Site icon Vistara News

To Kill a Tiger: ಆಸ್ಕರ್ ಪ್ರಶಸ್ತಿಗೆ ಭಾರತದ ‘ಟು ಕಿಲ್ ಎ ಟೈಗರ್’ ಸಾಕ್ಷ್ಯಚಿತ್ರ ನಾಮನಿರ್ದೇಶನ!

To Kill a Tiger nominated for Oscars 2024

ನವದೆಹಲಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ(Oscar Nominations 2024). ಭಾರತ ಮೂಲದ ಕೆನಡಾದಲ್ಲಿ ನೆಲೆಸಿರುವ ನಿಶಾ ಪಹುಜಾ (Nisha Pahuja) ಅವರ ‘ಟು ಕಿಲ್ ಎ ಟೈಗರ್’ (To Kill A Tiger) ಸಾಕ್ಷ್ಯಚಿತ್ರವು ನಾಮನಿರ್ದೇಶನಗೊಂಡಿದೆ. ಇದು ಈ ಹಿಂದೆ ಟೊರೆಂಟೊ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ನಿಶಾ ಪಹುಜಾ ಅವರು ಬರೆದು ನಿರ್ದೇಶಿಸಿರುವ ಈ ಸಾಕ್ಷ್ಯಚಿತ್ರ ಭಾರತದಲ್ಲಿ ನಿರ್ಮಿಸಲಾಗಿದೆ.

ನಿಶಾ ಪಹುಜಾ ಯಾರು?

1970ರ ದಶಕದಲ್ಲಿ ನಿಶಾ ಪಹುಜಾ ಕುಟುಂಬದೊಂದಿಗೆ ಕೆನಡಾದಲ್ಲಿ ನೆಲಿಸಿದ್ದರು. ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನವನ್ನು ಪೂರ್ಣಗೊಳಿಸಿದರು. ಬಳಿಕ ಸಿಬಿಸಿ ಸಾಕ್ಷ್ಯಚಿತ್ರ ಸಮ್ ಕೈಂಡ್ ಆಫ್ ಅರೇಂಜ್‌ಮೆಂಟ್‌ನಲ್ಲಿ (CBC documentary Some Kind of Arrangement) ಸಂಶೋಧಕರಾಗಿ ಕೆಲಸ ಮಾಡಿದರು.

ಭಾರತದ ಸಾಕ್ಷ್ಯಚಿತ್ರ

ಕಾರ್ನಿಲಿಯಾ ಪ್ರಿನ್ಸಿಪ್ ಮತ್ತು ಡೇವಿಡ್ ಒಪೆನ್‌ಹೈಮ್ (Cornelia Principe and David Oppenheim) ನಿರ್ಮಿಸಿರುವ ಈ ಸಾಕ್ಷ್ಯಚಿತ್ರದಲ್ಲಿ 13 ವರ್ಷದ ಮಗಳನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ದುರುಳರ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವ ತಂದೆಯ ಕಥೆಯನ್ನು ಹೊಂದಿದೆ. ಈ ಸಾಕ್ಷ್ಯಚಿತ್ರವನ್ನು ಈ ಹಿಂದೆ ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2022ನಲ್ಲಿ ಪ್ರದರ್ಶಿಸಲಾಗಿತ್ತು. ಅಲ್ಲಿ ಇದು ʻಆಂಪ್ಲಿಫೈ ವಾಯ್ಸ್ ಅವಾರ್ಡ್‌ʼ (Amplify Voices Award) ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇದನ್ನೂ ಓದಿ: Oscar Nominations 2024: ಆಸ್ಕರ್ ಅವಾರ್ಡ್‌ಗೆ ನಾಮ ನಿರ್ದೇಶನ; ಓಪನ್‌ಹೈಮರ್, ಬಾರ್ಬಿ ಚಿತ್ರಗಳ ಮೇಲುಗೈ!

ಆಸ್ಕರ್ ಅವಾರ್ಡ್‌ಗೆ ನಾಮ ನಿರ್ದೇಶನ

ಗ್ರೇಟಾ ಗೆರ್ವಿಗ್ ಅವರ ಬಾರ್ಬಿ(Barbie), ಕ್ರಿಸ್ಟೋಫರ್ ನೋಲನ್ ಅವರ ಒಪೆನ್‌ಹೈಮರ್ (Oppenheimer) ಮತ್ತು ಮಾರ್ಟಿನ್ ಸ್ಕಾರ್ಸೆಸ್ ಅವರ ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ (Killers of Flower Moon) ಸೇರಿದಂತೆ 96ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಸಿಂಹಪಾಲು ಪಡೆದಿವೆ.

