ಬೆಂಗಳೂರು : ಕಾಂತಾರ ಚಿತ್ರದ ನಟ ಕಿಶೋರ್ (Actor Kishore) ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿ ಆಡುತ್ತಿರುವ ಮಾತುಗಳು ಭಾರತೀಯ ಸಿನಿಮಾ ರಂಗದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕುತ್ತಿವೆ. ಇದೀಗ ಬಾಲಿವುಡ್ ಬಾಯ್ಕಾಟ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
”ಇಡೀ ದೇಶದ ಚಿತ್ರರಂಗ ಒಕ್ಕೊರಲಿನಿಂದ ಬಾಲಿವುಡ್‌ನ ವಿರುದ್ಧ ನಡೆಯುತ್ತಿರುವ ಬಾಯ್ಕಾಟ್ ಟ್ರೆಂಡನ್ನು , ಮತಾಂಧ ಗೂಂಡಾಗಿರಿಯನ್ನು, ದ್ವೇಷದ ರಾಜಕೀಯವನ್ನು ಖಂಡಿಸಿ ಬಾಲಿವುಡ್ ಪರವಾಗಿ ನಿಲ್ಲುವ ಕಾಲ ಬಂದಿದೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಒಂದು ವ್ಯಾಪಾರ ಅಥವಾ ಉದ್ಯಮದ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಾಗದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ. ಇಷ್ಟಾದರೂ ಚಿತ್ರರಂಗದವರು ಮಾತನಾಡದೇ ಕೂತಿರುವ ಹೆದರಿಕೆಯ ವಾತಾವರಣ ಸೃಷ್ಟಿಯಾಗಿರುವುದು, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಸರ್ಕಾರಿ ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ. ಇದು ಸಮಾಜವನ್ನು ವಿಷಪೂರಿತಗೊಳಿಸುವ ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದ್ದು, ಇದನ್ನು ತಡೆಯಬೇಕಿದೆ, ಶಿಕ್ಷಿಸಬೇಕಾಗಿದೆ. ದ್ವೇಷದ ಈ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ವ್ಯಾಪಿಸುವ ಮುನ್ನʼʼ ಎಂದು ಕಿಶೋರ್ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Actor Kishore | ʻಮೈಂಡ್‌ಲೆಸ್ʼ ನನ್ನ ಪದವಲ್ಲ, ರೈತರ ವಿಚಾರ ಚರ್ಚೆಯಾಗಿದ್ದರೆ ಖುಷಿ ಆಗುತ್ತಿತ್ತು: ನಟ ಕಿಶೋರ್
ನಟ ಸುನೀಲ್ ಶೆಟ್ಟಿ ಬಾಲಿವುಡ್‌ನಲ್ಲಿ ಬಾಯ್ಕಾಟ್ ಎಂಬ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ನ ಆಪತ್ತನ್ನು ತೆಗೆದುಹಾಕುವುದು ಮುಖ್ಯವಾಗಿದೆ ಎಂದು ಈ ಹಿಂದೆ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಚರ್ಚಿಸಿದ್ದರು. ಸುನೀಲ್ ಶೆಟ್ಟಿ ಮಾತನಾಡಿ ʻʻಬಾಲಿವುಡ್‌ನ 99%ರಷ್ಟು ಜನರು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಮತ್ತು ಜನರನ್ನು ತಲುಪಲು ಕಠಿಣ ಪರಿಶ್ರಮದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಬಾಲಿವುಡ್ ಬಾಯ್ಕಾಟ್ ಎಂಬ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್ ಅನ್ನು ತೆಗೆದುಹಾಕಬೇಕಾಗಿದೆ. ಕೆಲವೇ ಕೆಲವರ ಬುಟ್ಟಿಯಲ್ಲಿ ಕೊಳೆತ ಸೇಬು ಇರಬಹುದು. ಆದರೆ ನಾವೆಲ್ಲರೂ ಹಾಗಲ್ಲ. ಇಂತಹ ಕಳಂಕವನ್ನು ತೆಗೆದುಹಾಕಬೇಕಾಗಿದೆ. ದಯವಿಟ್ಟು ಈ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರೂ ತಿಳಿಸಿ” ಎಂದು ಮನವಿ ಮಾಡಿದ್ದರು. ಇದೆಲ್ಲವನ್ನೂ ಕಂಡಿರುವ ಕಿಶೋರ್, ಇನ್‌ಸ್ಟಾದಲ್ಲಿ ಸುದೀರ್ಘವಾಗಿ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.
ಕೆಜಿಎಫ್ 2 ನೋಡಲ್ಲ ಎನ್ನುವವರಿಗೆ ಬಾಲಿವುಡ್ ಮೇಲೆ ಅದೇಕೆ ಅಷ್ಟೊಂದು ಪ್ರೀತಿ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕಿಶೋರ್ ಒಳ್ಳೆಯ ಪ್ರಶ್ನೆಯನ್ನೂ ಎತ್ತಿದ್ದಾರೆ ಎಂದು ಹೊಗಳಿದವರು ಇದ್ದಾರೆ.
ಇದನ್ನೂ ಓದಿ | Actor Kishore | ಕೆಜಿಎಫ್-2 ನೋಡಿಲ್ಲ, ಇದು ನನ್ನ ಪ್ರಕಾರದ ಸಿನಿಮಾ ಅಲ್ಲ ಎಂದ ಕಾಂತಾರ ನಟ ಕಿಶೋರ್!