಸಿದ್ದಾರೆ ಹೃತಿಕ್ ಮತ್ತು ದೀಪಿಕಾ. ಕೆಲವು ದಿನಗಳ ಹಿಂದೆ ಸಿನಿಮಾ ʻಶೇರ್ ಖುಲ್ ಗಯೇʼ ವಿಡಿಯೊ ಸಾಂಗ್ ಬಿಡುಗಡೆ ಮಾಡಿತ್ತು. ವಿವಾದದ ಜತೆ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಇದೇ ಹಾಡಿಗೆ ನಟ ಟೈಗರ್ ಶ್ರಾಫ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ . ಚಿತ್ರೀಕರಣದ ಸಣ್ಣ ಗ್ಯಾಪ್‌ನಲ್ಲಿ ನಟ ನಟ ಟೈಗರ್ ಶ್ರಾಫ್ ಡ್ಯಾನ್ಸ್ ಮಾಡಿದ್ದಾರೆ.
ನಟ ಟೈಗರ್ ಶ್ರಾಫ್ ಅವರ ಡ್ಯಾನ್ಸ್ ವಿಡಿಯೊವನ್ನು ಹೃತಿಕ್ ಕೂಡ ಇನ್ಸ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿ ʻಲವ್ ಇಟ್, ಲವ್ ಯು ಮ್ಯಾನ್! ಫ್ರೇಮ್‌ನಲ್ಲಿರುವ ಪ್ರತಿಯೊಬ್ಬರೂ ಫ್ಯಾಬ್ʼʼಎಂದು ಹೊಗಳಿದ್ದಾರೆ.
ʻಶೇರ್ ಖುಲ್ ಗಯೇʼ ಕದ್ದ ಟ್ಯೂನ್?
ಹಾಡು ಬಿಡುಗಡೆಯಾದಾಗಿನಿಂದ ಬೀ ಗೀಸ್‌ನ (Bee Gees) ‘ಸ್ಟೇಯಿನ್’ ಅಲೈವ್ (Stayin’ Alive) ಹಾಡು ಕೂಡ ಟ್ರೆಂಡ್ ಆಗಿತ್ತು. ಶೇರ್ ಖುಲ್ ಗಯೇ’ ‘ಸ್ಟೇಯಿನ್’ ಅಲೈವ್’ ನಿಂದ ಸ್ಫೂರ್ತಿ ಪಡೆದಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ‘ಸ್ಟೇಯಿನ್’ ಅಲೈವ್’ ಎಂಬುದು ಡಿಸ್ಕೋ-ಪ್ರೇರಿತ ಹಾಡಾಗಿದೆ. ʻಶೇರ್ ಖುಲ್ ಗಯೆ’ ಅಲ್ಲಿ ಡ್ರಮ್ಸ್ ಮತ್ತು ಎಲೆಕ್ಟ್ರಿಕ್ ಗಿಟಾರ್ ಹೈಲೈಟ್ ಆಗಿವೆ. ಆದರೂ ‘ಸ್ಟೇಯಿನ್’ ಅಲೈವ್‌ನ ಕೋರಸ್ ಮತ್ತು ‘ಶೇರ್ ಖುಲ್ ಗಯೆ’ ಪ್ರಾರಂಭದಲ್ಲಿ ಸೇಮ್ ಆಗಿರುವುದರಿಂದ ʻಫೈಟರ್ʼ ಸಿನಿಮಾ ಚಿತ್ರತಂಡ ಹಾಡನ್ನು ಕದ್ದಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದರು.
70ರ ದಶಕದ ಈ ಹಾಡು, ಬಾಲಿವುಡ್ ಮೇಲೆ ಪ್ರಭಾವ ಬೀರುತ್ತಿವೆ. ಅನೇಕ ಹಾಡುಗಳು ಫಂಕ್, ಡಿಸ್ಕೋ ಮತ್ತು ಪಾಪ್ ಅಂಶಗಳನ್ನು ಬಾಲಿವುಡ್ ಹಾಡುಗಳು ಒಳಗೊಂಡಿರುತ್ತವೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು.
ಇದನ್ನೂ ಓದಿ: Tiger Shroff: ʻಸಿಂಗಂ ಅಗೇನ್ʼನಲ್ಲಿ ಟೈಗರ್ ಶ್ರಾಫ್; ಶರ್ಟ್‌ಲೆಸ್ ಫೋಟೊಗೆ ಫುಲ್ ಮಾರ್ಕ್ಸ್!
ವರದಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ 3D ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಪಠಾಣ್ ಮೂಲಕ 1000 ಕೋಟಿಯ ಹಿಟ್ ಸಿನಿಮಾ ನೀಡಿರುವ ಸಿದ್ಧಾರ್ಥ್ ಆನಂದ್, ಫೈಟರ್ ಮೂಲಕ ಮತ್ತೊಂದು ಹಿಟ್ ಸಿನಿಮಾ ನೀಡಲಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಒಂದು ನಿಮಿಷ 10 ಸೆಕೆಂಡ್‌ನ ಟೀಸರ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಕೂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾಗೆ ಹೃತಿಕ್ ರೋಷನ್ 85 ಕೋಟಿ ರೂ. ಸಂಭಾವನೆ ಪಡೆದರೆ, ದೀಪಿಕಾ ಚಿತ್ರಕ್ಕೆ 20 ಕೋಟಿ ರೂ. ಪಡೆಯುತ್ತಿದ್ದಾರೆ ಎಂದೂ ವರದಿಯಾಗಿದೆ. ಸಿದ್ಧಾರ್ಥ್ ಆನಂದ್ ಅವರು ದೀಪಿಕಾಗಿಂತ ಹೆಚ್ಚು, ಅಂದರೆ 40 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ. ದೀಪಿಕಾಗಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಹೃತಿಕ್ ರೋಷನ್ ಜತೆ ಸಿದ್ಧಾರ್ಥ್ ಆನಂದ್ ಅವರು ಈ ಹಿಂದೆ ‘ವಾರ್’ ಮತ್ತು ‘ಬ್ಯಾಂಗ್ ಬ್ಯಾಂಗ್’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡವು. ಈಗ ಮತ್ತೆ ಅವರು ‘ಫೈಟರ್’ ಚಿತ್ರದಲ್ಲಿ ಹೃತಿಕ್ ರೋಷನ್ ಜತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.