ಅತ್ಯುತ್ತಮ ಚಿತ್ರಗಳ ಸ್ಪರ್ಧೆಯಲ್ಲಿ ಅಮೆರಿಕನ್ ಫಿಕ್ಷನ್, ಅನಾಟಮಿ ಆಫ್ ಎ ಫಾಲ್, ಬಾರ್ಬೀ, ದಿ ಹಾಲ್ಡೋವರ್ಸ್, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್, ಮೇಸ್ಟ್ರು, ಓಪನ್ ಹೈಮರ್, ಪಾಸ್ಟ್ ಲೈವ್ಸ್, ಪ್ಯೂರ್ ಥಿಂಗ್ಸ್, ದಿ ಝೋನ್ ಆಫ್ ಇಂಟರೆಸ್ಟ್ ಸಿನಿಮಾಗಳಿವೆ.

ಇನ್ನು ನಿರ್ದೇಶಕರ ಪಟ್ಟಿಯಲ್ಲಿ ಅನಾಟಮಿ ಆಫ್ ಎ ಫಾಲ್ ಚಿತ್ರ ನಿರ್ದೇಶಕ ಜಸ್ಟೀನ್ ಟೈಟ್, ಕಿಲ್ಲರ್ಸ್ ಆಫ್ ದಿ ಮೂನ್ ಫ್ಲವರ್ ಡೈರೆಕ್ಟರ್ ಮಾರ್ಟಿನ್ ಸ್ಕಾರ್ಸೆಸೆ, ಓಪನ್‌ಹೈಮರ್ ಚಿತ್ರದ ಕ್ರಿಸ್ಟೋಫರ್ ನೋಲಾನ್, ಪ್ಯೂರ್ ಥಿಂಗ್ಸ್ ಡೈರೆಕ್ಟರ್ ಯಾರ್ಗೋಸ್ ಲ್ಯಾಂಥಿಮೋಸ್, ದಿ ಝೋನ್ ಆಫ್ ಇಂಟರೆಸ್ಟ್ ಸಿನಿಮಾ ನಿರ್ದೇಶಕ ಜೋನಾಥನ್ ಗ್ಲಾಜೆರ್ ಸ್ಪರ್ಧೆ ನಡೆಸುತ್ತಿದ್ದಾರೆ.

ಅತ್ಯುತ್ತಮ ನಟರ ಪ್ರಶಸ್ತಿಗಾಗಿ ಮೆಸ್ಟ್ರೋ ಚಿತ್ರದ ಬ್ರಾಡ್ಲೀ ಕೂಪರ್, ರಸ್ಟಿನ್ ಸಿನಿಮಾದ ಕೋಲ್ಮನ್ ಡೋಮಿಂಗೊ, ಹಾಲ್ಡೋವರ್ಸ್ ಚಿತ್ರದ ಪೌಲ್ ಗಿಯಾಮಟ್ಟಿ, ಓಪನ್ ಹೈಮರ್ ಚಿತ್ರದ ಸಿಲಿಯನ್ ಮುರ್ಫಿ, ಅಮೆರಿಕನ್ ಫಿಕ್ಷನ್ ಚಿತ್ರದ ಝೆಫ್ರಿ ರೈಟ್ ಅವರು ಸ್ಪರ್ಧೆಯಲ್ಲಿದ್ದಾರೆ.

ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ನ್ಯಾಡ್ ಚಿತ್ರದ ಅನ್ನೇಟೆ, ಕಿಲ್ಲರ್ಸ್ ಆಫ್ ಫ್ಲವರ್ ಮೂನ್ ಚಿತ್ರದ ನಾಯಕಿ ಲಿಲಿ ಗ್ಲಾಡ್‌ಸ್ಟೋನ್, ಅನಾಟಮಿ ಆಫ್ ಎ ಫಾಲ್ ಚಿತ್ರದ ಸಾಂಡ್ರಾ ಹುಲ್ಲೇರ್, ಮೆಸ್ಟ್ರೋ ಚಿತ್ರದ ಕ್ಯಾರೇ ಮಲ್ಲೀಗನ್, ಪ್ಯೂರ್ ಥಿಂಗ್ಸ್ ಸಿನಿಮಾದ ಎಮ್ಮಾ ಸ್ಟೋನ್ ಅವರು ಪೈಪೋಟಿ ನಡೆಸುತ್ತಿದ್ದಾರೆ.

ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ, ಬೆಸ್ಟ್ ಕಾಸ್ಟೂಮ್ ಡಿಸೈನ್, ಬೆಸ್ಟ್ ಮೇಕ್ ಅಪ್ ಮತ್ತು ಹೇರ್ ಸ್ಟೈಲ್, ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ, ಅತ್ಯುತ್ತಮ ಸಂಗೀತ ಸೇರಿದಂತೆ ಅನೇಕ ವಿಭಾಗಗಳಲ್ಲಿ ಹಲವು ಸಿನಿಮಾಗಳು ಸ್ಪರ್ಧೆ ಮಾಡುತ್ತಿವೆ.

Exit mobile version